ಸೂರ್ಯಕಾಂತಿ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ರೈತರಿಂದ ಧರಣಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.13- ಸೂರ್ಯಕಾಂತಿಧೋರಣೆಯಲ್ಲಿ ಕುಸಿತ ಕಂಡುರೈತರು ಕೈ ಸುಟ್ಟುಕೊಳ್ಳುತ್ತಿರುವುದರಿಂದ ಖರೀದಿ ಕೇಂದ್ರತೆರೆಯಬೇಕೆಂದು ಒತ್ತಾಯಿಸಿ ಗುಂಡ್ಲುಪೇಟೆಯಲ್ಲಿರೈತರುಧರಣಿ ನಡೆಸುತ್ತಿದ್ದಾರೆ.
ರೈತ ಸಂಘ ಹಾಗೂ ಅರಿಶಿಣ ಬೆಳೆಗಾರರ ಒಕ್ಕೂಟದ ವತಿಯಿಂದಗುಂಡ್ಲುಪೇಟೆ ಎಪಿಎಂಸಿ ಆವರಣದಲ್ಲಿರೈತರುಧರಣಿ ನಡೆಸುತ್ತಿದ್ದು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರದಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಗುಂಡ್ಲುಪೇಟೆತಾಲೂಕಿನಲ್ಲಿ 15 ಸಾವಿರ ಹೆಕ್ಟೇರ್ ನಲ್ಲಿ ಸೂರ್ಯಕಾಂತಿ ಬೆಳೆದಿದ್ದು, ಬೆಲೆ ಕುಸಿತದಿಂದ ನಷ್ಟಅನುಭವಿಸುವಂತಾಗಿದೆ. ಮಳೆ ಕೊರತೆಯಿಂದ ಇಳುವರಿ ಕಡಿಮೆಯಾದ ಹಿನ್ನೆಲೆ ಹಾಕಿದಬಂಡವಾಳವೂ ಕೈಸೇರಿಲ್ಲ. ಸೂರ್ಯಕಾಂತಿಗೆಎಂಎಸ್‍ಪಿ ಅಡಿ 6760 ರೂ. ನಿಗಧಿ ಮಾಡಿತ್ತು. ಆದರೆ ದಲ್ಲಾಳಿಗಳಿಗೆ ರೈತರು 4500 ರೂ.ಗೆ ಮಾರಾಟ ಮಾಡುವ ಮೂಲಕ ಸಾಲದ ಸುಳಿಗೆ ಸಿಲುಕುವಂತಾಯಿತು. ಈ ಮಧ್ಯೆ ಸೂರ್ಯಕಾಂತಿ ಬೆಲೆ ಕುಸಿದಿದ್ದರೂ ಸಹ ಸರ್ಕಾರ ಮಧ್ಯೆ ಪ್ರವೇಶ ಮಾಡಿ ಬೆಂಬಲ ಅಡಿಯಲ್ಲಿ ಬೆಳೆ ಖರೀದಿಸದೆರೈತರಿಗೆಅನ್ಯಾಯ ಮಾಡಿದೆಎಂದು ಪ್ರತಿಭಟನಾಕಾರರುಕಿಡಿಕಾರಿದ್ದಾರೆ.
ಜೂನ್‍ನಲ್ಲಿ ಸೂರ್ಯಕಾಂತಿಖರೀದಿ ಕೇಂದ್ರ ಆರಂಭಿಸಿದರೆ ರೈತರಿಗೆ ನೆರವಾಗುತ್ತಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಖರೀದಿ ಕೇಂದ್ರಆರಂಭವಾಗದೆ ಹೆಚ್ಚಿನ ನಷ್ಟವಾಗಿದೆ.
ಈಗಾಗಲೇ ಶೇ.85ರಷ್ಟು ಫಸಲು ಮಾರಾಟ ಮಾಡಲಾಗಿದ್ದು, ಕೆಲವು ಪ್ರದೇಶದಲ್ಲಿಅಲ್ಪ ಪ್ರಮಾಣದ ಬೆಳೆ ಮಾತ್ರ ಬಾಕಿ ಉಳಿದಿದೆ. ಹೀಗಿದ್ದರುಕೂಡಖರೀದಿ ಕೇಂದ್ರತೆರೆಯಲು ವಿಳಂಬ ಧೋರಣೆಅನುಸರಿಸುತ್ತಿದ್ದಾರೆಎಂದು ಅಧಿಕಾರಿಗಳ ವಿರುದ್ಧರೈತರುಅಸಮಾಧಾನ ಹೊರಹಾಕಿದ್ದಾರೆ.