ಸೂಕ್ತ ಜಾಗೆ ವ್ಯವಸ್ಥೆ ಕಲ್ಪಿಸಲು ಆಗ್ರಹ

ನವಲಗುಂದ,ಏ6: ಕೊರೊನಾ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಈ ಹಿಂದೆ ಬೀದಿ ಬದಿ ವ್ಯಾಪಾರಸ್ಥರನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರ ಮಾಡಲಾಗಿತ್ತು. ವ್ಯಾಪಾರ ಸರಿಯಾಗಿ ಆಗುತ್ತಿಲ್ಲವೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ ಫಲವಾಗಿ ಪುನಃ ಅವರನ್ನು ಗಾಂಧಿ ಮಾರುಕಟ್ಟೆ ಬಳಿಯ ಹಳೆಯ ಪುರಸಭೆ ಆವರಣದಲ್ಲಿ ಕಳೆದೆರಡು ದಿನದಿಂದ ಸ್ಥಳಾಂತರ ಮಾಡಲಾಗಿತ್ತು. ಸ್ಥಳದ ಅಭಾವದ ಹಿನ್ನಲೆಯಲ್ಲಿ ಈಗ ದಿನನಿತ್ಯ ಜಗಳವಾಗುತ್ತಿದೆ, ಜನದಟ್ಟೆಣೆಯಿಂದಾಗಿ ಕೊರೊನಾ ಎರಡನೇ ಅಲೆಯ ಭಯ ಸಾರ್ವಜನಿಕರಲ್ಲಿ ಉಂಟಾಗಿದೆ.
ತರಕಾರಿ ವ್ಯಾಪಾರಸ್ಥರು ಸಿಕ್ಕ ಜಾಗದಲ್ಲಿಯೇ ಸ್ಥಳಾವಕಾಶ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಆದರೆ ಬೀದಿ ಬದಿ ವ್ಯಾಪಾರಸ್ಥರ ಸಂಘದಲ್ಲಿ ತರಕಾರಿ ಮಾರಾಟಗಾರರನ್ನು ಹೊರತು ಪಡಿಸಿ, ಹಣ್ಣು, ಟೆಂಗಿನಕಾಯಿ, ಬಟ್ಟೆ ವ್ಯಾಪಾರಸ್ಥರಿಗೆ ಸ್ಥಳ ಇಲ್ಲದಂತಾದ ಕಾರಣ ಅವರನ್ನು ಪುರಸಭೆಯವರು ತಾತ್ಕಾಲಿಕವಾಗಿ ಪಾರ್ಕಿಂಗ್ ಜಾಗದಲ್ಲಿ ಅವಕಾಶ ಕಲ್ಪಿಸಿಕೊಟ್ಟಿದ್ದರೂ ವ್ಯಾಪಾರಸ್ಥರಲ್ಲಿ ಅಸಮಧಾನ ಕಂಡು ಬಂದಿದೆ.
ಇದರಿಂದಾಗಿ ರೈತರಿಗೆ ಸಾರ್ವಜನಿಕರಿಗೆ ತೊಂದರೆಯಾದ ಕಾರಣ ಬೀದಿ ಬದಿ ವ್ಯಾಪಾರಸ್ಥರಿಗೆ ಶಾಶ್ವತ ಪರಿಹಾರ ಸಿಗುವವರೆಗೆ ಅವರನ್ನು ಪುನಃ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರ ಮಾಡಬೇಕೆಂದು ಒತ್ತಾಯ ಹೆಚ್ಚಾಗಿ ಕೇಳಿ ಬರುತ್ತಿದೆ. ಕೊರೊನಾ ಎರಡನೇ ಅಲೆಯ ಭಯವು ಸಾರ್ವಜನಿಕರನ್ನು ಕಾಡುತ್ತಿದ್ದು ಇಂತಹ ಸಂದರ್ಭದಲ್ಲಿ ಜನದಟ್ಟಣೆಗೆ ಅವಕಾಶ ಕಲ್ಪಿಸುವುದು ಸರಿಯಲ್ಲ ಇದರೋಂದಿಗೆ ಮಾರುಕಟ್ಟೆ ಮಧ್ಯ ಇರುವ ಅಶ್ವಥ್ ನಾರಾಯಣ ಕಟ್ಟೆಗೆ ಬೆಳಗ್ಗೆ ನಮಸ್ಕರಿಸಲು ಹೋಗುವ ಭಕ್ತರಿಗೆ ಸ್ಥಳ ಇಲ್ಲದೆ ಅದಕ್ಕಾಗಿ ಹೋರಾಟ ಮಾಡುವುದು ಅನಿವಾರ್ಯ ಇದರೊಂದಿಗೆ ಪುರಸಭೆ ಅಧಿಕಾರಿ ಅತ್ತ ಗಮನ ಹರಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇಲ್ಲವೇ ಇದಕ್ಕಾಗಿ ಹೋರಾಟಕ್ಕೆ ಇಳಿಯ ಬೇಕಾಗುವುದು ಎಂದು ಸಾರ್ವಜನಿಕರು ಮಾತನಾಡುತ್ತಿದ್ದರು ಮಾರುಕಟ್ಟೆ ಇರುವ ಸ್ಥಳದ ವಿಷಯವಾಗಿ ಜಿಲ್ಲಾಧಿಕಾರಿಗಳು ಸೂಕ್ತ ನಿರ್ಣಯ ಕೈಗೊಳ್ಳಬೇಕೆಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.
ಇದರಿಂದಾಗಿ ಪುರಸಭೆಯವರು ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿದೆ. ಪುರಸಭೆ ಸಿಬ್ಬಂದಿಗಳಿಗೆ ವ್ಯಾಪಾರಸ್ಥರು ಅವಾಚ್ಚವಾಗಿ ನಿಂದಿಸಿದ್ದರಿಂದ ಸಿಬ್ಬಂದಿಗೂ ಕೋಪ ಬಂದಿದೆ. ಪೆÇಲೀಸ್, ಆರೋಗ್ಯ ಇಲಾಖೆಯವರು ಎಷ್ಟೇ ಮನವಿ ಮಾಡಿದರೂ ಜಗಳಾಟ ಮುಂದುವರೆದಿದೆ. ವ್ಯಾಪಾರಸ್ಥರು ಸಹಕರಿಸಿಕೊಂಡು ಹೋಗದಿದ್ದರೆ ಪುನಃ ಅವರನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರ ಮಾಡುವುದು ಅನಿವಾರ್ಯವಾಗಲಿದೆ ಎಂದು ಪುರಸಭೆ ಅಧ್ಯಕ್ಷ ಮಂಜು ಜಾಧವ ಹಾಗೂ ಎಲ್ಲಾ ಪುರಸಭೆಯ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.