ಸೂಗ ಜಪಾನ್‌ನ ನೂತನ ಪ್ರಧಾನಿ

ಟೋಕಿಯೋ, ಸೆ.೧೬- ಅನಾರೋಗ್ಯದಿಂದ ಪ್ರಧಾನಿ ಸ್ಥಾನಕ್ಕೆ ಶಿಂಜೋ ಅಬೆ ರಾಜೀನಾಮೆ ನೀಡಿದ ಬಳಿಕ ತೆರವಾಗಿದ್ದ ಜಪಾನ್ ಪ್ರಧಾನಿ ಸ್ಥಾನಕ್ಕೆ ಆಡಳಿತರೂಢ ಪಕ್ಷ ಯೋಶಿಹಿಬೆ ಸುಗ ಆಯ್ಕೆಯಾಗಿದ್ದಾರೆ.
ಮುಂದಿನ ಎಂಟು ವರ್ಷಗಳ ಕಾಲ ಸುಗ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಸಂಸತ್ತಿನ ಕೆಳಮನೆಯಲ್ಲಿ ಆಡಳಿತರೂಢ ಪಕ್ಷ ಬಹುಮತ ಹೊಂದಿರುವ ಜೊತೆಗೆ ಪ್ರಾಬಲ್ಯ ಹೊಂದಿದೆ.
ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕ ದೇಶ ಎನ್ನುವ ಹಿರಿಮೆ ಪಡೆದಿರುವ ಜಪಾನ್ ಆರ್ಥಿಕತೆಯನ್ನು ಸರಿದಾರಿಗೆ ತರುವ ಜೊತೆಗೆ ಕರೋನಾ ವೈರಸ್ ನಿಂದ ಎದುರಾಗಿರುವ ಆರ್ಥಿಕ ಹೊಡೆತಕ್ಕೆ ಪುನಶ್ಚೇತನ ಕಂಡುಕೊಳ್ಳುವ ದೊಡ್ಡ ಸವಾಲು ನೂತನ ಪ್ರಧಾನಿಯ ಮುಂದಿದೆ.
ಲಿಬರಲ್ ಡೆಮಾಕ್ರಟಿಕ್ ಪಕ್ಷದ ನಾಯಕನಾಗಿ ಅವರ ಆಯ್ಕೆಯನ್ನು ನಿರ್ಗಮಿತ ಪ್ರಧಾನಿ ಶಿಂಜೋ ಅಬೆ ಪ್ರಕಟಿಸಿದರು.
೭೧ ವರ್ಷದ ಸುಗ ಅವರು, ನಿರ್ಗಮಿತ ಪ್ರಧಾನಿ ಶಿಂಜೋ ಅಬೆ ಅವರ ಬಲಗೈ ಬಂಟನಂತೆ ಕೆಲಸ ಮಾಡಿದ್ದರು.ಇದು ಅವರಿಗೆ ಪ್ರಧಾನಿ ಪಟ್ಟ ಸಿಗಲು ಸಹಕಾರಿಯಾಗಿದೆ.
ಜಪಾನ್ ನ ನೂತನ ಪ್ರಧಾನಿಯಾಗಿ ಸೂಗ ಆಯ್ಕೆಯಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದೆ. ಆರ್ಥಿಕತೆ ಒಳಗಿರುವ ಜಪಾನ ಪರಿಸ್ಥಿತಿಯಲ್ಲಿ ಸುಧಾರಣೆ ಮಾಡಲು ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.
೧೯೯೬ ರಲ್ಲಿ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದ ಅವರು ನಿರ್ಗಮಿತ ಪ್ರಧಾನಿ ಶಿಂಜೋ ಅಬೆ ಅವರಿಗೆ ಬಲಗೈ ಬಂಟ ನಂತೆ ಕಾರ್ಯ ನಿರ್ವಹಿಸಿದ್ದರು ಅವರ ಪ್ರತಿಯೊಂದು ಯಶಸ್ವಿ ಕೆಲಸದ ಹಿಂದೆ ಸುಗ ಇದ್ದರು.
ಪಕ್ಷ ನಿಷ್ಠೆ ಮತ್ತು ನಾಯಕ ನಿಷ್ಟೆಗೆ ಸುಗ ಅವರಿಗೆ ಪ್ರಧಾನಿ ಪಟ್ಟ ಒಲಿದುಬಂದಿದೆ.
ಪ್ರಧಾನಿ ಸುಗ ಆಯ್ಕೆಯ ಸಂದರ್ಭದಲ್ಲಿ ನಿರ್ಗಮಿತ ಪ್ರಧಾನಿ ಶಿಂಜೋ ಅಬೆ, ರಕ್ಷಣಾ ಸಚಿವ ತರೋ ಕೊನೊ ಸೇರಿದಂತೆ ಸಚಿವ ಸಂಪುಟದ ಅನೇಕ ಸದಸ್ಯರು ಈ ವೇಳೆ ಹಾಜರಿದ್ದರು ಅಭಿನಂದಿಸಿದರು