ಸೂಕ್ತ ಸಮಯಕ್ಕೆ ಬಸ್ ಓಡಿಸಲು ಮನವಿ

ಕಲಬುರಗಿ ನ 25: ಶಹಾಬಾದ ತಾಲೂಕಿನ ಹೊನಗುಂಟ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಒದಗಿಸುವಂತೆ ಎಐಡಿಎಸ್‍ಓ ಸಂಘಟನೆ ವತಿಯಿಂದ ಚಿತ್ತಾಪುರ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು
ವಿದ್ಯಾರ್ಥಿಗಳು ಸರಿಯಾಗಿ ವಿದ್ಯಾಭ್ಯಾಸ ಮಾಡಬೇಕಾದರೆ ಅವರಿಗೆ ಸರಿಯಾದ ಸಮಯಕ್ಕೆ ಬಸ್ ಗಳ ಅವಶ್ಯಕತೆ ಇದೆ. ಆದರೆ ಈಗ ಬರುವ ಬಸ್ ಗಳು ವಿದ್ಯಾರ್ಥಿಗಳಿಗೆ ಸಮಯಕ್ಕೆ ತಕ್ಕಂತೆ ಬಾರದ ಕಾರಣ ಖಾಸಗಿ ವಾಹನಗಳಿಗೆ ಹೋಗುವ ಪರಿಸ್ಥಿತಿ ಬಂದಿದೆ. ವಿದ್ಯಾರ್ಥಿಗಳ
ಹತ್ತಿರ ಬಸ್ ಪಾಸ್ ಇದ್ದರೂ ಉಪಯೋಗವಾಗುತ್ತಿಲ್ಲ ಎಂದು ಮನವಿ ಸಲ್ಲಿಸಲಯಿತು. ಎರಡು ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಅಧಿಕಾರಿಗಳು ಆಶ್ವಾಸನೆ ನೀಡಿದರು.ಈ ಸಂದರ್ಭದಲ್ಲಿ ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್ ಕೆ,ತಾಲೂಕ ಅಧ್ಯಕ್ಷ ಕಿರಣ್ ಮಾನೆ, ದೇವರಾಜ ಹೊನಗುಂಟ, ಅಜಯ್ ಎ ಜಿ,ವಿದ್ಯಾರ್ಥಿಗಳಾದ ಮನುಗಿರಿ,ಸಿದ್ದು , ಕೃಷ್ಣ, ರೇವಣಸಿದ್ದು ಇದ್ದರು.