ಸೆಂಟ್ರಲ್ ಮಾಲ್‍ನಲ್ಲಿ ವ್ಯಾಪಾರ ಉತ್ಸವ ಆರಂಭ

ಕಲಬುರಗಿ,ಜ.12-ನಗರದ ಕೇಂದ್ರ ಬಸ್ ನಿಲ್ದಾಣ ಸಮೀಪದ ಸೆಂಟ್ರಲ್ ಮಾಲ್‍ನಲ್ಲಿ ಮೂರು ದಿನಗಳ (ಜ.12 ರಿಂದ 15) ವ್ಯಾಪಾರ ಉತ್ಸವಕ್ಕೆ ಇಂದು ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ಆರ್.ಐ.ಎಫ್.ಎ.ಹೆಚ್.ನ ರಾಜ್ಯಾಧ್ಯಕ್ಷ ಸೈಯದ್ ಮುಮ್ತಾಜ್, ರಾಜ್ಯ ಕಾರ್ಯದರ್ಶಿ ಅಫ್ಜಲ್ ಬೇಗ್, ಅಮೀರ್-ಇ-ಹಲ್ಕನ್ ಡಾ.ಬೆಲಗಾಮಿ ಮಹ್ಮದ್ ಸಾದ್, ಅಮೀರ್-ಇ-ಜಮಾತ್ ಹಿಂದ್‍ನ ಸಾದತುಲ್ಲಾ ಹುಸೇನಿ, ಆರ್.ಐ.ಎಫ್.ಎ.ಹೆಚ್.ನ ಅಧ್ಯಕ್ಷ ಅಮೀನುಲ್ ಹಸನ್, ಟರ್ಕಿಯಿಂದ ಆಗಮಿಸಿದ್ದ ಮಹ್ಮದ್ ಮುಸ್ತಫಾ ಅವರು ವ್ಯಾಪಾರ ಉತ್ಸವಕ್ಕೆ ಚಾಲನೆ ನೀಡಿದರು.
ಮಹ್ಮದ್ ಅಹೆಮದ್ ಅಲಿ, ಹಫಿಜುಲ್ಲಾ, ಮಹ್ಮದ್ ಜುಲ್ಫಿಕರ್ ಅಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಶಿಕ್ಷಣ, ಆಹಾರ, ಗೃಹಬಳಕೆ, ಫ್ಯಾಶನ್, ಬ್ಯಾಗ್ ಮತ್ತು ಶೂ, ಸ್ಟೇಷನರಿ, ಗಿಫ್ಟ್, ಹರ್ಬಲ್, ಕಟ್ಟಡ ನಿರ್ಮಾಣ, ಕೈಗಾರಿಕೆ, ಕೃಷಿಗೆ ಸಂಬಂಧಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ.
ವ್ಯಾಪಾರ ಮೇಳದ ಅಂಗವಾಗಿ ಮೂರು ದಿನಗಳ ಕಾಲ ಅಲ್ಲದೆ ಮೂರುದಿನಗಳ ಕಾಲ ಸ್ಟಾರ್ಟಅಫ್ ಮತ್ತು ಸ್ಕಿಲ್ ಅಪ್, ಬಿಸಿನೆಸ್ ನೆಟವರ್ಕಿಂಗ್, ಮಹಿಳಾ ಉದ್ಯಮ ಶೀಲತೆ, ಅಂತರಾಷ್ಟ್ರೀಯ ವ್ಯಾಪಾರ ಇತ್ಯಾದಿ ವಿಷಯಗಳ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ.
ನಗರದ ನಾಗರಿಕರು ಈ ಮೂರುದಿನಗಳ ವ್ಯಾಪಾರ ಉತ್ಸವದ ಸದುಪಯೋಗ ಪಡೆದುಕೊಳ್ಳುವಂತೆ ಉತ್ಸವದ ಆಯೋಜಕರು ಮನವಿ ಮಾಡಿದ್ದಾರೆ.