ಸೃಜನಶೀಲ ಸಾಹಿತಿ ಹವಾಲ್ದಾರ್:ಶಿವಾನಂದ ಪಾಟೀಲ

ವಿಜಯಪುರ :ಎ.4: ನಗರದ ಸೂರಜ ಹಾಲ್ ನಲ್ಲಿ ಜರುಗಿದ ಮಹಮ್ಮದಗೌಸ್ ಹವಾಲ್ದಾರ್ ಅವರು ಬರೆದ ಕಲ್ಯಾಣ ದರ್ಪಣ ಗ್ರಂಥ ಬಿಡುಗಡೆ ಕಾರ್ಯಕ್ರಮ ಉದ್ಘಟಿಸಿ ಮಾತನಾಡಿದ ಶಾಸಕ ಶಿವಾನಂದ ಪಾಟೀಲ ಮಹಮ್ಮದಗೌಸ ವೃತ್ತಿಯಿಂದ ವಕೀಲರು ಪ್ರವೃತ್ತಿಯಿಂದ ಸೃಜನಶೀಲ ಬರಹಗಾರರು. ಹನ್ನೆರಡನೆಯ ಶತಮಾನದ 21 ಶಿವಶರಣರ ಜೀವನ ಚರಿತ್ರೆ ಮತ್ತು ಅವರ ವಚನಗಳ ಆಳವನ್ನು ಬರೆದ ಗೌಸ್ ಅವರಿಗೆ ಅಭಿನಂದನೆಗಳು ಇವರ ತಂದೆ ರಶೀದ್ ಹಳ್ಳಿಯಲ್ಲಿ ಕೋಮು ಸೌಹಾರ್ದ ದಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿ, ಅವರ ಸಂಸ್ಕಾರ ಮಗನಿಗೆ ಸಹಜವಾಗಿ ಬಂದಿದೆ ಪವಿತ್ರ ರಂಜಾನ ತಿಂಗಳಲ್ಲಿ ಬಿಡುಗಡೆಯಾಗುತ್ತಿರುವ ಕಲ್ಯಾಣ ಶರಣರ ಹನ್ನೆರಡನೆಯ ಶತಮಾನದ ಜಾತ್ಯಾತೀತ ಸಮಾಜ ನಿರ್ಮಾಣದ ಕಾರ್ಯ ಇಂದು ಮಹಮ್ಮದಗೌಸ್ ಮಾಡುತ್ತಿರುವದು ಬಹಳ ಸಂತೋಷ ತಂದಿದೆ, ಇವರೊಬ್ಬ ಸೃಜನಶೀಲ ಸಾಹಿತಿ ಎಂದರು.
ಗ್ರಂಥ ಲೋಕಾರ್ಪಣೆ ಮಾಡಿದ ಹಿರಿಯ ಸಾಹಿತಿ ಜಂಬುನಾಥ ಕಂಚಾಣಿ ಅವರು ಮಾತನಾಡಿ ಬಸವಣ್ಣ ಮತ್ತು ಪೈಗಂಬರ್ ಅವರು ಮಾಡಿದ ಸಮಾಜ ಮುಖಿ ಕಾರ್ಯ ಇಂದಿನ ಸಮಾಜಕ್ಕೆ ಬಹಳ ಪ್ರಸ್ತುತಿ ಇದೆ, ಇಬ್ಬರು ಸಮಾಜದ ಸಮಾನತೆಗೆ ಜೀವನ ಸವೆಸಿದ ಸಂತರು, ಅಂತಹ ವ್ಯಕ್ತಿಗಳ ಹಾದಿಯಲ್ಲಿ ಗೌಸ್ ಸಾಗಿರುವದು ಸಂತೋಷ ತಂದಿದೆ ಎಂದರು. ಕಲ್ಯಾಣ ದರ್ಪಣ ಗ್ರಂಥ ಪರಿಚಯಿಸಿದ ಡಾ ಸಂಗಮೇಶ ಮೇತ್ರಿ ಅವರು ಮಹಮ್ಮದಗೌಸ್ ಅವರು ಕೇವಲ ಶರಣರ ಚರಿತ್ರೆ ಬರೆದಿಲ್ಲ ಅದರ ಜೊತೆಗೆ ಅವರ ಕಾಲ ನಿರ್ಣಯ ಮಾಡಿದ್ದು ಮುಂದೆ ಸಂಶೋಧನೆ ಮಾಡುವವರಿಗೆ ಈ ಗ್ರಂಥ ಆಕರ ಗ್ರಂಥವಾಗಿದೆ. ಮೊದಲ ಪ್ರಯತ್ನದಲ್ಲಿ ಗೌಸ್ ಅವರು ಮಾಡಿದ ಸಾಧನೆ ಅವರೊಬ್ಬ ಭರವಸೆ ಬರಹಗಾರ ಆಗುವದರಲ್ಲಿ ಸಂಶಯವಿಲ್ಲ, ಅವರಿಂದ ಸಾಹಿತ್ಯ ಕ್ಷೇತ್ರಕ್ಕೆ ನೂರಾರು ಕೃತಿಗಳು ಬರಲಿ ಎಂದು ಹಾರೈಸಿದರು. ಕಾರ್ಯಕ್ರಮದ ಸಾನಿಧ್ಯ ಶ್ರೀ ಯೋಗೇಶ್ವರಿ ಮಾತಾಜಿ ಅವರು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹಾಸಿಂಪೀರ ವಾಲೀಕಾರ ಅವರು ಮಾತನಾಡಿ ಮಹಮ್ಮದಗೌಸ ಅವರು ಕಿರಿಯ ವಯಸ್ಸಿನಲ್ಲಿ ಮಾಡಿದ ಸಾಧನೆ ದೊಡ್ಡದು, ಶರಣರ ಚಿಂತನೆಗಳನ್ನು ತಮ್ಮ ವೃತ್ತಿಯಲ್ಲಿಯೂ ಅಳವಡಿಸಿಕೊಂಡು ಜೀವನ ನಡೆಸುತ್ತಿರುವದು ಬಹಳ ಸಂತೋಷ ಎಂದರು. ಕಾರ್ಯಕ್ರಮದಲ್ಲಿ ಬಸನಗೌಡ ಮ ಪಾಟೀಲ ಬಿ ಎಲ್ ಡಿ ಈ ನಿರ್ದೇಶಕರು, ಅಬ್ದುಲಹಮೀದ ಮುಶ್ರೀಫ, ಅಖಿಲಗೌಡ ಪಾಟೀಲ, ಸಿದ್ದಪ್ಪ ಪೂಜಾರಿ, ಸಂಗಮೇಶ ಚೂರಿ, ಡಾ ಮಾಧವ ಗುಡಿ, ಸಂಗೀತಾ ಮಠಪತಿ, ಬಸವರಾಜ ರೆಬಿನಾಳ, ಸಾಹೇಬಗೌಡ ಬೆಂಗಾಲಿ, ರವಿ ಕಿತ್ತೂರು, ಸಂಗನಗೌಡ ಯಂಕಂಚಿ, ಹಸನ ಪಟೇಲ್ ಸಂಗನಗೌಡ ಯಂಕಂಚಿ, ಗಿರಿಮಲ್ಲಪ್ಪ ಬೆಳ್ಳುಬ್ಬಿ, ಮಲ್ಲಿಕಾರ್ಜುನ ಅವಟಿ, ಗುರು ಚಲವಾದಿ ಸುಖದೇವಿ ಅಲಬಾಳಮಠ ಮಹಾದೇವ ರೆಬಿನಾಳ ಮುಂತಾದವರು ಉಪಸ್ಥಿತರಿದ್ದರು.