ಸೂಕ್ತ ಭದ್ರತೆ ನೀಡಲು ಮನವಿ


ಬಾದಾಮಿ,ಮೇ.16: ಕಂದಾಯ ಇಲಾಖೆಯ ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗೆ ಕೋವಿಡ್19 ಸೂಕ್ತ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ಶನಿವಾರ ಕರ್ನಾಟಕ ಗ್ರಾಮಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ತಹಶೀಲ್ದಾರ್ ಸುಹಾಸ ಇಂಗಳೆ ಇವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೊರೊನ ತುರ್ತು ಪರಿಸ್ಥಿತಿಯಲ್ಲಿ ಜನರ ಜೀವರಕ್ಷಣೆಗೆ ನಿಂತಿರುವ ಕಂದಾಯ ಇಲಾಖೆಯ ಕೊರೊನ ವಾರಿಯರ್ಸ್ ಕುಟುಂಬಗಳಿಗೆ ಸೂಕ್ತ ಭದ್ರತೆ ಸಿಗದೇ ಮನೆಯವರಿಗೂ ಸೋಂಕು ವಿಸ್ತರಿಸಿದೆ. ಸರಕಾರ ಸರಿಯಾದ ಸೌಲಭ್ಯ ನೀಡದಿರುವುದು ಬೇಸರ ಮೂಡಿಸಿದೆ. ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿ ಮಂಜುನಾಥ ತೋಟಗೇರ ಇವರ ತಾಯಿ ಈರಮ್ಮ ಶರಣಪ್ಪ ತೋಟಗೇರ ಇವರು ಶುಕ್ರವಾರ ಸೂಕ್ತ ಸೌಲಭ್ಯ ಸಿಗದೇ ಕೋವಿಡ್ ರೋಗದಿಂದ ಮರಣ ಹೊಂದಿದ್ದು, ಇಂತಹ ಪರಿಸ್ಥಿತಿ ಇತರ ಸಿಬ್ಬಂದಿ ಮತ್ತು ಸಿಬ್ಬಂದಿ ಕುಟುಂಬಕ್ಕೆ ಬರದೇ ಇರುವ ರೀತಿಯಲ್ಲಿ ತಾಲೂಕಾಸ್ಪತ್ರೆಯಲ್ಲಿ ಕಂದಾಯ ಸಿಬ್ಬಂದಿಗಳಿಗೆ ಸೂಕ್ತ ಬೆಡ್ ಕಾಯ್ದಿರಿಸುವಂತೆ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಸಲ್ಲಿಸಿದರು. ಯು.ಎಚ್.ಜಾಧವ, ಕಂದಾಯ ಇಲಾಖೆಯ ನೌಕರರು ಹಾಜರಿದ್ದರು.