ಸೂಲಗಿತ್ತಿಯರಿಗೆ ಸನ್ಮಾನ

ಇಂಡಿ:ಜ.11:ಸಮಾಜದಲ್ಲಿ ತೆರೆಮರೆಯಲ್ಲಿ ಮಹಿಳೆಯರು ಮಾಡುವ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಶ್ರೀ ಆಭಿನವ ಪುಂಡಲಿಂಗ ಮಹಾಶಿವಯೋಗಿಗಳು ಸೂಲಗಿತ್ತಿಯರಿಗೆ ಸನ್ಮಾನ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಹಿಂಥ ಮಠ,ಮಾನ್ಯಗಳಿಂದ ಮಹಿಳೆಯರ ಸಾಧನೆ ಗುರುತಿಸಲು ಸಾಧ್ಯ ಎಂದು ನಿವೃತ್ ಪ್ರಾಚಾರ್ಯ ಶೈಲಜಾ ತೆಲ್ಲೂರ ಹೇಳಿದರು.
ಅವರು ತಾಲೂಕಿನ ಗೋಳಸಾರ ಗ್ರಾಮದಲ್ಲಿ ಶ್ರೀ ಚಿನ್ಮಯಮೂರ್ತಿ ತ್ರೀಧರೇಶ್ವರ ಮಹಾಶಿವಯೋಗಿಗಳ ಪುಣ್ಯಾರಾಧನೆ ಮಹೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡ ಮಹಿಳಾ ಗೋಷ್ಠಿ ಹಾಗೂ ಸೂಲಗಿತ್ತಿಯರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
40 ರಿಂದ 50 ವರ್ಷಗಳ ಹಿಂದೆ ಆಸ್ಪತ್ರೆಯೇ ಇಲ್ಲದಂತ ಸಂದರ್ಭದಲ್ಲಿ ಗ್ರಾಮದಲ್ಲಿನ ಕೆಲ ಮಹಿಳೆಯರು ಸೂಲಗಿತ್ತಿಯಾಗಿ ಹೆರಿಗೆ ಮಾಡಿಸುತ್ತಿದ್ದು,ಅಂದು ಹೆರಿಗೆ ನಂತರ ಮಹಿಳೆ,ಮಗು ಆರೋಗ್ಯದಿಂದ ಇರುತ್ತಿದ್ದರು.ಇಂದು ಸಾಕಷ್ಟು ಅಧುನಿಕ ತಂತ್ರಜ್ಞಾನ ಅಳವಡಸಿಕೊಂಡು ಆಸ್ಪತ್ರೆ ಆರಂಭಿಸಿದ್ದರು ಹೆರಿಗೆ ಸಮದರ್ಭದಲ್ಲಿ ಮಹಿಳೆ,ಮಗು ಸಾವನಪ್ಪುವ ಘಟನೆ ಕೇಳುತ್ತೇವೆ.ಹೀಗಾಗಿ ಸೂಲಗಿತ್ತಿಯರ ಸಮಾಜ ಸೇವೆ ಮೆಚ್ಚುವಂತದ್ದು ಎಂದು ಹೇಳಿದರು.
ಮಹಿಳಾ ಸಬಲೀಕರಣವು ಸಮಾಜದಲ್ಲಿ ಸಂತೋಷ ಮತ್ತು ಗೌರವಾನ್ವಿತ ಜೀವನವನ್ನು ನಡೆಸಲು ಮಹಿಳೆಯರಲ್ಲಿ ಶಕ್ತಿಯನ್ನು ಸೃಷ್ಠಿಸುವ ಪ್ರಕ್ರೀಯೆಯಾಗಿದೆ.ಪುರುಷ ಪ್ರಧಾನ ಸಮಾಜವೆಂಬುದು ಸಮಾನತೆಯತ್ತ ಬದಲಾಗುತ್ತಿದೆ.ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಅರ್ಹತೆ,ಸಾಮಥ್ರ್ಯದ ಮೂಲಕ ಸಾಧನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ .ಅನೇಕ ಮಹಿಳೆಯರು ಉನ್ನತ ಸ್ಥಾನ ನಿಭಾಯಿಸುತ್ತಿದ್ದಾರೆ.ಆದರೂ ಕೆಲವು ಕುಟುಂಬಗಳಲ್ಲಿ ಹೆಣ್ಣುಮಕ್ಕಳು ಶಿಕ್ಷಣ ಸ್ವಾವಲಂಬನೆಯಿಂದ ವಂಚಿತರಾಗುತ್ತಿದ್ದಾರೆ.ಎಲ್ಲ ಹೆಣ್ಣುಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬಂದು ಸಾವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಮಹಿಳೆಯರು ತಮ್ಮ ಹಕ್ಕು ಏನೆಂದು ತಿಳಿಯಬೇಕು.ಸರ್ಕಾರದ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ಸಶಕ್ತರಾಗಬೇಕು.ಸಬಲೀಕರಣಗೊಂಡು ನಾಯಕತ್ವ ಗುಣ ಬೆಳೆಸಿಕೊಂಡು ಸಮಾಜ ಬದಲಾವಣೆಗೆ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
ನಮ್ಮ ದೇಶದಲ್ಲಿ ಮಹಿಳೆಗೆ ಪೂಜ್ಯ ಸ್ಥಾನ ನೀಡಲಾಗಿದೆ.ಅದಕ್ಕೆ ಪೂರಕವಾಗಿ ಮಹಿಳೆಯು ತಮ್ಮ ಸ್ಥಾನ ಮಾನ ಕಾಪಾಡುವ ಜೊತೆಗೆ ಸಮಾಜಮುಖಿಯಾಗಿ ಸಮಾಜದ ಅಭಿವೃದ್ದಿಗೆ ಸಹಕರಿಸಬೇಕು.ಮಹಿಳೆಯರು ಒಂದುಗೂಡಿದರೆ ಪ್ರಬಲ ಶಕ್ತಿಯಾಗಿ ಗಟ್ಟಿಗೊಳ್ಳಬಹುದು.ಹೆಚ್ಚು ಹೆಚ್ಚು ಓದುವ ಮೂಲಕ ಜ್ಞಾನ ಬೆಳೆಸಿಕೊಂಡು ಸಾಮಾಜಿಕ ಜಾಗ್ರತಿ ಮೂಡಿಸಬೇಕು ಎಂದು ಹೇಳಿದರು.
ಶ್ರೀ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಸಾನಿಧ್ಯ ವಹಿಸಿದ್ದರು.ಅಭಿನವ ಶಿವಲಿಂಗ ಮಹಾಸ್ವಾಮೀಜಿ ನೇತ್ರತ್ವ ವಹಿಸಿದ್ದರು.ಮಾತೋಶ್ರೀ ಗುರುದೇವಿ ಅಮ್ಮನವರು ದೀಪೆÇತ್ಸವ ಉದ್ಘಾಟಿಸಿದರು.ಡಾ.ಅಶ್ವೀನಿ ಹಿರೇಮಠ,ಭಾರತಿ ಮೆಡೆದರ,ಸೂಲಗಿತ್ತಿಯರಾದ ಗುಡಮಾ ಮುಲ್ಲಾ,ಶಾಂತಾಬಾಯಿ ಸೊನ್ನ,ರಾಜಮಾ ಬಾಗವಾನ,ಗುಡಮಾ ಪಿಂಜಾರ,ದುಂಡವ್ವ ಬೊಮ್ಮನಹಳ್ಳಿ,ಗುರುಸಂಗವ್ವ ರಾವೂರ ಹಾಗೂ ಜಟ್ಟೆಪ್ಪ ಡೊಂಬಳಿ,ಎ.ಪಿ.ಕಾಗವಾಡಕರ,ಚಂದಣ್ಣ ಆಲಮೇಲ,ರವೀಂದ್ರ ಆಳೂರ,ರವಿ ಕೆರುಟಗಿ,ಶಿವಲಿಂಗಪ್ಪ ನಾಗಠಾಣ,ಆಲಿಂಗರಾಯ ಕುಮಸಗಿ,ದತ್ತಾತ್ರೇಯ ಮಠಪತಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.