ಸೂಕ್ತ ವ್ಯಾಪಾರಕ್ಕಾಗಿ ಸೂಕ್ತ ಸ್ಥಳ ನೀಡಲು ಮನವಿ

ಧಾರವಾಡ ಡಿ.30-ಹುಬ್ಬಳ್ಳಿ ಧಾರವಾಡದಲ್ಲಿರುವ ಬೀದಿ ಬದಿಯ ಡಬ್ಬಿ ಅಂಗಡಿಗಳ ತೆರವಿಗೆ ಏಕಾಏಕಿ ಆದೇಶ ನೀಡಿರುವುದು ಬಡವರಿಗೆ ಅನ್ಯಾಯವಾಗಿದೆ ಎಂದು ರಾಬರ್ಟ್ ದದ್ದಾಪುರಿ ಹಾಗೂ ಆನಂದ ಜಾಧವ ತಿಳಿಸಿದ್ದಾರೆ.
ಕೋವಿಡ್ 19 ನಿಂದ ಈಗಾಗಲೇ ಜನತೆ ತತ್ತರಿಸಿ ಹೋಗಿದ್ದು, ಅವರ ಬದುಕು ಈಗ ದುಸ್ತರವಾಗಿದೆ.
ಪಾಲಿಕೆ ಈ ನಿರ್ಣಯದಿಂದಾಗಿ ಡಬ್ಬಿ ಅಂಗಡಿಗಳ ತೆರವಿನಿಂದ ಎಲ್ಲ ವರ್ಗಗಳ ಬಡವರ ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಆದ್ದರಿಂದ ಅಂಗಡಿಗಳ ತೆರವಿಗೆ ಸಮಯ ಅವಕಾಶವನ್ನು ಹಾಗೂ ಸೂಕ್ತ ಜಾಗೆಯನ್ನು ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.
ಅಲ್ಲದೇ ಶೀಘ್ರವಾಗಿ ಡಬ್ಬಿ ಅಂಗಡಿಗಳ ವ್ಯಾಪಾರಸ್ಥರಿಗೆ ವ್ಯಾಪಾರಕ್ಕಾಗಿ ಸೂಕ್ತ ಸ್ಥಳವನ್ನು ಜಿಲ್ಲಾಧೀಕಾರಿಗಳು ನಿಗದಿ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರಘುನಾಥ ಲಕ್ಕಣ್ಣನವರ, ಆನಂದ ಮುಶಪ್ಪನವರ ಸೇರಿದಂತೆ ಇನ್ನಿತರರು ಇದ್ದರು.