ಸೂಳೆಕೆರೆ ವಿಚಾರದಲ್ಲಿ ಅನಾವಶ್ಯಕ ಆರೋಪ;ಸುಳ್ಳು ವದಂತಿಗೆ ಕಿವಿಕೊಡದಿರಲು ಮನವಿ


ಚನ್ನಗಿರಿ.ನ.೧೧; ಸೂಳೆಕೆರೆ ಭರ್ತಿ ಮಾಡಲು ಪ್ರಯತ್ನಿಸುತ್ತಿದ್ದೇವೆ ಹೊರತು ಖಾಲಿ ಮಾಡುವ ಪ್ರಯತ್ನಕ್ಕೆ ಎಂದು ಕೈ ಹಾಕಲ್ಲ ಎಂದು ಜಿ.ಎಂ ಸಿದ್ದೇಶ್ವರ ಹೇಳಿದರು.
ಸೂಳೆಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು ೨೦೦೯ರಲ್ಲಿ ಡ್ಯಾಮ್‌ನಲ್ಲಿ ನೀರು ಕಡಿಮೆಯಾಗಿದ್ದ ಕಾರಣ ಸೂಳೆಕೆರೆಯಲ್ಲಿ ನೀರು ಕಡಿಮೆಯಾಗುತ್ತ ಬರುತ್ತಿದ್ದಂತೆ ಕೆಲವು ವಿರೋಧಿಗಳು ಭೀಮಸಮುದ್ರಕ್ಕೆ ನೀರು ಕೊಂಡೊಯ್ಯುತ್ತಾರೆಂದು ಸುಳ್ಳು ವದಂತಿಯನ್ನು ಹಬಿಸುತ್ತಿದ್ದರು. ಸಿರಿಗೆರೆ, ಚಿತ್ರದುರ್ಗ,ಜಗಳೂರು, ಹೊಳಲ್ಕೆರೆ ಈ ಮಾರ್ಗವಾಗಿ ಹೋಗುವ ಪೈಪ್‌ಲೈನಿನಲ್ಲಿ ನಮಗೂ ಕುಡಿಯುವುದಕ್ಕೆ ನೀರನ್ನು ಕೊಟ್ಟಿದ್ದಾರೆ ವಿರೋಧಿಗಳು ಸುಳ್ಳು ವದಂತಿಗಳನ್ನು ಬಿಂಬಿಸುವುದು ಸರಿಯಲ್ಲ. ಇಲ್ಲಿಯವರೆಗೆ ನಾವು ಸೂಳೆಕೆರೆಯ ನೀರು ತುಂಬಿಸುವ ಕೆಲಸವನ್ನು ಮಾಡುತ್ತಿದ್ದೇವೆ ಹೊರತು ಖಾಲಿ ಮಾಡುವ ಕೆಲಸಕ್ಕೆ ಕೈ ಹಾಕಿಲ್ಲ ಎಂದರು.ಸೂಳೆಕೆರೆ ಗೆ ಒಂದು ಟಿಎಂಸಿ ನೀರು ಹರಿಸುವ ಯೋಜನೆ ರೂಪಿಸಿದ್ದೇವೆ ಕೆರೆ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಯಾವುದೇ ಕಾರಣಕ್ಕೂ ಅನ್ಯಾಯ ಮಾಡಲ್ಲ.ಪ್ರತಿವರ್ಷ ಸೂಳೆಕೆರೆಗೆ ಒಂದು ಟಿಎಂಸಿ ನೀರು ಹರಿಸುವ ಯೋಜನೆ ಅನುಮೋದನೆ ಹಂತದಲ್ಲಿದೆ ಸಿ.ಎಂ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಇದಕ್ಕೆ ಅನುಮೋದನೆ ನೀಡುವ ಭರವಸೆ ಇದೆ ಎಂದು ಹೇಳಿದರು
ಇನ್ನು ಮೂರು ವರ್ಷಗಳ ಕಾಲ ಸಿಎಂ ಯಡಿಯೂರಪ್ಪನವರ ಸ್ಥಾನ ಯಾರಿಂದಲೂ ಕದಲಿಸಲು ಸಾಧ್ಯವಿಲ್ಲ ರಾಜ್ಯಕ್ಕೆ ಯಡಿಯೂರಪ್ಪ ದೇಶಕ್ಕೆ ನರೇಂದ್ರ ಮೋದಿ ಜನ ಒಪ್ಪಿದ್ದಾರೆ ಮುಂದಿನ ದಿನಗಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ೮ ಬಿಜೆಪಿ ಸ್ಥಾನವನ್ನು ಗೆಲ್ಲುತ್ತೇವೆ ಎಂದು ಹೇಳಿದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ. ನಾನು ಶಾಸಕನಾದ ಮೇಲೆ ಸೂಳೆಕೆರೆಗೆ ೨ ಟಿಎಂಸಿ ನೀರನ್ನು ತುಂಬಿಸಿದ್ದೇನೆ. ಸೂಳೆಕೆರೆಯನ್ನು ಮಾದರಿಯನ್ನಾಗಿಸಲಾಗುವುದು ಹಾಗೂ ಚನ್ನಗಿರಿಯ ಪ್ರವಾಸಿತಾಣ ಆಗಿ ಮಾಡುವ ಗುರಿ ನನ್ನದು ಈಗಾಗಲೇ ರಸ್ತೆ ಅಗಲೀಕರಣಕ್ಕೆ ಒಂದೂವರೆ ಕೋಟಿ ಅನುಮೋದನೆ ಆಗಿದೆ. ಸೂಳೆಕೆರೆ ಬರುವಂತಹ ಪ್ರವಾಸಿಗರಿಗೆ ಕಿಡಿಗೇಡಿಗಳು ಚುಡಾಯಿಸುವುದು ನನ್ನ ಗಮನಕ್ಕೆ ಬಂದಿದೆ ಅಂಥವರು ಕಂಡಲ್ಲಿ ತಕ್ಕ ಶಿಕ್ಷೆಯನ್ನು ಕೊಡಬೇಕು ಎಂದು ಹೇಳಿದರು.
ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ ಮಾತನಾಡಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ ಅಭಿವೃದ್ಧಿಯತ್ತ ತಾಲೂಕನ್ನು ನಾನು ಮತ್ತು ವಿರುಪಾಕ್ಷಪ್ಪನವರು ಮಾಡುತ್ತೇವೆ ಎಂದು ಹೇಳಿದರು.ಈ ವೇಳೆ ಜಿಲ್ಲಾ ಪಂಚಾಯತಿ ಸದಸ್ಯರಾದ ಮಂಜುಳಾ ಟಿವಿ ರಾಜು. ಯಶೋದಮ್ಮ ಮರುಳಪ್ಪ. ಸಾಕಮ್ಮ. ತಾಲೂಕು ಪಂಚಾಯಿತಿ ಅಧ್ಯಕ್ಷ ಕವಿತಾ ಕಲ್ಲೇಶ್ ಉಪಾಧ್ಯಕ್ಷ ಚಂದ್ರಮ್ಮ ರುದ್ರಪ್ಪ. ಪುರಸಭೆ ಅಧ್ಯಕ್ಷ ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ .ತಸಿಲ್ದಾರ್ ಪಟ್ಟ ರಾಜೇಗೌಡ. ಕಾರ್ಯನಿರ್ವಣಾಧಿಕಾರಿ ಪ್ರಕಾಶ್. ಪುರಸಭೆ ಮುಖ್ಯ ಅಧಿಕಾರಿ ಬಸರಾಜ್.ವಿಜಯ್ ಕುಮಾರ್. ಹಾಗೂ ಉಪಸ್ಥಿತರು ಹಾಜರಿದ್ದರು.
ಪೋಟೋ-೩