ಸೆಂಟನರಿ ಹಾಲ್ ನಲ್ಲಿ ಫೀವರ್ ಕ್ಲಿನಿಕ್ ಆರಂಭ

ಬಳ್ಳಾರಿ ಏ 21 : ನಗರದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವುದರಿಂದ ಜನರಿಗೆ ಈ ಬಗ್ಗೆ ತಪಾಸಣೆ ಮಾಡಿಸಿಕಳ್ಳಲು ಅನುಕೂಲವಾಗುವಂತೆ ಇಲ್ಲಿನ ಗಾಂಧಿನಗರ ಪೆÇಲೀಸ್ ಠಾಣೆ ಪಕ್ಕದ ಸೆಂಟಿನರಿ ಹಾಲ್ ನಲ್ಲಿ ಇಂದಿನಿಂದ ಫೀವರ್ ಕ್ಲೀನಕ್ ಆರಂಭ ಮಾಡಿದೆ.
ಆರೋಗ್ಯ ಇಲಾಖೆ ಮತ್ತು ನಗರದ ಸರಗಕಾರಿ ಆಯುರ್ವೇದ ಕಾಲೇಜಿನ ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಮತ್ತು 2 ರಿಂದ ಸಂಜೆ 4 ಗಂಟೆ ವರೆಗೆ ಕೋವಿಡ್ ಟೆಸ್ಟ್ ಮಾಡಲಿದೆ ಜನತೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ.ರಾಜಶೇಖರ ಗಾಣಿಗೇರ ತಿಳಿಸಿದ್ದಾರೆ.