ಸೂರಜಸಿಂಗ್ ರಾಜಪೂತ್‍ಗೆ ಸನ್ಮಾನ

ಬೀದರ:ನ.5: ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಬೀದರ ಜಿಲ್ಲೆಯಿಂದ ಕೃಷಿ ಸೇವೆಯಲ್ಲಿ ಆಯ್ಕೆಯಾದ ಸುರಜ್‍ಸಿಂಗ್ ರಾಜಪುತ್ ಅವರಿಗೆ ಇತ್ತಿಚೀಗೆ ನಗರದ ಶಾಂತೀಶ್ವರಿ ಸಮೂಹ ಸಂಸ್ಥೆಯ ಕಛೇರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸೂರಜ್‍ಸಿಂಗ್ ರಾಜಪೂತ್‍ರವರು ಸುಮಾರು 3 ದಶಕಗಳಿಂದ ಸಾವಯವ ಕೃಷಿ ಹಾಗೂ ಗೋ ಆಧಾರಿತ ಕೃಷಿಗೆ ಉತ್ತೇಜನ ನೀಡುವ ಮೂಲಕ ನಿರಂತರವಾಗಿ ಕೃಷಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಅಭಿವೃದ್ಧಿ, ಸಮನ್ವಯ ಮತ್ತು ಮೇಲ ಉಸ್ತುವಾರಿ ಸಮಿತಿ ಸದಸ್ಯ ಶಿವಯ್ಯಾ ಸ್ವಾಮಿ, ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ, ರೈತ ಸಂಘದ ಹಿರಿಯ ಸಲಹೆಗಾರ ವೈಜಿನಾಥ ಬುಯ್ಯಾ, ಯುವ ಮುಖಂಡ ವರದಯ್ಯಾ ಸ್ವಾಮಿ, ಧನುರ ಗ್ರಾಮದ ಮುಖಂಡ ಬಿಂದುಸರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.