ಸೂರ್ಯ, ಚಂದ್ರ ಇರುವವರೆಗೂ ಎಲ್ಲರ ಮನದಲ್ಲಿ ಅಂಬೇಡ್ಕರ್: ಕುಮಾರಸ್ವಾಮಿ


ಸಂಜೆವಾಣಿ  ವಾರ್ತೆ
ಕೊಟ್ಟೂರು, ಏ.15: ಸೂರ್ಯ, ಚಂದ್ರ ಎಲ್ಲಿಯವರೆಗೆ ಇರುತ್ತರೋ ಅಲ್ಲಿಯವರೆಗೆ ಎಲ್ಲರ ಮನದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ನೆಲೆಸಿರುತ್ತಾರೆ ಎಂದು ತಹಶಿಲ್ದಾರರಾದ ಎಂ ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ತಾಲೂಕು ಕಛೇರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ನೀತಿ ಸಂಹಿತೆ ನಿರ್ದೇಶನದಂತೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ 132 ನೇ ಜಯಂತಿ ಅಂಗವಾಗಿ ಡಾ. ಬಿ. ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾವ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಆಚರಣೆ ಮಾಡಿ ಪುಷ್ಪ ನಮನ ಸಲ್ಲಿಸಿ ನಂತರ
ಮಾತನಾಡಿದ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ರವರು ನೀಡಿದ ಸಂವಿಧಾನದಿಂದ ಪ್ರಜಾಪ್ರಭುತ್ವವನ್ನು ಬಲ ಪಡಿಸಲು ಅತ್ಯಂತ ಮಹತ್ವದ ಪಾತ್ರವಹಿಸಿದೆ, ವಿಶ್ವ ಮಟ್ಟದಲ್ಲಿ ಭಾರತ ದೇಶ ಉನ್ನತ ಹೆಸರು ಪಡೆದಿದೆ ಎಂದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಂತಹ ದೊಡ್ಡ ಸಂವಿಧಾನದಿಂದ ಮಾತ್ರ ಎಂದು ಹೇಳಿದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ  ವಕೀಲರಾದ ಮಂಜುನಾಥ್ ದೇಶದಲ್ಲಿ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಹಗಲು ಇರುಳು ಶ್ರಮಿಸಿದ ಹಾಗೂ ಸಮಾಜದ ಬಲ ವರ್ಧನೆಗೆ ದಿಟ್ಟತನದಿಂದ ಹೋರಾಡಿದ ಮಹಾನ್ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ತತ್ವ ಸಿದ್ಧಾಂತದ ಆಧಾರದ ಮೇಲೆ ಪ್ರತಿಯೊಬ್ಬ ನಾಗರಿಕನು ಜೀವನ ನಡೆಸಬೇಕು ಆಗ ಮಾತ್ರ ಜೀವನ ಸಾರ್ಥಕ ಎಂದು ಹೇಳಿದರು
ಡಿಎಸ್ಎಸ್ ಜಿಲ್ಲಾಧ್ಯಕ್ಷ ಬಿ.ಮರಿಸ್ವಾಮಿ ಮಾತಾನಾಡಿ ಅಂಬೇಡ್ಕರ್ ಒಬ್ಬ ವ್ಯಕ್ತಿ ಮಾತ್ರವಲ್ಲದೆ ಒಬ್ಬ ಸಮಾಜ ಸುಧಾರಕರಾಗಿ ಭಾರತದ ಹಿಂದುಳಿದ ಜನ ಸಮೂಹದ ಪ್ರಗತಿಗೆ ಅವಿರತವಾಗಿ ಶ್ರಮಿಸಿರುವ ದೊಡ್ಡ ಶಕ್ತಿ. ಇವರು ಕಂಡಂತಹ ಕನಸು ಅಸ್ಪೃಶ್ಯರಿಗೆ ಸಮಾಜದಲ್ಲಿ   ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡುವ ಉದ್ದೇಶದಿಂದ ವೈಜ್ಞಾನಿಕ ಸುಧಾರಣೆಗಳನ್ನು ಅವಿಸ್ಕರಿಸುವ ಮೂಲಕ ದೇಶದ ಭದ್ರತೆಗೆ ಸಂವಿಧಾನವನ್ನು ರಚಿಸಿದ್ದಾರೆ ಇಂತಹ ಮಹಾನ್ ಸಂವಿಧಾನ ಇಡೀ ಪ್ರಪಂಚಕ್ಕೆ ದೊಡ್ಡ ಮಾದರಿಯಾಗಿ ಹೊರಹೊಮ್ಮಿದೆ ಎಂದು ಹೇಳಿದರು
 ತೆಗ್ಗಿನಕೇರಿ ಕೊಟ್ರೇಶಿ ಮಾತನಾಡಿ ದೇಶದಲ್ಲಿ ಸಮಾನತೆ ಸಂದೇಶ ಸಾರುವ ಉದ್ದೇಶದ ಸಲುವಾಗಿ ಡಾ. ಬಿ. ಆರ್ ಅಂಬೇಡ್ಕರ್ ರವರ ಅಧ್ಯಯನದ ಶಿಸ್ತು, ಕ್ರಮ ಬದ್ಧತೆ, ಹಾಗೂ ಕರ್ತವ್ಯ ಪ್ರಜ್ಞೆಯ ಮೂಲಕ ಇಡೀ ಪ್ರಪಂಚವೇ ತಿರುಗಿ ನೋಡುವ ಹಾಗೇ ಸಂವಿಧಾನ ರಚನೆ ಮಾಡಿ ಪ್ರಜಾಪ್ರಭುತ್ವ ವನ್ನು ಮಹತ್ವ ವನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎ ನಸ್ರುಲ್ಲಾ, ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗ,ತಾಲೂಕು ಸಿಬ್ಬಂದಿ ವರ್ಗ . ಡಾ. ಬದ್ಯನಾಯ್ಕ, ಕೆಇಬಿ ಚೇತನ್ ಕುಮಾರ್. ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ವೀರಣ್ಣ, ಪಿಎಸ್ಐ ವೆಂಕಟೇಶ್. ಸರ್ಕಲ್ ಇನ್ಸ್ಪೆಕ್ಟರ್ ವೆಂಕಟೇಶ್ ಸ್ವಾಮಿ. ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಬದ್ದಿ ದುರುಗೇಶ್, ವಕೀಲ ಹನುಮಂತಪ್ಪ, ಅಜ್ಜಪ್ಪ ವಕೀಲರು, ಬಣಕಾರ್ ಶಿವರಾಜ್, ಟಿ ಸುರೇಶ್ . ಬಿ. ಪರಶುರಾಮ್. ಎಲ್ ಕುಬೇರಪ್ಪ, ಆರ್ ಅಂಬರೀಶ್. ತಿಮ್ಲಾಪುರ ಮೈಲಪ್ಪ, ಹಾಗೂ ಸಮಾಜ ಕಲ್ಯಾಣ ಅಧಿಕಾರಿ ಫಕ್ಕಿರಪ್ಪ ನಿರೂಪಿಸಿ ವಂದಿಸಿದರು. ಮುಂತಾದ ಸಿಬ್ಬಂದಿ ವರ್ಗದವರು ಇದ್ದರು.