
ದಾವಣಗೆರೆ. ಮೇ.೧; ಸೂಡನ್ ದೇಶದಿಂದ ದಾವಣಗೆರೆ ಹಕ್ಕಿಪಿಕ್ಕಿ ಜನಾಂಗದವರು ಸುರಕ್ಷಿತವಾಗಿ ಬಂದಿದ್ದಾರೆ ಭಾರತ ಸರ್ಕಾರ ನಮ್ಮವರನ್ನು ಸುರಕ್ಷಿತವಾಗಿ ಕರೆತಂದಿದೆ ಎಂದು
ಕರ್ನಾಟಕ ಹಕ್ಕಿಪಕ್ಕಿ ಬುಡಕಟ್ಟು ಸಂಘಟನೆ ರಾಜ್ಯಾಧ್ಯಕ್ಷ ಪುನೀತ್ ಕುಮಾರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ೨೦ ದಿನಗಳಿಂದ ಸೂಡಾನ್ ದೇಶದಲ್ಲಿ ಯುದ್ದ ನಡೆಯುತ್ತಿದೆ. ರಾಜ್ಯ ಹಾಗೂ ಜಿಲ್ಲೆಯಿಂದ ಸುಮಾರು ೮೦೦ ಕ್ಕೂ ಹೆಚ್ವು ಹಕ್ಕಿಪಿಕ್ಕಿ ಜನಾಂಗದವರು ವ್ಯಾಪಾರಕ್ಕಾಗಿ ತೆರಳಿದ್ದರು.ಆಯುರ್ವೇದ, ಗಿಡಮೂಲಿಕೆ ವ್ಯಾಪಾರಕ್ಕೆಂದು ತೆರಳಿದ್ದರು.ನಮ್ಮ ಜನ
ಆಫ್ರಿಕಾ, ಯುರೋಪ್, ಅಮೇರಿಕಾದೇಶಕ್ಕೆ ಹೊಗುತ್ತಾರೆ ಹೊಟ್ಟೆಪಾಡಿಗಾಗಿ ಹಾಗೂ ಜೀವನಕಟ್ಟಿಕೊಳ್ಳಲು ವ್ಯಾಪಾರ ಮಾಡುತ್ತಾರೆ.ಈ ಬಾರಿ ಹೋದಾಗ ಸೂಡಾನ್ ನಲ್ಲಿ ಯುದ್ದ ಘೋಷಣೆಯಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಕೇಂದ್ರ ಸರ್ಕಾರ ಸುರಕ್ಷಿತವಾಗಿ ನಮ್ಮವರನ್ನು ಕರೆತಂದಿದ್ದಾರೆ ಆದರೆ ನಮ್ಮ ಸರ್ಕಾರಗಳು ನಮಗೆ ಉಳುಮೆಮಾಡಲು ಭೂಮಿ,ನಿವೇಶನ ರಹಿತರಿಗೆ ಹಾಗೂ ಜೀವನ ನಡೆಸಲು ವ್ಯವಸ್ಥೆ ಮಾಡಬೇಕು ಆಗ ಮಾತ್ರ ನಮ್ಮವರು ಹೊಟ್ಟೆಪಾಡಿಗಾಗಿ ಹೋರದೇಶಗಳಿಗೆ ತೆರಳುವುದು ತಪ್ಪುತ್ತದೆ ಎಂದು ಮನವಿ ಮಾಡಿದರು.ಸೂಡಾನ್ ನಲ್ಲಿ ಸಿಲುಕಿ ಸುರಕ್ಷಿತವಾಗಿ ಬಂದಿರುವ ನಂದಕುಮಾರ್ ಮಾತನಾಡಿ ಇದ್ದಕ್ಕಿದ್ದಂತೆ ಯುದ್ದ ನಡೆಯಿತು ನಾವು ಹೊರಗಡೆ ಹೋದಾಗ ನಮ್ಮ ಹಣ ,ಮೊಬೈಲ್ ಕಸಿದುಕೊಂಡ ಘಟನೆಯೂ ಜರುಗಿತ್ತು ಆದರೆ ಹಲ್ಲೆ ಮಾಡಲಿಲ್ಲ ನಮಗೆ ಜೀವಭಯ ಉಂಟಾಗಿತ್ತು.ನಮ್ಮವರನ್ನು ಭಾರತ ಸರ್ಕಾರ ಸುರಕ್ಷಿತವಾಗಿ ಕರೆತಂದಿದೆ.ದಾವಣಗೆರೆ ಜಿಲ್ಲೆಯಿಂದ ಸುಮಾರು ೪೨ ಜನರು ಹೊಗಿದ್ದೆವು.ಈಗ ೩೦ ಜನ ಬಂದಿದ್ದೇವೆ.ಮುಂದಿನ ದಿನಗಳಲ್ಲಿ ಎಲ್ಲರೂ ಸುರಕ್ಷಿತವಾಗಿ ಆಗಮಿಸಲಿದ್ದಾರೆ ಎಂದರು. ಫಾರಿನ್ ಎಂಬೆಸಿಯ ಸ್ವಯಂಸೇವಕರಾದ ದರ್ಶಿತ್ ಮೆಹತಾ ಅವರು ನಮಗೆ ಸಾಕಷ್ಟು ನೆರವು ನೀಡಿದರು ಎಂದರು.ಭವಾನಿ ಎಂಬುವವರು ಮಾತನಾಡಿ ಯುದ್ದ ನಡೆದಾಗ ನಮಗೆ ಚಾಕು ತೋರಿಸಿ ಲೂಟಿ ಮಾಡಿದರು.ನಮ್ಮ ತಾಯಿ ಸೇರಿದಂತೆ ಅನೇಕರು ಸುರಕ್ಷಿತವಾಗಿದ್ದಾರೆ ನಾಳೆ ಅವರೆಲ್ಲರೂ ಆಗಮಿಸಲಿದ್ದಾರೆ.ಸರ್ಕಾರ ನಮಗೆ ಮೀಸಲಾತಿ ಸೇರಿದಂತೆ ಎಲ್ಲಾ ಸೌಲಭ್ಯ ನೀಡಿದರೆ ನಾವು ಸಹ ಉತ್ತಮ ಜೀವನ ನಡೆಸಲು ಸಾಧ್ಯ ಎಂದರು.ಸುದ್ದಿಗೋಷ್ಠಿಯಲ್ಲಿ ಸಾವಂತ್. ಬಿ, ಭಾಸ್ಕರ್ ಉಪಸ್ಥಿತರಿದ್ದರು.