ಸೆಕ್ಯೂರಿಟಿ ಗಾರ್ಡ್ ಗಣಿತದಲ್ಲಿ ಎಂಎಸ್‌ಸಿ ಪದವಿ

ಜಬಲ್ ಪುರ,ನ.೨೮- ಜಬಲ್‌ಪುರದ ೫೬ ವರ್ಷದ ಸೆಕ್ಯೂರಿಟಿ ಗಾರ್ಡ್ ರಾಜ್‌ಕರನ್ ಬರೌವಾ ಅವರು ೨೫ ವರ್ಷಗಳ ಪರಿಶ್ರಮದ ನಂತರ ಗಣಿತದಲ್ಲಿ ಎಂಎಸ್‌ಸಿ ಪಡೆಯುವ ಕನಸನ್ನು ನನಸಾಗಿಸಿ ಕೊಂಡಿದ್ದಾರೆ.
ಎಂಎಸ್ ಸಿ ಪದವಿ ಪಡೆಯಲು ಸತತ. ೨೩ ವೈಫಲ್ಯ ಎದುರಿಸುತ್ತಿದ್ದರೂ, ರಾಜ್‌ಕರನ್ ಎಂದಿಗೂ ಛಲ ಬಿಡಲಿಲ್ಲ ಮತ್ತು ಡಬಲ್ ಶಿಫ್ಟ್‌ಗಳಲ್ಲಿ ಮಾಡಿದರೂ ಸಾಧಿಸುವ ಹಠದೊಂದಿಗೆ ಪ್ರಯತ್ನ ಮಾಡಿ ಕೊನೆಗೂ ಎಂಎಸ್‌ಸಿ ಪದವಿ ಪಡೆದಿದ್ದಾರೆ.
ಕೆಲಸ ಮಾಡುವಾಗ ಓದುವ ಮತ್ತು ಎಂಎಸ್‌ಸಿ ಮಾಡುವ ಉತ್ಸಾಹ ಕಡಿಮೆಯಾಗಿರಲಿಲ್ಲ ಅದುವೇ ಈ ಸಾಧನೆಗೆ ಕಾರಣ ಎಂದು ಹೇಳಿದ್ದಾರೆ.
ಪುಸ್ತಕ ಮತ್ತು ಪರೀಕ್ಷಾ ಶುಲ್ಕಕ್ಕಾಗಿ ಸುಮಾರು ೨ ಲಕ್ಷ ರೂಪಾಯಿ ಖರ್ಚು ಮಾಡಿದ ರಾಜ್‌ಕರನ್, ಉದ್ಯೋಗದಾತರಿಗೆ ಮುಜುಗರವಾಗದಂತೆ ಸದ್ದಿಲ್ಲದೆ ತಮ್ಮ ಸಾಧನೆಯನ್ನು ಸಾಧನೆ ಮಾಡಿದ್ದಾರೆ.
ಮನೆ, ಕುಟುಂಬ, ಉಳಿತಾಯ ಅಥವಾ ಸ್ಥಿರವಾದ ಕೆಲಸವಿಲ್ಲ. ಆದರೂ ಪದವಿ ಪಡೆಯಬೇಕು ಎನ್ನುವ ಹಂಬಲ ೨೫ ವರ್ಷದ ನಂತರ ಸಾಧನೆ ಮಾಡಲು ಸ್ಪೂರ್ತಿಯಾಗಿದೆ ಎಂದಿದ್ದಾರೆ.