ಸೂಕ್ತಿ ದೀಪಂ*

ಸಮರ್ಥಂಗೆ  ಭಾರಮಿದಮೆಂಬ  ಕಾರ್ಯಮಿಲ್ಲಂ

ಬೇಸಾಯಿಗಂ ತನ್ನ ಹೊಲಂ

 ದೂರ ಹತ್ತಿರಮೆಂಬ ದಿಗಿಲಿಲ್ಲಂ

ವಿದ್ಯಾ ಪಾರಂಗತಂಗೆ ವಿದೇಶಮೆಂಬ ಭಯಮಿಲ್ಲಂ

ಅಡವಿಯೊಳಿರ್ಪ ಸಿಂಗಕ್ಕಂ  ಯಾರುಂ ವಂದಂ

ಸಿಂಹಾಸನದೊಳ್ ಕುಳ್ಳಿರಿಸಿ ಅಭಿಷೇಕಮಂ

ಗೈದು ಸಂಸ್ಕಾರಮಂ ಕುಡುತಿರ್ಪಿಲ್ಲಂ

ತನ್ನೊಳಿರ್ಪ ಚೈತನ್ಯದಿಂದಲಂ ಅದು ಮೃಗಂಗಳ್ಗೆ ರಾಜಂ! 

ಧೀರಂಗೆಂದುಂ ತಾನುಂ ಅಸಹಾಯಕಂ

ಏಕಾಂಗಿಯುಂ ಕೃಶಂ ಎಂಬಂ ಚಿಂತೆಗಳ್ ಇಲ್ಲಂ

ಕಾಡೊಳಿರ್ಪ ಸಿಂಗಕ್ಕಂ ತಾನುಂ ಅಬಲನೆಂಬ 

ಭಾವಸ್ವಪ್ನಂ ಕಾಡಿರ್ದ ಕತೆಗಳಿಲ್ಲಂ! 

ಧನವಿದ್ದಾಗಳ್ ತ್ಯಾಗಗುಣಮೆ ಶ್ರೇಷ್ಠಂ

ಕ್ಷಮಾಗುಣಮೆ ಜೊತೆಯಿರ್ಪುದುಂ ಬಹು ಸೊಗಂ

ದುಃಖವಿರ್ದಾಗಳ್ ದೀನಭಾವಂ ಸಲ್ಲದುಂ

ಸದಾಚಾರ ಪಥಕಂ ಸಮಚಿತ್ತಮೇ ಯೋಗ್ಯಂ

ಸಜ್ಜನರಿರ್ಪರ್ ಸಜ್ಜನಿಕೆಯೊಳ್ ಸಕಲ

ಸಜ್ಜನಕಂ ಅಭಿಮಾನಗುಣಂ ತೋರುತಂ

ಪೂಗಳ್ ತಮ್ಮೊಳಿರ್ಪ ಸೌಗಂಧಮಂ

ಚೆಲ್ಲುವೊಳ್ ಸಜ್ಜನರ ಸಾಕಾರ ನಡೆಯಿರ್ಪುದುಂ

ಚಂದ್ರಾರ್ಕರುಂ  ಪ್ರಕೃತಿಯೊಳ್ ಎಲ್ಲೆಡೆಯುಂ

ಭೇದಮಂಗೈಯದೆ ಬೆಳಗುವೊಲ್

ಸಜ್ಜನರುಂ  ಎಲ್ಲರೊಳ್ ಇರ್ದುಂ  

ಬರಿ ಸದ್ಗುಣಮಂ ತೋರುತಂ ಕಾಯಕವಾಗಿರ್ಪರುಂ

ಪುರುಷಾರ್ಥಕ್ಕಂ  ಲಿಂಗಭೇದವಿಲ್ಲಂ

ಯಾಗಾಧ್ಯಯನಂ ದಾನಂ ತಪಂ ಸತ್ಯಂ 

ಧೈರ್ಯಂ ಕ್ಷಮಾಭಾವ ವಿವೇಕಂ

ನಿರ್ಮೋಹ ನಿಸ್ವಾರ್ಥ ಭಾವವಿರ್ಪ 

ಮನುಜಧರ್ಮಂ ಪಾಲಿಸುವುದದುಮೇ ಪುರುಷಾತ್ಮಂ

ಸಜ್ಜನಮ್ ಸಕಲರಿಗಂ ಆಗುತಿರ್ಪಂ

ಪರದುಃಖಮಂ ಕಂಡುಂ  ಮರುಗುವಂ

ಉಪಕರಿಸಲಾಗದ ಸ್ಥಿತಿಗಂ ಬಹು 

ಕೊರಗುವಂ ಅವಂ  ಸಿರಿಗಂಧಂ  ಮಹಾತ್ಮಂ

***********************************

ರಚನೆ: ಎ. ಸಿ. ಶಶಿಕಲಾ ಶಂಕರಮೂರ್ತಿ

ಶಿಕ್ಷಕಿ, ಸಾಹಿತಿ, ದಾವಣಗೆರೆ.