ಸೂಕ್ತ ಪರಿಹಾರಕ್ಕೆ ಮಲಕಾರಿ ಆಗ್ರಹ


ಧಾರವಾಡ, ನ 22: ಅಕಾಲಿಕ ಮಳೆಯಿಂದಾಗಿ ಹಾನಿಗೀಡಾದ ಬೆಳೆದ ಬೆಳೆ ಹಾಗೂ ಕುಸಿದ ಮನೆಗಳಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ಕಾಂಗ್ರೆಸ್ ಮುಖಂಡ ಬಸವರಾಜ ಮಲಕಾರಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು ನಿರಂತರವಾಗಿ ಸುರಿದ ಮಳೆಯಿಂದಾಗಿ ಮುಂಗಾರು ಬೆಳೆಗಳು ನಾಶವಾಗಿದ್ದು, ಈರುಳ್ಳಿ ಬೆಳೆಯಂತು ಸಂಪೂರ್ಣ ಕೊಳೆತು ಹೋಗಿದ್ದು ರೈತರು ತಲೆಯ ಮೇಲೆ ಕೈ ಇಟ್ಟು ಕೊಳ್ಳುವಂತೆ ಆಗಿದೆ ಎಂದಿದ್ದಾರೆ.
ಸರ್ಕಾರವು ಎನ್.ಡಿ.ಆರ್.ಎಫ್. ಹಾಗೂ ಎಸ್.ಡಿ.ಆರ್.ಎಫ್ ಮಾರ್ಗ ಸೂಚಿಯಂತೆ ಪೂರ್ಣ ಕುಸಿದ ಹಾಗೂ ಭಾಗಶಃ ಕುಸಿದ ಮನೆಗಳ ಪಟ್ಟಿ ಮಾಡಿ ಸೂಕ್ತ ಪರಿಹಾರ ಒದಗಿಸ ಬೇಕು, ಅಲ್ಲದೇ ಕೃಷಿ ಹಾಗೂ ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಬೆಳೆ ಹಾನಿಯ ಕುರಿತು ಪರಿಶೀಲನೆ ನಡೆಸಿ ರೈತರಿಗೆ ಶೀಘ್ರ ಪರಿಹಾರ ದೊರಕಿಸಿಕೊಡಬೇಕು. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಮುಂಗಾರು ಹಾಗೂ ಇಂಗಾರು ಬೆಳೆ ವಿಮೆಯನ್ನು ಕೂಡಲೆ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದಾರೆ.