ಸೂರು ಕಲ್ಪಿಸುವಂತೆ ಆಗ್ರಹಿಸಿ ಮನವಿ

ಲಕ್ಷ್ಮೇಶ್ವರ, ಮೇ21 : ಪಟ್ಟಣದ ಪುರಸಭೆ ವ್ಯಾಪ್ತಿಯ ಮಂಜಲಾಪುರದಲ್ಲಿ ಅನೇಕ ವರ್ಷಗಳಿಂದ ಗುಡಿಸಲುಗಳಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗದವರಿಗೆ ಸೂರು ಕಲ್ಪಿಸುವಂತೆ ಆಗ್ರಹಿಸಿ ಶಾಸಕ ರಾಮಣ್ಣ ಲಮಾಣಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಶಾಸಕರೆದರು ಗೋಳು ತೋಡಿಕೊಂಡ ಮಹಿಳೆಯರು ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದು ಆಧಾರ ಕಾರ್ಡ್ ,ಗುರುತಿನ ಚೀಟಿ ಎಲ್ಲವನ್ನು ಹೊಂದಿದ್ದರು ಯಾರೊಬ್ಬರೂ ತಮ್ಮನ್ನು ಗಮನಿಸಿಲ್ಲ ಆದ್ದರಿಂದ ತಮಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಚಂಬಣ್ಣ ಬಾಳಿಕಾಯಿ, ಗಂಗಾಧರ ಮೆಣಸಿನಕಾಯಿ, ನೀಲಪ್ಪ ಕಜಕ್ಕಣವರ, ನಗರ ಘಟಕದ ಅಧ್ಯಕ್ಷ ದುಂಡೇಶ್ ಕೊಟಗಿ, ಷಣ್ಮುಖ ಗೋಡಿ, ಸುರೇಶ್ ಕುಂದ್ರಳ್ಳಿ, ಮಂಜುನಾಥ ನರೇಗಲ್, ಸೋಮು ನರೇಗಲ್ ಸೇರಿದಂತೆ ಅನೇಕರು ಇದ್ದರು.