ಸೂಪರ್ ಓವರ್‌ನಂತಾದ ಫಲಿತಾಂಶ!

ಬಾಬುಅಲಿ ಕರಿಗುಡ್ಡ
ದೇವದುರ್ಗ.ಜ.೦೨- ಟ್ವಂಟಿ-ಟ್ವಂಟಿ ಕ್ರಿಕೆಟ್ ಮ್ಯಾಚ್ ಟೈ ಆದಾಗ ನಡೆಸುವ ಸೂಪರ್ ಓವರ್ ಟೆನ್ಸೆನ್‌ನಂತೆ ಗ್ರಾ.ಪಂ. ಚುನಾವಣೆ ಮತ ಎಣಿಕೆ ಕಾರ್ಯ ನಡೆಯಿತು. ಅದರಲ್ಲಿ ಹತ್ತು ಅಭ್ಯರ್ಥಿಗಳು ಸಮಮತ ಪಡೆದು ಗಮನ ಸೆಳೆದರು. ಸ್ಪರ್ಧೆ ಟೈ ಆದಾಗ ಚುನಾವಣಾಧಿಕಾರಿ ಲಕ್ಕಿ ಚೀಟಿ ಎತ್ತುವ ಮೂಲಕ ಫಲಿತಾಂಶ ಹೊರಹಾಕಿದರು.
ಇಂಥ ಪ್ರಸಂಗಗಳು ಜಿಲ್ಲೆಯಲ್ಲಿ ಒಂದೆರೆಡು ನಡೆವುದು ಸಾಮಾನ್ಯ. ಆದರೆ, ತಾಲೂಕಿನಲ್ಲಿ ೫ಕ್ಷೇತ್ರಗಳಲ್ಲಿ ಸ್ಪರ್ಧೆ ಟೈ ಆಗಿದೆ. ೧೦ಅಭ್ಯರ್ಥಿಗಳು ಸಮಾನವಾದ ಮತ ಪಡೆದಿದ್ದಾರೆ. ಕೆಲವರಿಗೆ ಮತದಾರ ಕೈಹಿಡಿದರೂ, ಲಕ್ಕಿಚೀಟಿ ಕೈಕೊಟ್ಟಿದೆ. ಕೆಲವರ ಪಾಲಿಗೆ ವಿಜಯಲಕ್ಷ್ಮಿ ಲಕ್ಕಿ ಚೀಟಿಯಲ್ಲಿ ಅಡಗಿ ಕುಳಿತಂತಿತ್ತು.
ಹೌದು. ತಾಲೂಕಿನ ೫ಗ್ರಾ.ಪಂ.ಯಲ್ಲಿ ಇಂಥ ಪ್ರಸಂಗ ನಡೆದಿದೆ.
ಸುಂಕೇಶ್ವರಹಾಳ, ಗಲಗ, ಜಾಡಲದಿನ್ನಿ, ಮುಷ್ಟೂರು, ಸೋಮನಮರಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಮಬಲದ ಸ್ಪರ್ಧೆ ನಡೆದಿದ್ದು, ಹತ್ತೂ ಅಭ್ಯರ್ಥಿಗಳು ಮಹಿಳೆಯರು ಎನ್ನುವುದು ಮತ್ತೊಂದು ವಿಶೇಷ. ಪ್ರತಿಯೊಂದು ಮತದ ಮೌಲ್ಯ ಅಭ್ಯರ್ಥಿಗಳಲ್ಲಿ ನಡುಕ ಉಂಟುಮಾಡಿತ್ತು. ಸೋತ ಅಭ್ಯರ್ಥಿಗಳನ್ನು ಮತದಾರರು ಕೈಹಿಡಿದರೂ ಲಕ್ಕಿಚೀಟಿ ಕೈಹಿಡಿಯಲಿಲ್ಲ.
ಅದೃಷ್ಟ, ಪರಿಶ್ರಮವಿದ್ದರೆ ಗೆಲುವು ಸಾಧ್ಯ ಎನ್ನುವುದಕ್ಕೆ ಚೀಟಿ ಎತ್ತುವ ಮೂಲಕ ಗೆಲುವು ಸಾಧಿಸಿದ ಅಭ್ಯರ್ಥಿಗಳೇ ಸಾಕ್ಷಿಯಾಗಿದ್ದಾರೆ. ಸೋತವರಿಗೆ ಸೋಲು ಅರಗಿಸಿಕೊಳ್ಳಲು ಆಗುತ್ತಿಲ್ಲ. ಗೆದ್ದವರಿಗೆ ನಂಬಲೂ ಆಗುತ್ತಿಲ್ಲ. ಮಧ್ಯರಾತ್ರಿ ೧ಗಂಟೆವರೆಗೆ ಎಣಿಕೆ ನಡೆದರೂ ಹಲವು ಕ್ಷೇತ್ರಗಳು ಕೊನೇ ಕ್ಷಣದವರೆಗೆ ಕುತೂಹಲ ಕಾಯ್ದಿರಿಸಿಕೊಂಡಿದ್ದವು.
ಯಾರು ಗೆದ್ದರು, ಯಾರು ಬಿದ್ದರು?:
ಹೆಗ್ಗಡದಿನ್ನಿಗೆ ಸ್ಪರ್ಧಿಸಿದ್ದ ಸುಲೋಚನಾ ಗಡ್ಡೆಪ್ಪ, ಪುಷ್ಪಾವತಿ ಚನ್ನಪ್ಪ ಇಬ್ಬರೂ ತಲಾ ೩೭೬ಮತ ಪಡೆದಿದ್ದರು. ಲಕ್ಕಿ ಚೀಟಿಯಲ್ಲಿ ಗೆಲುವು ಸುಲೋಚನಾ ಕೈಹಿಡಿಯಿತು. ಮುಷ್ಟೂರು ಗ್ರಾ.ಪಂ. ವ್ಯಾಪ್ತಿಯ ಆಲ್ದರ್ತಿ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಚನ್ನಮ್ಮ ಪ್ರತಿಸ್ಪರ್ಧಿ ಲಕ್ಷ್ಮಿ ತಲಾ ೨೦೮ಮತ ಪಡೆದಿದ್ದರು. ಲಕ್ಕಿ ಡ್ರಾನಲ್ಲಿ ಚನ್ನಮಗೆ ಗೆಲುವು ಒಲೆಯಿತು. ಸೋಮನಮರಡಿ ಗ್ರಾ.ಪಂ.ಯಲ್ಲಿ ಸ್ಪರ್ಧಿಸಿದ್ದ ಮಹಾದೇವಮ್ಮ ಶಿವಪ್ಪ ಹಾಗೂ ಹುಲಿಗೆಮ್ಮಹನುಮಂತ ತಲಾ ೨೪೮ಮತ ಪಡೆದಿದ್ದರು.
ಮಹಾದೇವಮ್ಮಗೆ ಲಕ್ಕಿಚೀಟಿ ಅದೃಷ್ಟ ತಂದುಕೊಟ್ಟಿತು. ಗಲಗ ಗ್ರಾ.ಪಂ.ಗೆ ಸ್ಪರ್ಧಿಸಿದ್ದ ಅಂಬಮ್ಮ ಹಾಗೂ ಶಶಿಕಲಾ ತಲಾ ೧೫೫ಮತ ಪಡೆದರು ಟೈ ಸಾಧಿಸಿದ್ದು, ಲಕ್ಕಿಚೀಟಿ ಅಂಬಮ್ಮ ಕೈಹಿಡಿಯಿತು. ರಾಮದುರ್ಗ ಗ್ರಾ.ಪಂ. ವ್ಯಾಪ್ತಿಯ ಸುಂಕೇಶ್ವರಹಾಳದಲ್ಲಿ ಸ್ಪರ್ಧಿಸಿದ್ದ ಅರುಣಮ್ಮ ಹಾಗೂ ಭೀಮವ್ವ ತಲಾ ೩೮೮ಮತ ಪಡೆದಿದ್ದರು. ಚೀಟಿ ಎತ್ತಿದಾಗ ಅರುಣಮ್ಮಗೆ ಅದೃಷ್ಟ ಒಲಿಯಿತು.

ಕೋಟ್=====-====

ತಾಲೂಕಿನ ನಾಗಡದಿನ್ನಿ, ಆಲ್ದರ್ತಿ, ಸೋಮನಮರಡಿ, ಗಲಗ, ಸುಂಕೇಶ್ವರಹಾಳಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಸಮ ಮತ ಪಡೆದಿದ್ದರು. ಚುನಾವಣೆ ನಿಯಮ ಪ್ರಕಾರ ಚೀಟಿ ಎತ್ತುವ ಮೂಲಕ ಅಭ್ಯರ್ಥಿ ಆಯ್ಕೆ ಮಾಡಲಾಯಿತು.
ಮಧುರಾಜ್ ಯಾಳಗಿ
ತಾಲೂಕು ಚುನಾವಣಾಧಿಕಾರಿ

೦೧-ಡಿವಿಡಿ-೨

೦೧-ಡಿವಿಡಿ-೩

೦೧-ಡಿವಿಡಿ-೪