ಸೂಕ್ತಸ್ಥಾನ ಮೀಸಲಿಗೆ ಡಾ.ಅವಿನಾಶ ಜಾಧವ ಮನವಿ

ಚಿಂಚೋಳಿ ಮೇ 3: ರಾಜ್ಯ ಚುನಾವಣಾ ಆಯೋಗವು ಚಿಂಚೋಳಿ ತಾಲೂಕಿನ ತಾಲೂಕು ಪಂಚಾಯತಿಗೆ ಆಯ್ಕೆಯಾಗುವ ಒಟ್ಟು 17 ಸದಸ್ಯರ ಸಂಖ್ಯೆಯಲ್ಲಿ ಹಿಂದುಳಿದ ವರ್ಗ ಅ ಮತ್ತು ಬ ಇವುಗಳಿಗೆ ಸ್ಥಾನಮೀಸಲಿರಿಸದೇ ಅಧಿಸೂಚನೆ ಹೊರಡಿಸಿದ್ದು ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ಆಕ್ಷೇಪಣೆ ವ್ಯಕ್ತವಾಗಿದೆ.
ಈ ವಿಷಯವನ್ನು ಸಾರ್ವಜನಿಕರ ಹಿತದೃಷ್ಠಿಯಿಂದ ಪುನಃ ಪರಿಶೀಲಿಸಿ ,ಅ ಮತ್ತು ಬ ವರ್ಗಗಳಿಗೆ ಸೂಕ್ತ ಸ್ಥಾನಗಳನ್ನು ಮೀಸಲಿಡುವಂತೆ ಚಿಂಚೋಳಿ ಶಾಸಕರಾದ ಡಾ. ಅವಿನಾಶ ಉಮೇಶ ಜಾಧವ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಅಧಿಸೂಚನೆಯಿಂದ ಅ ಮತ್ತು ಬ ವರ್ಗದ ಜನರ ರಾಜಕೀಯ ಹಕ್ಕನ್ನು ಕಸಿದಂತಾಗಿದೆ.
ಆದ್ದರಿಂದ ಅಧಿಸೂಚನೆಯನ್ನು ಪುನಃ ಪರಿಶೀಲಿಸುವಂತೆ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲು ಅವರು ಕೋರಿದ್ದಾರೆ.