“ಸೆಂಟಪೌಲ ಮೇಥೋಡಿಸ್ಟ ಚರ್ಚನ ಮುಖ್ಯದ್ವಾರ (ಕಮಾನು)” ಉದ್ಘಾಟನೆ

ಬೀದರ:ಜ.7: ನಗರದ ವಾರ್ಡ ನಂ 11 ಶಾಹಗಂಜ ಜನವಾಡ ರಸ್ತೆ ರಾಜೀವ ಗಾಂಧಿ ಚೌಕ ಹತ್ತಿರ ನಿರ್ಮಿಸಿರುವ “ಸೆಂಟಪೌಲ ಮೇಥೋಡಿಸ್ಟ ಚರ್ಚನ ಮುಖ್ಯದ್ವಾರಕ್ಕೆ (ಕಮಾನು)” ಉದ್ಘಾಟನ ಸಮಾರಂಭ ಏರ್ಪಡಿಸಲಾಯಿತು. ಈ ಮುಖ್ಯ ದ್ವಾರದ (ಕಮಾನಿನ) ಉದ್ಘಾಟಕರಾಗಿ ಸನ್ಮಾನ್ಯ ಶ್ರೀ ಹೆಚ್.ಡಿ ಕುಮಾರ ಸ್ವಾಮಿ ಮಾಜಿ ಮುಖ್ಯ ಮಂತ್ರಿಗಳು ಕರ್ನಾಟಕ ಸರಕಾರ ಮತ್ತು ಮುಖ್ಯಥಿತಿಯಾಗಿ ಶ್ರೀ ಮಾನ್ಯ ಬಂಡೆಪ್ಪಾ ಖಾಶೆಂಪೂರ ಮಾಜಿ ಸಚಿವರು ಹಾಗೂ ಹಾಲಿ ಶಾಸಕರು ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷತೆಯು ಶ್ರೀಮತಿ ದ್ರೌಪತಿ ಕಾಳೆ ನಗರಸಭೆ ಸದಸ್ಯರು ವಾರ್ಡ ನಂ11 ವಹಿಸಿಕೊಂಡಿದರು.

ಈ ಕಾರ್ಯಕ್ರಮದ ಸಂಪೂರ್ಣ ಆಯೋಜನೆ ಶ್ರೀ ಅಭಿಕಾಳೆ ಬೀದರ ಜಿಲ್ಲಾ ಜನತಾದಳ (ಜಾತ್ಯತೀತ) ಜಿಲ್ಲಾಧ್ಯಕ್ಷರು (ವಿದ್ಯಾರ್ಥಿ ಘಟಕ) ವಹಿಸಿಕೊಂಡರು. ಹಾಗೂ ಈ ಕಾರ್ಯಕ್ರಮದಲ್ಲಿ ಶ್ರೀ ಜಿ.ಎಮ್. ಕ್ರಿಷ್ಟಫೋರ, ಶಿವಕುಮಾರ ಡಿ.ಕೆ., ಅರುಣವರ್ಮಾ ರಾಜ. ಡಿ, ಸಿಮನಕಾಳೆ, ಲೋಕೇಶ ಕಾಳೆ, ದಾವಿದ, ಸಂಜು, ಜಾನ, ಲೋಕೇಶ ಇತರರು ಉಪಸ್ಥಿತರಿದ್ದರು.