
ಕಲಬುರಗಿ,ಆ.27-ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ಯುವಕನೊಬ್ಬ ಮೃತಪಟ್ಟ ಘಟನೆ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾವರಗೇರಾ ಗ್ರಾಮದಲ್ಲಿ ನಡೆದಿದೆ.
ಸುನೀಲ ಶಿವಕುಮಾರ ಸಿಂದಗಿ ಮೃತಪಟ್ಟ ಯುವಕ.
ಗ್ರಾಮದಲ್ಲಿ ಖುರಷಿದ ಪಟೇಲ್ ಅವರು ಮನೆ ನಿರ್ಮಿಸುತ್ತಿದ್ದು, ವಾಜೀದ್ ಪಟೇಲ್ ಎಂಬುವವರು ಮನೆ ನಿರ್ಮಾಣಕಾರ್ಯವನ್ನು ಗುತ್ತಿಗೆ ಹಿಡಿದಿದ್ದಿ, ಇಮ್ರಾನ್ ರಸೂಲಸಾಬ್ ಎಂಬುವವರು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾರೆ. ಇವರ ಬಳಿ ಸುನೀಲ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ. ಕಬ್ಬಿಣದ ರಾಡ್ ಕತ್ತರಿಸುವಾಗ ವಿದ್ಯುತ್ ವೈರ್ ಕೈಗೆ ತಗುಲಿ ಸುನೀಲ ಮೃತಪಟ್ಟಿದ್ದು, ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಇರುವುದರಿಂದ ವಿದ್ಯುತ್ ತಗುಲಿ ತಮ್ಮ ಮಗನ ಸಾವಿಗೆ ಮನೆಯ ಮಾಲಿಕ ಖುರಷಿದ ಪಟೇಲ್, ಗುತ್ತಿಗೆದಾರ ವಾಜೀದ್ ಪಟೇಲ್ ಮತ್ತು ಸೆಂಟ್ರಿಂಗ್ ಕೆಲಸ ಹಿಡಿದಿರುವ ಇಮ್ರಾನ್ ರಸೂಲ್‍ಸಾಬ್ ಕಾರಣರಾಗಿದ್ದಾರೆ ಎಂದು ಶಿವಕುಮಾರ ಸಿಂದಗಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.