ಸುಸಜ್ಜಿತ ಮೌರ್ಯ ಆಸ್ಪತ್ರೆ ಲೋಕಾರ್ಪಣೆ

ಮೈಸೂರು: ಮಾ.07:- ಬಹುರೋಗಿಗಳಿಗೆ ಸೇವೆಯನ್ನು ಒದಗಿಸುವ ಉದ್ದೇಶದಿಂದ ನೂತನವಾಗಿ ಪ್ರಾರಂಭಗೊಂಡ ಮೌರ್ಯ ಆಸ್ಪತ್ರೆಯ ನೂತನ ಕಟ್ಟಡವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟಿಸಿದರು.
ಈ ವೇಳೆ ಆಸ್ಪತ್ರೆಯನ್ನು ಸಂಪೂರ್ಣ ವೀಕ್ಷಿಸಿ ಜೆ.ಜೆ.ಆನಂದ್ ಅವರಿಗೆ ಶುಭ ಹಾರೈಸಿದರು. ಬಳಿಕ ಮಾತನಾಡಿದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು, ಬೆಳ್ಳಿಗ್ಗೆಯಿಂದ ಬಿಡುವಿಲ್ಲದ ಕಾರ್ಯಕ್ರಮ ಹಾಗೂ ಕೇಂದ್ರದಿಂದ ಸ್ಕ್ರೀನಿಂಗ್ ಸಮಿತಿ ಬೆಂಗಳೂರಿಗೆ ಬಂದಿದ್ದು, ತುರ್ತಾಗಿ ತೆರಳ ಬೇಕಾಗಿರುವ ಹಿನ್ನೆಲೆಯಲ್ಲಿ ತಂದೆಯವರು ಮಾತನಾಡಿಲ್ಲ. ಹಿಂದುಳಿದ ಸಮುದಾಯದವರು 200 ಹಾಸಿಗೆಗಳ ಆಸ್ಪತ್ರೆ ತೆರೆಯುವುದು ಸಾಮಾನ್ಯ ಸಂಗತಿಯಲ್ಲ. ಅವರಿಗೆ ಶುಭವಾಗಲಿ ಜನರಿಗೆ ಉತ್ತಮ ಸೇವೆ ನೀಡಲಿ ಎಂದರು.
ಶಾಸಕ ಮಂಜುನಾಥ್ ಮಾತನಾಡಿ, ಇಂತಹದೊಂದು ಆಸ್ಪತ್ರೆ ಸದ್ಬಳಕೆ ಆಗಲಿ. ಆಸ್ಪತ್ರೆ ಸ್ಥಾಪಿಸಿದ ಆನಂದ್ ಅವರಿಗೆ ಭಗವಂತ ಮತ್ತಷ್ಟು ಶಕ್ತಿ ನೀಡಲಿ ಎಂದರು.
ಆಸ್ಪತ್ರೆಯ ನಿರ್ದೇಶಕರಾದ ಡಾ.ಎ.ವಿ.ರಾಹುಲ್ ಮಾತನಾಡಿ ತುಂಬಾ ಖುಷಿ ಆಗ್ತಿದೆ. ಕೆ.ಆರ್.ನಗರದ ಸಣ್ಣದೊಂದು ಭಾಗದಿಂದ ಡಿಪೆÇ್ಲೀಮಾ ಇಂಜಿನಿಯರಿಂಗ್ ಪೂರೈಸಿ ಮೈಸೂರಿನಲ್ಲಿ ಅಶ್ವಿನಿ ಕೈಗಾರಿಕೆ ಆಗಮಿಸಿ, ಬಹು ಮಾದ್ಯಮದ ಕೈಗಾರಿಕೆಗಳನ್ನು ಸ್ಥಾಪಿಸಿದ್ದು ಮಾತ್ರವಲ್ಲದೆ 200 ಹಾಸಿಗೆಯುಳ್ಳ ಆಸ್ಪತ್ರೆ ಸ್ಥಾಪಿಸಿ ಸಮಾಜಕ್ಕೂ ತಮ್ಮದೇ ಆದ ಕೊಡುಗೆ ನೀಡಿರುವ ಜೆ.ಜೆ.ಆನಂದ್ ಅವರ ಜೀವನ ಯಶೋಗಾಥೆ ಎಲ್ಲರಿಗೂ ದಾರಿದೀಪವಾಗಿದೆ. ಸಾಮಾಜಿಕ ಸೇವೆಗಾಗಿ ಈ ಆಸ್ಪತ್ರೆ ನಿರ್ಮಿಸಿದ್ದು, ಆಸ್ಪತ್ರೆಯೂ ಸಹ ಇತರೆಡೆ ಹೊಲಿಸಿದರೆ ಕಡಿಮೆ ದರದಲ್ಲಿ ಸೌಲಭ್ಯ ಎಂದರು.
ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ,
ದೆಹಲಿಯ ಆಲ್ ಇಂಡಿಯಾ ಮೆಡಿಕಲ್ ಕೌನ್ಸಿಲ್ ಮಾಜಿ ಸದಸ್ಯರಾದ ತ್ಯಾಗಿ, ಆಸ್ಪತ್ರೆ ಮಾಲೀಕರಾದ ಜೆ.ಜೆ.ಆನಂದ್, ಡಾ.ಎ.ವಿ.ರೋಹನ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕೆ.ಆರ್.ನಗರದ ಕಾಂಗ್ರೆಸ್ ಮುಖಂಡ ದೊರೆಸ್ಚಾಮಿ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡರಾದ ಕೆ.ಎಸ್.ಸಣ್ಣಸ್ವಾಮಿ, ಮಾಜಿ ಮೇಯರ್ ಗಳಾದ ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಜಿಪಂ ಮಾಜಿ ಸದಸ್ಯ ಅರುಣ್ ಕುಮಾರ್, ಸೀತಾರಾಮ್, ಮಂಜುಳಾ, ಡಾ.ಜಿ.ಸಿ.ವಸಂತಕುಮಾರಿ, ಆಸ್ಪತ್ರೆ ನಿರ್ದೇಶಕ ಪವನ್ ರಾಜ್, ಕೆ.ಮರಿಗೌಡ,ಮಾವಿನಹಳ್ಳಿ ಸಿದ್ದೇಗೌಡ, ನಜರಬಾದ್ ನಟರಾಜ್, ಭಾಸ್ಕರ್ ಎಲ್.ಗೌಡ, ಕೆ.ಎಸ್.ಶಿವರಾಮ್, ಎಂ.ಶಿವಣ್ಣ, ಕೆಂಪನಾಯಕ, ಹಿನಕಲ್ ಪ್ರಕಾಶ್, ಸುಯೋಗ ಆಸ್ಪತ್ರೆ ಯ ಡಾ.ಸಿ.ಪಿ.ಯೋಗಣ್ಣ, ಸುಮಿತ್ರಾ ಸ್ಟೀಲ್ಸ್ ಮಾಲೀಕ ಕೃಷ್ಣಕುಮಾರ್ ಸಾಗರ್, ಬೀರಿಹುಂಡಿ ಬಸವಣ್ಣ, ಮಾದೇಗೌಡ ಇನ್ನಿತರ ಉಪಸ್ಥಿತರಿದ್ದರು.