ಸೆಕೆಂಡ್ ಲೈಫ್ ಟ್ರೈಲರ್ ಬಿಡುಗಡೆ

ವೈದ್ಯಕೀಯ ಹಿನ್ನೆಲಯನ್ನು ಆದಾರವಾಗಿಟ್ಟುಕೊಂಡು ಮಾಡಿದ ಚಿತ್ರ  ಸೆಕೆಂಡ್ ಲೈಫ್.  ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆಗೆ ಸಜ್ಜಾಗಿದೆ.

ಕನ್ನಡ ,ತೆಲುಗು ಮತ್ತು ತಮಿಳು ಭಾಷೆಯಲ್ಲಿ ” ಸಿದ್ದಗೊಂಡಿದ್ದು ವಿತರಕರೊಂದಿಗೆ ಚರ್ಚೆ ನಡೆಸಿ ಬಿಡುಗಡೆಯ ದಿನಾಂಕ‌ ಪ್ರಕಟಿಸಲು ಚಿತ್ರತಂಡ ಮುಂದಾಹಿದೆಮ

ಆದರ್ಶ್ ಗುಂಡೂರಾಜ್  ಮತ್ತು ಸಿಂಧೂ ರಾವ್ ನಾಯಕ, ನಾಯಕಿಯಾಗಿ  ಕಾಣಿಸಿಕೊಂಡಿರುವ ಚಿತ್ರಕ್ಕೆ  ರಾಜು ದೇವಸಂದ್ರ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆ ಇತ್ತು. ಈ ವೇಳೆ ತಂಡ  ಮಾಹಿತಿ ಹಂಚಿಕೊಂಡಿತು.

ಈ ವೇಳೆ ಮಾತಿಗಿಳಿದ ನಿರ್ದೇಶಕ ರಾಜು ದೇವಸಂದ್ರ, ಬೆಂಗಳೂರಯ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ. ಸ್ಟೆಮ್ ಸೆಲ್, ವೈದ್ಯಕೀಯ ಹಿನ್ನೆಲೆ ಸೇರಿದಂತೆ ಮತ್ತಿತರು ಕುತೂಹಲಕಾರಿ ಅಂಶಗಳನ್ನು ಪ್ರಧಾನವಾಗಿರಿಸಿಕೊಂಡು ಚಿತ್ರ ಮಾಡಲಾಗಿದೆ. ಚಿತ್ರ ಎಲ್ಲರಿಗೂ ಇಷ್ಡವಾಗಲಿದೆ ಎನ್ನಯವ ವಿಶ್ವಾಸ ಅವರದು. ಚಿತ್ರದಲ್ಲಿ ಹಿಂಸೆ ಹೆಚ್ಚು ಅದನ್ನು ತುಸು ಕಡಿಮೆ ಮಾಡಿ ಚಿತ್ರ ಮಾಡಲಾಗಿದೆ. ರುದ್ರ ಮತ್ತು ಡೇವಿಡ್ ಪಾತ್ರಗಳು ಗಮನ ಸೆಳೆಯಲಿದೆ ಎಂದರು.

ನಾಯಕ ಆದರ್ಶ್ ಗುಂಡುರಾಜ್ ಮಾತನಾಡಿಣ ಸ್ವಾರ್ಥ ರತ್ನ ಚಿತ್ರದ ಬಳಿಕ ಎರಡನೇ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದೇನೆ. ಮೂರು ಭಾಷೆಯಲ್ಲಿ ಚಿತ್ರ ತಯಾರಾಗಿದ್ದು ಏಕ ಕಾಲಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶವಿದೆ. ವಿತರಕರ ಜೊತೆ ಚರ್ಚೆ ನಡೆಸಿದ ಬಳಿಕ ಈ ಬಗ್ಗೆ ಗೊತ್ತಾಗಲಿದೆ.‌ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎನ್ನುವ ವಿವರಣೆ ಅವರದು.

ನಟಿ ಸಿಂದೂ ರಾವ್, ಕೊವಿಡ್ ಸೋಂಕಿನ ಎರಡನೇ ಅಲೆಯಲ್ಲಿ ಚಿತ್ರೀಕರಣ ಮಾಡಿದ್ದು ಕಥೆ ಚೆನ್ನಾಗಿದೆ‌.ಕುರುಡಿಯ ಪಾತ್ರ ಮಾಡಿದ್ದೇನೆ ಎಂದರು. ನಿರ್ಮಾಪಕ ರಮೇಶ್ ಖೈರಾ ಬಂಡವಾಳ ಹಾಕಿದ್ದು ನಿರ್ಮಾಣದಲ್ಲಿ  ಶಿವ ಪ್ರದೀಪ್,ರುದ್ರಮುನಿ ಕೈಜೋಡಿಸಿದ್ದು ಚಿತ್ರದಲ್ಲಿ ಪಾತ್ರ ಕೂಡ ಮಾಡಿದ್ದು ಚಿತ್ರ ಚೆನ್ನಾಗಿ ಮೂಡಿಬಂದಿದೆ ಸಹಕಾರವಿರಲಿ ಎಂದರು. ಅರವ್ ರಿಷಿಕ್ ಸಂಗೀತ ಚಿತ್ರಕ್ಕಿದೆ.