ಸೂರ್ಯನಗರಿಯಲ್ಲಿ ಹಗಲಲ್ಲಿ ಉರಿಯುವ ಬೀದಿದೀಪ

ಕಲಬುರಗಿ,ಮೇ.29: ನಗರದ ವರ್ತುಲ ರಸ್ತೆಯಲ್ಲಿರುವ ಬೀದಿ ದೀಪಗಳು ಹಾಗೂ ಇನ್ನಿತರೆ ಕೆಲವು ಬಡಾವಣೆಗಳಲ್ಲಿ ಹಗಲು ಹೊತ್ತಿನಲ್ಲಿ ಬೀದಿ ದೀಪಗಳು ಉರಿಯುತ್ತಿರುತ್ತವೆ. ಯಾರೂ ಅವುಗಳ ಬಗ್ಗೆ ತಲೆಕಡಿಸಿಕೊಳ್ಳದೆ ಹೀಗೆ ದಿನದ 24 ಗಂಟೆಗಳು ಉರಿಯುತ್ತಲಿರುತ್ತವೆ. ಇದು ಅನೇಕ ದಿನಗಳಿಂದ ಮುಂದುವರೆದಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಾಗಲಿ, ಸಾರ್ವಜನಿಕರಾಗಲಿ ಗಮನಹರಿಸಿ ತಕ್ಷಣವೇ ಕ್ರಮ ಜರುಗಿಸಬೇಕೆಂದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆ ಎಸ್ ಪಿ ಎಸ್ ಟಿ) ಪ್ರಾದೇಶಿಕ ಕೇಂದ್ರದ ಸಲಹಾ ಸಮಿತಿ ಸದಸ್ಯ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (ಕೆಜೆವಿಎಸ್) ಜಿಲ್ಲಾ ಘಟಕದ ಅಧ್ಯಕ್ಷ ಡಾ.ಪ್ರಭುದೇವ್ ಎಂ ಎಸ್ ಅಗ್ರಹಿಸಿದ್ದಾರೆ. ಶಕ್ತಿ ಸಂರಕ್ಷಣೆಯಲ್ಲಿ ಸರಕಾರ ಅನುದಾನ ಒದಗಿಸಿ ವಿವಿಧ ಅರಿವು ಕಾರ್ಯಕ್ರಮಗಳನ್ನು ಮೂಡಿಸುತ್ತಿರುವುದು ಆದರೂ ನಾಗರಿಕರು ಅಧಿಕಾರಿಗಳು ಇದಕ್ಕೆ ಮನ್ನಣೆ ನೀಡದೆ ನಿರ್ಲಕ್ಷ ವಹಿಸುತ್ತಿರುವುದು ಮುಂಬರುವ ದಿನಗಳಲ್ಲಿ ನಮಗೆಲ್ಲ ಶಕ್ತಿಯ ಕೊರತೆ ಉಂಟಾಗುವಲ್ಲಿ ಯಾವುದೇ ಅನುಮಾನವಿಲ್ಲವೆಂದು ತಿಳಿಸಿದ್ದಾರೆ. ಈಗಲಾದರೂ ನಾವೆಲ್ಲ ನಾಗರಿಕರು ಎಚ್ಚೆತ್ತುಕೊಂಡು ಕನಿಷ್ಠಪಕ್ಷ ನಮ್ಮ ಮನೆಯ ಎದುರುಗಡೆ, ಬಡಾವಣೆಗಳಲ್ಲಿರುವ ಬೀದಿ ದೀಪಗಳನ್ನು ಸ್ವಯಂ ಪ್ರೇರಿತರಾಗಿ ಬೆಳಗಿನ ಹೊತ್ತಿನಲ್ಲಿ ಬಂದ್ ಮಾಡಿ ನಾಗರಿಕ ಪ್ರಜ್ಞೆ ಮರೆಯೋಣ ಮತ್ತು ದೇಶದ ಶಕ್ತಿ ಸಂರಕ್ಷಣೆಯಲ್ಲಿ ಅಳಿಲು ಸೇವೆಯನ್ನು ಮಾಡೋಣ ಎಂದು ಎಲ್ಲರಿಗೂ ಪ್ರಾರ್ಥಿಸಿದ್ದಾರೆ.