ಸೂರ್ಯ, ಚಂದ್ರ ಇರುವರೆಗೂ ರಾಮಾಯಣ ಇರುತ್ತೆ: ಸಲಗರ

ಬಸವಕಲ್ಯಾಣ:ನ.14:ಇಂದಿನ ದಿನಗಳಲ್ಲಿ ಯುವ ಸಮೂಹ ದುಶ್ಚಟಗಳಿಗೆ ಮಾರು ಹೋಗುತ್ತಿದ್ದು ಇದನ್ನು ತಡೆಯಬೇಕಾದದ್ದು ನಮ್ಮೆಲ್ಲರ ಹೊಣೆಯಾಗಿದೆ. ಇದನ್ನು ತಡೆಯಬೇಕಾದರೆ ಶರಣರ, ಸತ್ಪುರುಷರ ಆದರ್ಶ ಜೀವನಗಳು ತಿಳಿದುಕೊಂಡು ಅವರು ತೋರಿದ ದಾರಿಯಲ್ಲಿ ನಡೆದಾಗ ಮಾತ್ರ ನಮ್ಮ ಜೀವನ ಹಸನಾಗಲು ಸಾಧ್ಯ ಎಂದು ಶಾಸಕ ಶರಣು ಸಲಗರ ಹೇಳಿದರು.

ತಾಲೂಕಿನ ಹಳ್ಳಿ ಗ್ರಾಮದಲ್ಲಿ ಆಯೋಜಿಸಿದ ಶ್ರೀ ಮಹರ್ಷಿ ವಾಲ್ಮಿಕಿ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಶ್ರೀ ಮಹರ್ಷಿ ವಾಲ್ಮೀಕಿ ಅವರು ರಾಮಾಯಣಯನ್ನು ಜಗತ್ತಿಗೆ ಗೊತ್ತು ಮಾಡಿದ್ದಾರೆ. ಅವರ ರಾಮಾಯಣವೂ ಸೂರ್ಯ ಚಂದ್ರ ಇರುವವರೆಗೂ ಇರುತ್ತದೆ ಎಂದರು.

ಶ್ರೀ ಮಹರ್ಷಿ ವಾಲ್ಮಿಕಿ ಅವರಿಂದ ನಿಮ್ಮೆಲ್ಲರ ಬದುಕು ಬದಲಾಗಲಿ ನಿಮ್ಮೆಲ್ಲರ ಬಾಳು ಹಸನಾಗಲಿ ಅವರ ಆಶಿರ್ವಾದ ನಿಮ್ಮೆಲ್ಲರ ಮೇಲೆ ಇರಲಿ ಎಂದ ಅವರು ಉಪ ಚುನಾವಣೆಯ ಸಂದರ್ಭದಲ್ಲಿ ನೀಡಿರುವ ಭರವಸೆಯಂತೆಯೇ ಗ್ರಾಮದಲ್ಲಿನ ದೇವಸ್ಥಾನದ ಮೇಲ್ಛಾವಣಿ ಹಾಕಲಾಗುವದು ಜೊತೆಗೆ ಅಂಗವಿಕಲರಿಗೆ ವಾಹನ ನೀಡಲು ಪ್ರಯತ್ನಿಸುವೆ ಮತ್ತು ಗ್ರಾಮದ ಸರ್ವಾಂಗೀಣ ವಿಕಾಸಕ್ಕೆ ಮುಂದಾಗುವೆ ಎಂದರು.

ಈ ಸಂದರ್ಭದಲ್ಲಿ ಗೌತಮ ಬಿ.ನಾರಾಯಣರಾವ, ಕಾಳಿದಾಸ ವಾಡೇಕರ, ಮನೋಜ ಮಾಶೆಟ್ಟೆ, ಚಂಡಕಾಪೂರ ಗ್ರಾಪಂ ಅಧ್ಯಕ್ಷೆ ಪುತಳಬಾಯಿ ಬಿರಾದಾರ, ರಾಜಕುಮಾರ ಪಾಟೀಲ ಸಿರಗಾಪೂರ, ಶಿವಕುಮಾರ ಶೆಟಗಾರ, ಅನೀಲ ಪಾಟೀಲ, ವೆಂಕಟ ದಾಸರೆ, ಮಾರುತಿರಾವ ಸೂರ್ಯವಂಶಿ, ರಾಜು ಪಾಟೀಲ, ಕಚ್ಚಾಬಾಯಿ ಮಾರುತಿ, ರವಿ ಸಿಂಗಾರೆ, ಸಂತೋಷ ಕ್ಯಾಸೆ, ಪ್ರದೀಪ ಗಡವಂತೆ, ಶಿವಾ ಕಲೋಜಿ, ದಿಲೀಪ ಪಾಟೀಲ ಉಪಸ್ಥಿತರಿದ್ದರು. ಈಶ್ವರ ಬೊಕ್ಕೆ ನಿರೀಪಿಸಿ, ವಂದಿಸಿದರು.