ಸೂರ್ಯನ ಅಬ್ಬರಕ್ಕೆ ಬೆಚ್ಚಿಬಿದ್ದ ಕಿವೀಸ್ ವಿರುದ್ಧ ಭಾರತಕ್ಕೆ 62 ರನ್ ಭರ್ಜರಿ‌ ಜಯ

ಮೌಂಟ್ ಮೌಂಗುನುಯಿ, ನ.21- ಸೂರ್ಯಕುಮಾರ್ ಯಾದವ್ ಸಿಡಿಲಬ್ಬರದ ಶತಕ ಹಾಗೂ ದೀಪಕ್ ಹೂಡಾರ ಅವರ ಮಾರಕ ಬೌಲಿಂಗ್ ನೆರವಿನಿಂದ ನ್ಯೂಜೆಲೆಂಡ್ ವಿರುದ್ಧ ಭಾರತ 65 ರನ್ ಗಳ ಭರ್ಜರಿ‌ ಜಯ ದಾಖಲಿಸಿದೆ.‌ ಈ ಗೆಲುವಿನೊಂದಿಗೆ ಪಾಂಡ್ಯ ಪಡೆ 1-0ಯಿಂದ ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 192 ರನ್ ಗಳ ಬ್ಯಹತ್ ಮೊತ್ತ ಕಲೆಹಾಕಿತು.
ಇಷಾನ್ ಕಿಷನ್ ವೃಷಭ್ ಪಂತ್ ಇನ್ನಿಂಗ್ಸ್ ಆರಂಭಿಸಿದರು. ಕೇವಲ 6 ರನ್ ಗಳಿಸಿ ಪಂತ್ ನಿರ್ಗಮಿಸಿದರು. ಇಷಾನ್ ಕಿಶನ್ 36 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಯ್ಯರ್ 13 ಹಾಗೂ ಪಾಂಡ್ಯ 13 ರನ್ ಗಳಿಸಿದರು. ದೀಪಕ್ ಹೂಡಾ ಹಾಗೂ ವಾಷಿಂಗ್ಟನ್ ಸುಂದರ್ ಶೂನ್ಯಕ್ಕೆ ಔಟಾದರು.


ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದೆಡೆ ತಂಡದ ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಕಿವೀಸ್ ಬೌಲಿಂಗ್ ದಾಳಿ ಮನಬಂದಂತೆ ಥಳಿಸಿದರು. 51 ಎಸೆತಗಳಲ್ಲಿ 11 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ಸಿಡಿಸಿ ಅಜೇಯ 111ರನ್ ಚಚ್ಚಿದರು.‌ಈ ಮೂಲಕ ತಂಡ ಬೃಹತ್ ಪೇರಿಸಲು ಪ್ರಮುಖ ಪಾತ್ರವಹಿಸಿದರು.
ನ್ಯೂಜಿಲೆಂಡ್ ಪರ ಸೌಥಿ 3 ಹಾಗೂ ಫರ್ಗುಸನ್ ಒಂದು ವಿಕೆಟ್ ಗಳಿಸಿದರು.
ಬೃಹತ್ ಮೊತ್ತದ ಗೆಲುವಿನ ಗುರಿಯನ್ನು ಬೆನ್ನಹತ್ತಿದ ನ್ಯೂಜಿಲೆಂಡ್ , ಭಾರತದ ಬೌಲಿಂಗ್ ದಾಳಿಗೆ ದೂಳಿಪಟವಾಯಿತು. 18.5 ಓವರ್ ಗಳಲ್ಲಿ 126 ರನ್ ಗಳಿಗೆ ಸರ್ಪಪತನ ಕಂಡು 62 ರನ್ ಗಳಿಂದ ಸೋಲೊಪ್ಪಿಕೊಂಡಿತು.
ನಾಯಕ ಕೇನ್ ವಿಲಿಯಮ್ಸ್ 61 ಹಾಗೂ ಡೆವೋನ್ ಕಾನ್ವೆ 25 ರನ್ ಗಳಿಸಿದ್ದನ್ನು ಹೊರತುಪಡಿಸಿ ಉಳಿದ ಆಟಗಾರರು ಪೆವಿಲಿಯನ್ ನತ್ತ ಮುಖಮಾಡಿದರು.
ಭಾರತದ ಪರ ದೀಪಕ್ ಹೂಡಾ 10 ರನ್ ನೀಡಿ 4 ನಾಲ್ಕು ವಿಕೆಟ್ ಕಬಳಿಸಿದರು. ಸಿರಾಜ್ ಹಾಗ ಚಹಲ್ ತಲಾ 2 ಸುಂದರ್ ಹಾಗೂ ಭುವನೇಶ್ವರ್‌‌‌ ಕುಮಾರ್ ತಲಾ ಒಂದು ವಿಕೆಟ್ ಗಳಿಸಿದರು