ಸೆಟ್ಟೇರಿದ “ಅಮರ ಪ್ರೇಮಿ ಅರುಣ್”

“ಅಮರ ಪ್ರೇಮಿ ಅರುಣ್” ಚಿತ್ರ ಸೆಟ್ಟೇರಿದೆ‌. ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಆರಂಭ ಫಲಕ ಹಾಗು ನಿರ್ದೇಶಕ ಯೋಗರಾಜ್ ಭಟ್ ಕ್ಯಾಮೆರಾ ಚಾಲನೆ ಮಾಡಿದರು.ಇದೇ ವೇಳೆ ಹಲವು ನಿರ್ದೇಶಕರು ಶೀರ್ಷಿಕೆ ಅನಾವರಣ ಮಾಡಿದರು.

ಚಿತ್ರದ ಮೂಲಕ ಪ್ರವೀಣ್ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಗಿರೀಶ್ ಕಾಸರವಳ್ಳಿ , ಪ್ರವೀಣ್ ಕೂರ್ಮಾವತಾರ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಪ್ರವೀಣ್ ಕೆಲಸ ಮಾಡಿದ್ದರು.ಅವರ ಶ್ರದ್ಧೆ. ಆ ಶ್ರದ್ಧೆ ಅವರನ್ನು ಎತ್ತರಕ್ಕೆ ಕೊಂಡೊಯ್ಯಲಿ ಎಂದರು.

ನಿರ್ದೇಶಕರಾದ ಬಿ.ಸುರೇಶ್‌, ಯೋಗರಾಜ್ ಭಟ್ ನಿರ್ದೇಶಕ ಪ್ರವೀಣ್ ಅವರ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು

ಈ ವೇಳೆ ಯೋಗರಾಜ್ ಭಟ್ಟರು ʼಇತರರೊಂದಿಗೆ ಕತೆಗಳು ಮತ್ತು ಸಿನಿಮಾಗಳನ್ನು ಚರ್ಚಿಸುವ ಮತ್ತು ಅನಿಸಿಕೆಗಳನ್ನು ಸ್ವೀಕರಿಸುವ ಗುಣ ಚೆನ್ನಾಗಿದೆ ಪ್ರವೀಣನಿಗೆ.ಸಾಹಿತ್ಯದ ಅಭಿರುಚಿ ಇರುವ ಅವನು ಒಳ್ಳೊಳ್ಳೆಯ ಸಿನಿಮಾಗಳನ್ನು ಕೊಡಲಿ. ತಂಡಕ್ಕೆ ಶುಭವಾಗಲಿʼ ಎಂದರು

ನಿರ್ದೇಶಕ ಪ್ರವೀಣ್ ಕುಮಾರ್, ಇದು ಬಳ್ಳಾರಿ ಜಿಲ್ಲೆಯಲ್ಲಿ ನಡೆಯುವ ಕಥೆ.‌ ಹಾಗಾಗಿ ನಮ್ಮ ಚಿತ್ರದ ಎಲ್ಲಾ ಕಲಾವಿದರು ಆ ಪ್ರಾಂತೀಯ ಭಾಷೆಯನ್ನು ಅಭ್ಯಾಸ ಮಾಡುತ್ತಿದ್ದಾರೆ.

ಬಳ್ಳಾರಿಯ ಪ್ರಾದೇಶಿಕತೆ ತೋರಿಸುತ್ತಾ, ಪ್ರೇಮಕಥೆ ಹೇಳುವ ಒಂದು ಪ್ರಯತ್ನ. ರೊಮ್ಯಾಂಟಿಕ್ ಕಾಮಿಡಿ ಜಾನರ್‌ನ ಚಿತ್ರ ಅನ್ನಬಹುದು. ಯುಗಾದಿ ಆದ ಮೇಲೆ ಚಿತ್ರೀಕರಣ ಆರಂಭವಾಗಲಿದೆ ಎಂದು ತಿಳಿಸಿದರು.

ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್, ಐದು ಹಾಡುಗಳಿದ್ದು, ಈಗ ಕೆಲಸ ಆರಂಭಿಸಿದ್ದೇನೆ ಎಂದರು. ಛಾಯಾಗ್ರಾಹಕ ಪ್ರವೀಣ್ ಎಸ್, ಊರಿಂದ ಮತ್ತೊಂದು ಊರಿಗೆ ಹೋಗುವಾಗ ಪಾಸಿಂಗ್ ನಲ್ಲಿ ಬಳ್ಳಾರಿ ನೋಡಿರುತ್ತೇವೆ.‌ ಆದರೆ ಇದರಲ್ಲಿ ನಾವು ನೋಡಿರದ ಬಳ್ಳಾರಿಯನ್ನು ತೋರಿಸುವ ಪ್ರಯತ್ನ ಮಾಡುತ್ತೇನೆ ಎನ್ನುವುದು ಅವರ‌ಅನಿಸಿಕೆ

ಕಹಿ ಚಿತ್ರದಲ್ಲಿ ಅಭಿನಯಿಸಿದ್ದ ಹರಿಶರ್ವಾ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ದೀಪಿಕಾ ಆರಾಧ್ಯ ಹಾಗೂ ಭೂಮಿಕ ರಘು ಕೂಡ ತಮ್ಮ ಪಾತ್ರದ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದರು. ಧರ್ಮಣ್ಣ, ಮಹೇಶ್ ಬಂಗ್, ಸುಶ್ಮಿತಾ ಮತ್ತಿತರಿದ್ದಾರೆ. ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಚಿತ್ರದ ಹಾಡುಗಳನ್ನು ಬರೆಯುತ್ತಿದ್ದಾರೆ.