ಸೂತ್ರ ಹಿಡಿಯುವ ಜಾಣ್ಮೆ ವಿಧ್ಯಾರ್ಥಿಗಳು ಕಲಿಯಬೇಕು

ತಾಳಿಕೋಟೆ :ಜ.18: ಗಣಿತ ವಿಷಯವೆಂದಾಗ ಸಾಕಷ್ಟು ವಿಧ್ಯಾರ್ಥಿಗಳಲ್ಲಿ ಭಯ, ಗೊಂದಲು ಉಂಟಾಗುವದು ಸಹಜವಾಗಿದೆ ಅದನ್ನು ಮೇಟ್ಟಿ ನಿಲ್ಲಬೇಕಾದರೆ ಗಣಿತದ ಸೂತ್ರ ಹಿಡಿಯವ ಜಾಣ್ಮೆಯನ್ನು ಕಲಿಯುವದು ಅವಶ್ಯವಾಗಿದೆ ಎಂದು ಗೊಟಖಂಡ್ಕಿ ಇಂದಿರಾ ಗಾಂಧಿ ವಸತಿ ಶಾಲೆಯ ಗಣಿತ ವಿಷಯ ಶಿಕ್ಷಕರಾದ ಇಸ್ಮಾಯಿಲ್ ಗೋಗಿ ಅವರು ಹೇಳಿದರು.
ಪಟ್ಟಣದ ಶ್ರೀ ಸಂಗಮೇಶ್ವರ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ವಿಧ್ಯಾರ್ಥಿಗಳಿಗಾಗಿ ಗಣಿತ ವಿಷಯದಲ್ಲಿ ಶೇ. 100 ಅಂಕಗಳಿಗೆ ಸುಲಭ ವಿಧಾನ ಎಂಬ ವಿಷಯ ಕುರಿತು ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಅತಿಥಿ ಶಿಕ್ಷಕರಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಗಣಿತ ವಿಷಯವು ಬಹಳಷ್ಟು ವಿಧ್ಯಾರ್ಥಿಗಳಿಗೆ ಕಷ್ಟಕರ ಎಂದು ಅನಿಸುತ್ತದೆ ಆದರೆ ಅದನ್ನು ಬಿಡಿಸುವ ಸುಲಭ ವಿಧಾನವನ್ನು ಹುಡುಕುವದಿಲ್ಲಾ ಇದರಿಂದ ಪ್ರತಿ ಲೆಕ್ಕವು ಕಠಿಣವಾಗಿ ಕಾಣಿಸುತ್ತದೆ ಗಣಿತ ವಿಷಯದಲ್ಲಿ ಸೂತ್ರ ಲೆಕ್ಕ ಬಿಡಿಸುವ ವಿಧಾನ ತಿಳಿದುಕೊಂಡವರು ಪರಿಕ್ಷೆಯಲ್ಲಿ ಶೇ.100 ಕ್ಕೆ 100 ಅಂಕಗಳನ್ನು ಗಳಿಸಬಹುದಾಗಿದೆ ಎಂದು ಗಣಿತ ವಿಷಯದಲ್ಲಿ ಅಡಗಿಕೊಂಡಿರುವ ಸೂತ್ರಗಳನ್ನು ವಿವರಿಸುತ್ತಾ ಲೆಕ್ಕ ಬಿಡಿಸುವ ವಿಧಾನಗಳನ್ನು ವಿಧ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಇದೇ ಸಮಯದಲ್ಲಿ ಶಿಕ್ಷಕ ಇಸ್ಮಾಯಿಲ್ ಗೋಗಿ ಅವರಿಗೆ ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ಶ್ರೀ ಸಂಗಮೇಶ್ವರ ಪ್ರೌಢ ಶಾಲೆಯ ಗಣಿತ ವಿಷಯ ಶಿಕ್ಷಕರಾದ ಎಚ್.ಬಿ.ಪಾಟೀಲ, ಮತ್ತು ಸಿಬ್ಬಂದಿಗಳಾದ ಬಿ.ಆಯ್.ಹಿರೇಹೊಳಿ, ಎಮ್.ಎಸ್.ರಾಯಗೊಂಡ, ಎಸ್.ಸಿ.ಗುಡಗುಂಟಿ, ಶ್ರೀಮತಿ ಎ.ಸಿ.ಗುಮಶೆಟ್ಟಿ