ಸೃಜಶೀಲ ಬಹುಮುಖ ಪ್ರತಿಭೆಯ ಚಿತ್ರ ಕಲಾವಿದ ಮರಿಗೌಡ್ರ

ಬಾದಾಮಿ,ಡಿ20; ಕಲೆ ಎಲ್ಲರನ್ನು ಕೈಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದಕ್ಕೆ ತಾಲೂಕಿನ ಪಟ್ಟದಕಲ್ಲ ಗ್ರಾಮದ ಕಳಕನಗೌಡ ಮರಿಗೌಡ್ರ ಸಾಕ್ಷಿಯಾಗಿದ್ದಾರೆ.
ಐತಿಹಾಸಿಕ ಶಿಲ್ಪಕಲೆಯ ತೊಟ್ಟಿಲು ಪಟ್ಟದಕಲ್ಲ ಗ್ರಾಮದ ದೇವಸ್ಥಾನದ ವಿಗ್ರºಗÀಳನ್ನು, ದೇವಸ್ಥಾನದ ನೋಡಿ ಆಕರ್ಷಿತರಾಗಿ ಈ ಚಿತ್ರಕಲಾ ಕ್ಷೇತ್ರಕ್ಕೆ ಬಂದಿರುವ ಕಳಕನಗೌಡ ಮರಿಗೌಡ್ರ ಇವರು ಪಟ್ಟದಕಲ್ಲ ಗ್ರಾಮದವರಾಗಿದ್ದು, ತಮ್ಮ ಮೂವರು ಜನ ಸಹೋದರರೊಂದಿಗೆ ಚಿಕ್ಕಂದಿನಿಂದಲೂ ಕಲೆಯಲ್ಲಿನ ಆಸಕ್ತಿಯಿಂದ ಮೂರ್ತಿ ಕೆತ್ತನೆಯಲ್ಲಿ ನಿರತರಾಗಿದ್ದಾರೆ. ಇವರು ಪ್ರಾಥಮಿಕ ಶಿಕ್ಷಣವನ್ನು ಪಟ್ಟದಕಲ್ಲ ಗ್ರಾಮದಲ್ಲಿ, ನಂತರ ಕಟಾಪೂರ ಗ್ರಾಮದಲ್ಲಿ ಮಾಧ್ಯಮಿಕ ಶಿಕ್ಷಣ ಪಡೆಯುತ್ತಿದ್ದಾಗ ಚಿತ್ರಕಲಾ ಶಿಕ್ಷಕ ಐ.ಬಿ.ಬಡಿಗೇರ ಅವರ ಮಾರ್ಗದರ್ಶನದಲ್ಲಿ ಚಿತ್ರಕಲೆಗೆ ಮಾರುಹೋಗಿ ಅವರ ಜೀವನದಲ್ಲಿ ಕಲೆ ಹಾಸುಹೊಕ್ಕಾಗಿ ಮಾಡಿತು. ನಂತರ ಬಾದಾಮಿ ನಗರದ ಚಾಲುಕ್ಯ ಚಿತ್ರಕಲಾ ಮಹಾವಿದ್ಯಾಲಯದಲ್ಲಿ 3 ವರ್ಷದ ಅಧ್ಯಯನ ಮಾಡಿ, ನಂತರ ಸ್ನಾತಕೋತ್ತರ ಪದವಿಯನ್ನು ಹಂಪಿ ವಿವಿ ಬನಶಂಕರಿ ಕೇಂದ್ರದಲ್ಲಿ ಪಡೆದರು. ಇಲ್ಲಿ ಅಧ್ಯಯನ ಮಾಡುವ ಮೂಲಕ ಪೇಂಟಿಂಗ್ ಮಾಡುವುದು, ಶಿಲ್ಪಗಳನ್ನು ಮಾಡುವುದು, ಸೃಜನಶೀಲತೆಯನ್ನು ಮಾಡುವುದನ್ನು ಕಲೆತರು. ಇದಾದ ನಂತರ ಹುಬ್ಬಳ್ಳಿ ನಗರದ ಚಿಟಗುಬ್ಬಿ ಮಹಾವಿದ್ಯಾಲಯದಲ್ಲಿ ಮಾಸ್ಟರ್ ಪದವಿಯನ್ನು ಪೇಂಟಿಂಗ್ ನಲ್ಲಿ ಅಧ್ಯಯನ ಮಾಡಿದ, ನಂತರ ಕಾರ್ಕಳದ ಕೆನರಾ ಬ್ಯಾಂಕ್ ಆಶ್ರಯದಲ್ಲಿ ಸಿ.ಇ.ಕಾಮತ್ ಎಂಬ 18 ತಿಂಗಳ ತರಬೇತಿಯನ್ನು ಮುಗಿಸಿ ವೃತ್ತಿ ಜೀವನ ಆರಂಭಿಸಿದರು. ಇಲ್ಲಿ ಬೇರೆ ಬೇರೆ ಮಾಧ್ಯಮ ಶಿಲ್ಪಗಳನ್ನು ಮಾಡತೊಡಗಿದರು. ಫೈಬರ್, ಕಂಚು ಹಾಗೂ ಕಲ್ಲು ಇವು ಮೂರು ಮಾಧ್ಯಮದಲ್ಲಿ ಕೆಲಸ ಮಾಡತೊಡಗಿದರು. ಈ ಸಮಯದಲ್ಲಿ ಒಂದು ಬೃಹತ್ತಾದ 22 ಅಡಿ ಎತ್ತರದ ಕಾರವಾರ ಶಿಲ್ಪನಕ್ಷೆಯನ್ನು ತಯಾರಿಸಿದರು. ಆ ವಿಗ್ರಹ ಪೈಬರ ಮಾಧ್ಯಮವಾಗಿದ್ದು, ಇದನ್ನು ಕಾರವಾರದ ರವಿಂದ್ರನಾಥ ಬಾಗೂರ ಬೀಚ್ ದಡದಲ್ಲಿ ಪ್ರತಿಷ್ಟಾಪನೆ ಮಾಡಲಾಗಿದೆ. ನಂತರ 3ವರೆ ಅಡಿ ಎತ್ತರದ ಕಂಚಿನ ಪುಟ್ಟರಾಜ ಗವಾಯಿಗಳ ವಿಗ್ರಹ ತಯಾರಿಸಿ ಹಂಸನೂರ ಗ್ರಾಮದವರಿಗೆ ಕೊಡಲಾಗಿದೆ. 6ವರೆ ಅಡಿ ಎತ್ತರದ ಸಂಗೊಳ್ಳಿ ರಾಯಣ್ಣ ವಿಗ್ರಹ ತಯಾರಿಸಿ ಬಾದಾಮಿ ತಾಲೂಕಿನ ಮಲ್ಲಾಪೂರ, ಕಾತರಕಿ ಗ್ರಾಮದವರಿಗೆ ನೀಡಲಾಗಿದೆ. ಕಂಚು, ಪೈಬರ ಮತ್ತು ಕಲ್ಲಿನಲ್ಲಿ ಅನೇಕ ಮೂರ್ತಿಗಳನ್ನು ಕೆತ್ತನೆ ಮಾಡಿ ಬಾಗಲಕೋಟ, ಗದಗ,ಕೊಪ್ಪಳ, ವಿಜಯಪೂರ ಜಿಲ್ಲೆಯ ಅನೇಕ ಗ್ರಾಮ, ನಗರಗಳಿಗೆ ನೀಡಿದ್ದಾರೆ. ಕಲ್ಲಿನಲ್ಲಿ ಕಂಚಿನಲ್ಲಿ ನಂದಿ, ದೇವರ ವಿಗ್ರಹಗಳನ್ನು, ಬಾಗಿಲು ಚೌಕಟ್ಟುಗಳನ್ನು ಕಂಚು, ಮಣ್ಣಿನಲ್ಲಿ ಮಾಡಿ ನಂತರ ಮೋಡ್(ಅಚ್ಚು ತೆಗೆದು) ಪೈಬರಗಳಲ್ಲಿ ಅಥವಾ ಕಂಚಿಗೆ ಪಡಿಯಚ್ಚು ವರ್ಗಾವಣೆ ಮಾಡಿ, ವಿವಿದ ಮೂರ್ತಿಗಳನ್ನು ತಯಾರಿಸಿಕೊಡುತ್ತಾರೆ.
ಸುಮಾರು 13 ವರ್ಷಗಳಿಂದ ಚಿತ್ರಕಲೆಯನ್ನೇ ನಂಬಿ ಇದರಿಂದ ಬಂದ ಆದಾಯದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಕಲೆಯನ್ನು ನಂಬಿ ಮುನ್ನುಗ್ಗುತ್ತಿದ್ದಾರೆ.