ಸೂಪರ್ ಪಾಸ್ಟ್ ರೈಲು ಜಿಲ್ಲೆಗೆ ವಿಸ್ತರಣೆ ಬಾಬುರಾವ ಮನವಿ

ರಾಯಚೂರು.ಏ.೦೧- ವಿಶಾಖಪಟ್ನಂ-ಮಹೆಬೂಬ್‌ನಗರ ಸೂಪರ್ ಪಾಸ್ಟ್ ರೈಲು ರಾಯಚೂರು ಜಿಲ್ಲೆಗೆ ವರೆಗೆ ವಿಸ್ತರಣೆ ಮಾಡುವಂತೆ ಸೌತ್ ಸೆಂಟರ್ ರೈಲ್ವೆ ಜನರಲ್ ಮ್ಯಾನೇಜರ್ ಅರುಣ ಕುಮಾರ ಜೈನ್ ಅವರಿಗೆ ಸಮಾಜ ಸೇವಕ ಮತ್ತು ಬಿಜೆಪಿ ಮುಖಂಡ ಡಾ.ಬಾಬುರಾವ ಅವರು ಮನವಿ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಅತಿ ಹೆಚ್ಚು ಜನರು ವಾಸ ಮಾಡುತ್ತಿದ್ದು, ಹಬ್ಬದ ಹರಿದಿನಗಳಲ್ಲಿ ಅವರು ತಮ್ಮ ಊರುಗಳಿಗೆ ತೆರಳುವ ಸಂದರ್ಭದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಯಾಣಿಕರ ಹಿತದೃಷ್ಟಿಯಿಂದ ನಮ್ಮ ಮನವಿಗೆ ಸ್ಪಂದಿಸಿ ರಾಯಚೂರುವರೆಗೂ ಸೂಪರ್ ಪಾಸ್ಟ್ ರೈಲ್ ಸಂಖ್ಯೆ ೧೨೮೬೧-೬೨ ರನ್ನು ವಿಸ್ತರಣೆ ಮಾಡುವಂತೆ ಮನವಿ ಮಾಡಿದರು. ಅನೇಕ ಭಾರೀ ರಾಯಚೂರು ವರೆಗೂ ರೈಲ್ ವಿಸ್ತರಣೆಗೆ ಮನವಿ ಸಲ್ಲಿಸಿದ್ದರು ಪ್ರಯೋಜನವಾಗಿಲ್ಲ. ಈಗಲಾದರು ನಮ್ಮ ಮನವಿಗೆ ಸ್ಪಂದಿಸಬೇಕು ಎಂದರು.ರೈಲ್ ಸಂಖ್ಯೆ ೦೭೦೬೭-೬೮ ಮಚಿಲಿಪಟ್ನಂ- ಮಂತ್ರಾಲಯಂ ಟ್ರೈ ಸಾಪ್ತಾಹಿಕ ವಿಶೇಷ ಪುನಃ ಸ್ಥಾಪನೆ ಅದೇ ರೈಲನ್ನು ಗುಂತಕಲ್ ಮತ್ತು ರಾಯಚೂರು ಮೂಲಕ ಮಚಲಿಪಟ್ಟಣಂ-ಕೃಷ್ಣಾ ವರೆಗೆ ವಿಸ್ತರಣೆ ಮಾಡಬೇಕು.ರೈಲ್ ಸಂಖ್ಯೆ ೦೭೪೭೭-೭೮ ಕಾಚೇಗೌಡ- ರಾಯಚೂರು ಮೆಮು ಕೃಷ್ಣಾ ಮೂಲಕ ರಾಯಚೂರಿನವರೆಗೆ ವಿಸ್ತರಣೆ ಮಾಡಬೇಕು. ಹೈದ್ರಾಬಾದ ಡೆಮೋ ರೈಲ್ ರಾಯಚೂರು ವಿಸ್ತರಣೆ ಮಾಡಬೇಕು ಮನವಿ ಮಾಡಿದರು. ರೈಲ್ ವಿಸ್ತರಣೆಗೆ ಹಾಲಿ ಸಂಸದ ರಾಜ ಅಮರೇಶ ನಾಯಕ ಅವರು ಅನೇಕ ಭಾರೀ ಕೇಂದ್ರ ಸಚಿವರಲ್ಲಿ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.