
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.04: ಮೇ 10ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯ ಮತಗಟ್ಟೆ ಕೇಂದ್ರಗಳಿಗೆ ಕೇಂದ್ರ ಚುನಾವಣಾ ಆಯೋಗದ ವೀಕ್ಷಕರಾದ ವಿಜಯಕುಮಾರ್ ಜೆ ಜಯರಾಮನ್ ಭೇಟಿ ನೀಡಿ ಮತಗಟ್ಟೆ ಸ್ಥಿತಿಗತಿ ಕುರಿತು ಪರಿಶೀಲಿಸಿದರು.
ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಪೊಲೀಸ್ ಇಲಾಖೆ ಗುರುತಿಸಿರುವ ಪಟ್ಟಣದ ಒಟ್ಟು 21 ಮತಗಟ್ಟೆಗಳ ಪೈಕಿ 7 ಸೂಕ್ಷ್ಮ ಮತಗಟ್ಟೆಗಳಿದ್ದು ಪಿಂಜಾರಗೇರಿ ಶಾಲೆ, ಸಿಂಧೋಳ್ಳಿ ಕಾಲೋನಿ, ಗುಳೇರಾಯನ ಮಠ, ಉಪ್ಪಾರವಾಡಿ ಶಾಲೆ, ಬೋಯಕೇರಿ ಶಾಲೆ ಹಾಗೂ ದೇವಿನಗರದ ಸತ್ಯನಗರ ಕ್ಯಾಂಪ್ ನ ಮತಗಟ್ಟೆಗಳಿಗೆ ತೆರಳಿ ಮೂಲಭೂತ ಸೌಕರ್ಯ ಹಾಗೂ ಸಿದ್ಧತೆ ಕುರಿತಂತೆ ಸ್ಥಳೀಯ ಆಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಸಿರಿಗೇರಿ ಕ್ರಾಸ್ ಹಾಗೂ ಕರೂರು ಗ್ರಾಮಗಳಿಗೆ ಭೇಟಿ ನೀಡಿ ಮತಗಟ್ಟೆ ಪರಿಶೀಲನೆ ನಡೆಸಿದರು.
ಸಂವಹನಾಧಿಕಾರಿ ಬಿ.ಪಿ ಸುರೇಶ್ ಕುಮಾರ್, ಮುಖ್ಯಾಧಿಕಾರ ಡಿ.ಬಿ. ಈರಣ್ಣ, ಸೆಕ್ಟರಲ್ ಅಧಿಕಾರಿ ಸಾಲಿ ಚಂದ್ರಮೌಳಿ, ಕೆ.ಬಿ. ಮರಿಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಶಿವರಾಜ, ಇಂಜನಿಯರ್ ಸುನಂದ, ಸುಬ್ರಹ್ಮಣ್ಯಂ, ಶೋಭಾ ಇದ್ದರು.