ಸೂಪರ್ ಓವರ್ ನಲ್ಲಿ ಪಂತ್ ಪಡೆಗೆ ರೋಚಕ ಗೆಲುವು

ಚೆನ್ನೈ, ಏ. 25- ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದ ಸೂಪರ್ ಓವರ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ,ಎಸ್ ಆರ್ ಎಸ್ ಎಚ್ ವಿರುದ್ದ ರೋಚಕ ಗೆಲುವು ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ‌ ಡೆಲ್ಲಿ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದು ಕೊಂಡು 159 ರನ್ ಗಳಿಸಿತು.


ಪೃಥ್ವಿ ಶಾ 53ರನ್ ಗಳಿಸಿದರು.ಧವನ್ 28, ಪಂತ್ 37, ಸ್ಮಿತ್ 34 ರನ್ ಗಳಿಸಿದರು.
160 ರನ್ ಗಳ ಸವಾಲಿನ ಬೆನ್ನ ಹತ್ತಿದ ಎಸ್ಆರ್ ಎಚ್ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದು ಕೊಂಡು 159 ರನ್ ಗಳಿಸಿದ್ದರಿಂದ ಪಂದ್ಯ ರೋಚಕ ಟೈ ಆಯಿತು.
ಜಾನಿ ಬೈರ್ ಸ್ಟೋ 38 ರನ್ ಗಳಿಸಿದರು. ಕೇನ್ ವಿಲಿಯಮ್ಸ್ ಅಜೇಯ 66 ರನ್ ಗಳಿಸಿದರು.ಜಗದೀಶ 14 ರನ್ ಗನ್ ಗಳಿಸಿದರು.
ಪಂದ್ಯ ಟೈ ಆಗಿದ್ದರಿಂದ ಉಭಯ ತಂಡಗಳಿಗೆ ತಲಾ ಒಂದು ಓವರ್ ಆಡಿಸಲಾಯಿತು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ಏಳು ರನ್ ಗಳಿಸಲಷ್ಟೇ ಶಕ್ತವಾಯಿತು.
ಕೋವಿಡ್‌ ಸೋಂಕಿನಿಂದ ಗುಣಮುಖರಾಗಿ ತಂಡವನ್ನು ಸೇರಿದ್ದ ಅಕ್ಷರ್ ಪಟೇಲ್ ನಿಖರ ದಾಳಿ ಸಂಘಟಿಸಿ ಗಮನ ಸೆಳೆದರು.
ಬಳಿಕ ಅತಿ ಒತ್ತಡದ ಪರಿಸ್ಥಿತಿಯಲ್ಲೂ ರಶೀದ್ ಖಾನ್ ದಾಳಿಯಲ್ಲಿ ರಿವರ್ಸ್ ಸ್ವೀಪ್ ಮೂಲಕ ಬೌಂಡರಿ ಬಾರಿಸಿದ ನಾಯಕ ರಿಷಭ್ ಪಂತ್, ಡೆಲ್ಲಿಗೆ ‘ಸೂಪರ್’ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.
ವಿಲಿಯಮ್ಸ್ ಮತ್ತು ಜಗದೀಶನ್ ಹೋರಾಟ ವ್ಯರ್ಥವಾಯಿತು. ಡೆಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿತು.