ಸೂರಣಗಿ ಗ್ರಾಮದಲ್ಲಿ ಸ್ಯಾನಿಟೈಸರ್ ಸಿಂಪಡಣೆ

ಲಕ್ಷ್ಮೇಶ್ವರ, ಮೇ28: ಸಮೀಪದ ಸೂರಣಗಿ ಗ್ರಾಮದಲ್ಲಿ ಕೊರೋನಾ ಹಾವಳಿ ತಡೆಯುವ ನಿಟ್ಟಿನಲ್ಲಿ ಗ್ರಾಪಂ ಆಡಳಿತ ಮಂಡಳಿಯು ಸ್ಯಾನೀಟೈಸ್ ಮಾಡಿಸುವ ಹಾಗೂ ಚರಂಡಿ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ಶೇಖವ್ವ ದೊಡಗಣ್ಣವರ ಹೇಳಿದರು. ಗುರುವಾರ ಸೂರಣಗಿ ಗ್ರಾಮದಲ್ಲಿ ಸ್ಯಾನೀಟೈಸ್ ಮಾಡುವ ಮತ್ತು ಚರಂಡಿ ಸ್ವಚ್ಚತಾ ಕಾರ್ಯ ವೀಕ್ಷಣೆ ಮಾಡಿ ಮಾತನಾಡಿದರು.
ತಾಲೂಕಿನ ಹಲವು ಗ್ರಾಮಗಳಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದು ಗ್ರಾಮೀಣ ಭಾಗದ ಜನರು ಭೀತಿಯಿಂದ ಜೀವನ ಸಾಗಿಸಬೇಕಾಗಿದೆ. ಸಾರ್ವಜನಿಕರು ಮಾಸ್ಕ್ ಹಾಕಿಕೊಂಡು ಸಂಚಾರ ಮಾಡಬೇಕು, ಅನವಶ್ಯಕವಾಗಿ ಮನೆಯಿಂದ ಹೊರಗೆ ಬರದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಗಂಟಲು ದ್ರವ ತೆಗದುಕೊಂಡು ಪರೀಕ್ಷಗೆ ಕಳಿಸುತ್ತಿದ್ದಾರೆ. ಕೊರೋನಾ ಪಾಸಟೀವ್ ಬಂದ ವ್ಯೆಕ್ತಿಗಳಿಗೆ ಹೋಂ ಐಸೋಲೇಶನ್ ಮಾಡಿಕೊಳ್ಳುವಂತೆ ಅಥವಾ ಸಮೀಪದ ಆರೋಗ್ಯ ಕೇಂದ್ರಕ್ಕೆ ಹೋಗಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವಂತೆ ಸಲಹೆ ನೀಡುವ ಮೂಲಕ ಸೋಂಕು ನಿಯಂತ್ರಣ ಮಾಡುತ್ತಿದ್ದಾರೆ. ಅಲ್ಲದೆ ಗ್ರಾಮದ ಸ್ವಚ್ಚತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಚರಂಡಿಗಳನ್ನು ಸ್ವಚ್ಚ ಮಾಡಿಸುವ ಕಾರ್ಯ ಮಾಡುತ್ತಿರುವುದಾಗಿ ಅವರು ಹೇಳಿದರು.
ಈ ವೇಳೆ ಗ್ರಾಪಂ ಉಪಾಧ್ಯಕ್ಷ ಶಂಕ್ರಪ್ಪ ಶಿರನಹಳ್ಳಿ. ಬಾಬಣ್ಣ ಲಮಾಣಿ, ಪ್ರಕಾಶ ಶಿರನಹಳ್ಳಿ, ನೀಲಪ್ಪ ದೊಡಗಣ್ಣವರ ಪೀರಸಾಬ್ ರಿತ್ತಿ ಹಾಗೂ ಪಿಡಿಓ ಸಂತೋಷ ಮೇಟಿ ಇದ್ದರು.