ಸೆಟ್ಟೇರಿದ ಓರಿಯೋ

 ‘ಪ್ರೀತಿಯ ಲೋಕ’, ‘ಲವ್ ಇಸ್ ಪಾಯಸನ್’ ಚಿತ್ರ ನಿರ್ದೇಶಿಸಿದ್ದ ನಂದನ್ ಪ್ರಭು ಆರು ವರ್ಷದ ನಂತರ  ನಿರ್ದೇಶನಕ್ಕೆ ಮರಳಿದ್ದಾರೆ‌. ಅದುವೇ “ಓರಿಯೋ” ಚಿತ್ರದ ಮೂಲಕ. ನಾಲ್ಕು ಭಾಷೆಯಲ್ಲು ಚಿತ್ರ ಮೂಡಿ ಬರಲಿದೆ.ಮೊದಲ ಹಂತದ ಚಿತ್ರೀಕರಣ ಮಡಿಕೇರಿ, ಚಿಕ್ಕಮಗಳೂರಿನಲ್ಲಿ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

ಚಿತ್ರದ ಮುಹೂರ್ತ ಸಮಾರಂಭಕ್ಕೆ ಶಾಸಕ ಮಂಜುನಾಥ್ ಸೇರಿದಂತೆ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಈ ವೇಳೆ ಮಾತಿಗಿಳಿದ ನಿರ್ದೇಶಕ ನಂದನ್ ಪ್ರಭು, ಎಚ್ಚರ ತಪ್ಪಿದರೆ, ಮುಂದೊಂದು ದಿನ ಹೀಗೂ ಆಗಬಹುದು ಎಂಬ ಎಚ್ಚರಿಕೆಯ ಸಂದೇಶವನ್ನು ಇಡೀ ವಿಶ್ವಕ್ಕೆ ನೀಡುವ ವಿಭಿನ್ನ ಕಥಾಹಂದರ “ಓರಿಯೋ” ಚಿತ್ರದಲ್ಲಿದೆ ಎನ್ನುತ್ತಾರೆ‌. ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂರಾಷ್ಟ್ರಪತಿ ಆಗುವುದಕ್ಕಿಂತ ಮುಂಚೆ ಅವರ ಕಾರಿಗೆ ಚಾಲಕನಾಗಿದ್ದೆ.

ಅವರು ನನ್ನೊಂದಿಗೆ ಆಡುತ್ತಿದ್ದ ಮಾತುಗಳು ಈ ಕಥೆಗೆ ಸ್ಪೂರ್ತಿ ಎನ್ನುವ ವಿವರ ಅವರದು. ಪ್ರಮುಖ ಪಾತ್ರದಾರಿ ನಿತಿನ್ ಗೌಡ ಮಾತನಾಡಿ,ಪಾತ್ರ ಚೆನ್ನಾಗಿದೆ. ಅವಕಾಶ ನೀಡಿದ್ದ ನಂದನ್ ಪ್ರಭು ಅವರಿಗೆ ಧನ್ಯವಾದ ಎಂದರು. 

ನಟ ಸುಚಿತ್  “ರಥಾವರ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದೇನೆ.  ವೈರ ಹಾಗೂ ಪುಟಾಣಿ ಪಂಟರ್ ಚಿತ್ರಗಳಲ್ಲೂ ಅಭಿನಯಿಸಿದ್ದೇನೆ ಎಂದರು. ನಟಿಯರಾದ ಶುಭಿ, ಲತಾ ಹಾಗೂ ಸಂಗೀತ ನಿರ್ದೇಶಕ ಸಾಯಿಕಿರಣ್ ಚಿತ್ರದ ಬಗ್ಗೆ ಮಾತನಾಡಿದರು.  ವಿಜಯಶ್ರೀ ಆರ್ ಎಂ ಹಾಗೂ ವೈಶಾಲಿ.ವೈ.ಜೆ  ಚಿತ್ರಕ್ಕೆ ಬಂಡವಾಳ ಹಾಕಿದ್ದು. ಟಿ.ಕೃಷ್ಣಪ್ಪ ಹಾಗೂ ರೇಣುಕಾ ಪ್ರಭಾಕರ್ ಕೈ ಜೋಡಿಸಿದ್ದಾರೆ. ಬ್ಯಾಟಪ್ಪ ಗೌಡ ಛಾಯಾಗ್ರಹಣ, ಸಾಯಿಕಿರಣ್ ಸಂಗೀತ ನಿರ್ದೇಶನವಿದೆ‌.