ಸೂರಣಗಿ ಗ್ರಾಪಂ: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಲಕ್ಷ್ಮೇಶ್ವರ, ಜು 30: ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿಗೆ ಎರಡನೆಯ ಅವಧಿಗಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುಕ್ರವಾರ ಜರುಗಿತು.
ಕಾಂಗ್ರೆಸ್‍ನ ಪರ ಶಂಕ್ರಣ್ಣ ಶೀರನಹಳ್ಳಿ ಮತ್ತು ಬಿಜೆಪಿಯಿಂದ ಚೆನ್ನವ್ವ ಕಳ್ಳಿಹಾಳ ನಾಮಪತ್ರ ಸಲ್ಲಿಸಿದ್ದರು.
20 ಸದಸ್ಯರನ್ನು ಹೊಂದಿರುವ ಸುರಣಗಿ ಗ್ರಾಮ ಪಂಚಾಯಿತಿಯಲ್ಲಿ ಮತದಾನ ಪ್ರಕ್ರಿಯೆ ನಂತರ ಮತ ಎಣಿಕೆ ನಡೆದು ಕಾಂಗ್ರೆಸ್ಸಿನ ಶಂಕರಣ್ಣ ಶೀರನಹಳ್ಳಿ ಅವರಿಗೆ 10 ಮತಗಳು ಬಿಜೆಪಿಯ ಚೆನ್ನವ್ವ ಬಸವರಾಜ್ ಕಳ್ಳಿಹಾಳ್ ಅವರು 10 ಮತಗಳನ್ನು ಪಡೆದು ಸಮಾನ ಮತಗಳನ್ನು ಪಡೆದು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕಗ್ಗಂಟಾಯಿತು.
ನಂತರ ಚುನಾವಣಾ ಅಧಿಕಾರಿ ಚಂದ್ರಶೇಖರಗೌಡ ನರಸಮ್ಮನವರ ಅವರು ಓರ್ವ ಬಾಲಕನಿಂದ ಚೀಟಿ ಎತ್ತುವ ಮೂಲಕ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಬಿಜೆಪಿಯ ಚೆನ್ನವ ಕಳಿಹಾಳ ಅಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಎಲ್ಲವ ಚಕ್ರಸಾಲಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಫಲಿತಾಂಶ ಘೋಷಿಸುತ್ತಿದ್ದಂತೆಯೇ ಕಾರ್ಯಕರ್ತರು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪಿಎಸ್‍ಐ ಯೂಸುಫ್ ಜಮುಲಾ ಅವರ ನೇತೃತ್ವದಲ್ಲಿ ಸೂಕ್ತ ಪೆÇಲೀಸ್ ಬಂದೋಬಸ್ ಏರ್ಪಡಿಸಲಾಗಿತ್ತು.