ಸೆಂಟಿಮೆಂಟ್ ಆರಾಧ್ಯ

ಅಪ್ಪ- ಮಗಳ ಸೆಂಟೆಮೆಂಟ್ ಮುಂದಿಟ್ಟುಕೊಂಡು ಕಲಾವಿದ ಕಮ್ ಪತ್ರಕರ್ತ ಯತಿರಾಜ್ ಇದೀಗ ಹೊಸ ಪ್ರಯತ್ನ ಮಾಡಿದ್ದಾರೆ. ಅದುವೇ “ಆರಾಧ್ಯ.” ಯತಿರಾಜ್ ಆಕ್ಷನ್ ಕಟ್ ಹೇಳಿ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.ಆರಾಧ್ಯ ಕಣ್ಣಂಚಲ್ಲಿ ನೀರು ತರಿಸುವ ಕಿರುಚಿತ್ರವಾಗಿದೆ.
ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ಯತಿರಾಜ್ ನಿರ್ದೇಶನದ ಹದಿನೆಂಟನೇ ಕಿರುಚಿತ್ರ ” ಆರಾಧ್ಯ. ಕಿರುಚಿತ್ರ ಪ್ರದರ್ಶನದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ನಟ,ನಿರ್ದೇಶಕ ಯತಿರಾಜ್,
ಹಲವು ವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಆದರಲ್ಲಿಯೀ “ಆರಾಧ್ಯ ತುಂಬಾ ಮನಸ್ಸಿಗೆ ಹತ್ತಿರವಾಯಿತು.ಮನೆಯಲ್ಲಿ ತಂದೆಗೆ ಜವಾಬ್ದಾರಿ ಇಲ್ಲದೇ ಇದ್ದಾಗ, ಮಕ್ಕಳಿಗೆ ಯಾವ ರೀತಿ ತೊಂದರೆಯಾಗುತ್ತದೆ ಎಂಬುದನ್ನು ಹೇಳುವುದೇ ಇದರ ಸಾರ ಎಂದರು. ನಮ್ಮ ಈ ಪ್ರಯತ್ನವನ್ನು ನಿಮಗೆ ತೋರಿಸುವ ಹಂಬಲವಾಯಿತು. ನಿಮ್ಮ ಮುಂದೆ ತಂದಿದ್ದೇವೆ. ಚಿತ್ರದಲ್ಲಿ ನಾನು, ಬೇಬಿ ಆರಾಧ್ಯ, ಅಂಜಲಿ, ಹಾಗೂ ಶಾಂತಕುಮಾರ್ ಅಭಿನಯಿಸಿದ್ದೇವೆ ಎಂದು ವಿವರ ನೀಡಿದರು. ಮೂರು ಕಿರುಚಿತ್ರಗಳಲ್ಲಿ ನಟಿಸಿದ್ದೇನೆ. ಅದರಲ್ಲಿ ಎರಡು ಯತಿರಾಜ್ ಅವರ ಜೊತೆ. ನಮ್ಮ ಕಿರುಚಿತ್ರ ನೋಡಿ ಹರಸಿ ಎಂದರು ಬೇಬಿ ಆರಾಧ್ಯ.ಅಂಜಲಿ, ಶಾಂತಕುಮಾರ್ ಛಾಯಾಗ್ರಾಹಕ ಹಾಗೂ ಸಂಕಲನಕಾರ ಜೀವನ್ ಕಿರುಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಹಿರಿಯ ನಿರ್ದೇಶಕ “ಗೆಜ್ಜೆನಾದ” ವಿಜಯಕುಮಾರ್, ಪತ್ರಿಕಾ ಸಂಪರ್ಕಾಧಿಕಾರಿ ವೆಂಕಟೇಶ್ ಮತ್ತಿತರು ತಂಡಕ್ಕೆ ಶುಭ ಕೋರಿದರು.
ಜೀವನ್ ಛಾಯಾಗ್ರಹಣ, ವಿನುಮನಸು ಸಂಗೀತ ನಿರ್ದೇಶನ ಕಿರುಚಿತ್ರಕ್ಕಿದೆ.