ಸೂಕ್ತ ಚಿಕಿತ್ಸೆಯಿಂದ ಮೂರ್ಛೆರೋಗದ ನಿವಾರಣೆ ಸಾಧ್ಯ

ಕಲಬುರಗಿ:ಮಾ.26: ಅಪಸ್ಮಾರ ಅಥವಾ ಮೂರ್ಛೆ ರೋಗವು ಮೆದುಳಿಗೆ ಸಂಬಂಧಪಟ್ಟ ಕಾಯಿಲೆಯಾಗಿದ್ದು, ನಿರಂತರ ತಲೆನೋವು, ಕಣ್ಣುಗಳು ಮಂಜಾಗುವುದು, ಸಂವೇದನಗಳಲ್ಲಿ ಬದಲಾವಣೆ, ತಲೆ ತಿರುಗುವುದು, ವಾಕರಿಕೆ, ಅನಿಯಂತ್ರ್ರಿತ ಚಲನವಲನ, ಅತಿಯಾದ ಬೆವರಿಕೆ, ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ ವಹಿಸದೇ ತಜ್ಞ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆದರೆ ಮೂರ್ಛೆರೋಗ ನಿವಾರಣೆಯಾಗುತ್ತದೆಯೆಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಸಲಹೆ ನೀಡಿದರು.
ನಗರದ ಶೇಖರೋಜಾದಲ್ಲಿರುವ ಶಹಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಶುಕ್ರವಾರ ‘ಮೂರ್ಛೆರೋಗ ಜಾಗೃತಿ ದಿನಾಚರಣೆ’(ಪರ್ಪಲ್ ಡೇ) ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ಅಪಸ್ಮಾರ ಬಂದಾಕ್ಷಣ ರೋಗಿಯ ದೇಹದ ಯಾವುದೇ ಭಾಗಕ್ಕೆ ಅಪಾಯವಾಗದಂತೆ ನೋಡಿಕೊಳ್ಳುವುದು, ಕಲ್ಲು, ನೀರು, ಬೆಂಕಿ ಮುಂತಾದವುಗಳಿಂದ ದೂರವಿರಿಸಬೇಕು. ಉಸಿರಾಟ ಸರಾಗವಾಗುವಂತೆ ನೋಡಿಕೊಳ್ಳುವುದು, ನಾಲಿಗೆ ಕಚ್ಚಿಕೊಳ್ಳದಂತೆ ತಡೆಯವುದು, ವ್ಯಕ್ತಿಯನ್ನು ಸಮತಟ್ಟಾದ ನೆಲದ ಮೇಲೆ ಮಲಗಿಸಬೇಕು, ವ್ಯಕ್ತಿಯ ಸುತ್ತ ಗುಂಪು ಗೂಡದಂತೆ ತಡೆಯಬೇಕು, ವ್ಯಕ್ತಿಯ ಕೈಗೆ ಕೀಲಿ, ರಾಡ್‍ನ್ನು ನೀಡುವದು ಸೇರಿದಂತೆ ಮುಂತಾದ ಪ್ರಥಮ ಚಿಕಿತ್ಸೆಯ ಕ್ರಮಗಳನ್ನು ನೀಡಬೇಕೆಂದು ಮುಂಜಾಗ್ರತಾ ಕ್ರಮಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಶರಣಬಸಪ್ಪ ನರೋಣಿ, ಶಿವಾನಂದ ಮನಮಿ, ಮಲ್ಲಿಕಾರ್ಜುನ ಹೊಸಮನಿ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಪುಷ್ಪಾ ಆರ್.ರತ್ನಹೊನ್ನದ್, ಸಂಗಮ್ಮ ಅತನೂರ, ಗಂಗಾಜ್ಯೋತಿ ಗಂಜಿ, ಗುರುರಾಜ ಕೈನೂರ್, ನಾಗೇಶ್ವರಿ ಮುಗಳಿವಾಡಿ, ರೇಶ್ಮಾ ನಕ್ಕುಂದಿ, ಲಕ್ಷ್ಮಿ ಮೈಲಾರಿ, ಜಗನಾಥ ಗುತ್ತೇದಾರ, ಲಕ್ಷ್ಮಿ ಕೊಂಗೆ, ಅರ್ಚನಾ ಸಿಂಗೆ, ಸುಲೋಚನಾ, ಸಂಗೀತಾ ಡಿ., ಶ್ರೀದೇವಿ, ನಾಗಮ್ಮ, ಅರ್ಚನಾ ಸಿಂಗೆ, ವಿಜುಬಾಯಿ, ನೀತಾ, ಲಕ್ಷ್ಮೀ, ಸಂಗೀತಾ, ಸುಲೋಚನಾ, ಗೌರಮ್ಮ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.