ಸುಸಂಸ್ಕøತ ಸಮಾಜ ನಿರ್ಮಾಣಕ್ಕೆ ಮಠಗಳ ಕೊಡುಗೆ ಅಪಾರ : ಶ್ರೀ ರಂಭಾಪುರಿ ಜಗದ್ಗುರುಗಳು

ಕಲಬುರಗಿ:ಮಾ.17:ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಸಂಸ್ಕಾರ ಮತ್ತು ಶಿಕ್ಷಣ ಬಹಳ ಮುಖ್ಯ. ಸುಸಂಸ್ಕøತ ಸದೃಢ ಸಮಾಜ ನಿರ್ಮಾಣಕ್ಕೆ ವೀರಶೈವ ಮಠಗಳ ಕೊಡುಗೆ ಅಪಾರವಾದುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೇಡಂ ತಾಲೂಕಿನ ಮಳಖೇಡ ಮೂಲಾಧಾರ ಸಂಸ್ಥಾನ ಬೃಹನ್ಮಠದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ವೀರಶೈವ ಧರ್ಮ ಸಕಲರಿಗೂ ಒಳಿತನ್ನೇ ಮಾಡುತ್ತಾ ಬಂದಿದೆ. ಜಾತಿಗಿಂತ ನೀತಿ ಬಹಳ ದೊಡ್ಡದು. ಪರಸ್ಪರ ಸಾಮರಸ್ಯ ಸೌಹಾರ್ದತೆ ಬೆಳೆಸುವ ನಿಟ್ಟಿನಲ್ಲಿ ಮಠಗಳು ಶ್ರಮಿಸುತ್ತಾ ಬಂದಿವೆ. ಆಧುನಿಕತೆಯ ಮತ್ತು ವೈಚಾರಿಕತೆ ಹೆಸರಿನಲ್ಲಿ ಭಾರತೀಯ ಉತ್ಕøಷ್ಟ ಸಂಸ್ಕøತಿ ನಾಶಗೊಳ್ಳಬಾರದು. ಅತಿಯಾದ ವೈಚಾರಿಕತೆ ಧರ್ಮದ ವಿನಾಶಕ್ಕೆ ಕಾರಣವಾಗುತ್ತದೆ. ಸತ್ಯ ಶುದ್ಧ ತತ್ವ ತಳಹದಿಯ ಮೇಲೆ ಮಾನವ ಜೀವನ ರೂಪಿತಗೊಂಡರೆ ಬಾಳೆಲ್ಲವು ಉಜ್ವಲ. ಸಂಸ್ಕಾರದ ಕೊರತೆಯಿಂದಾಗಿ ಮಾನವ ಜೀವನ ಅತೃಪ್ತಿ ಅಸಮಾಧಾನದಿಂದ ಕೂಡಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಸಿದ್ಧಾಂತ ಶಿಖಾಮಣಿಯಲ್ಲಿ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಪರಿಪಾಲಿಸದಿದ್ದರೆ ಜೀವನ ವ್ಯರ್ಥವೆಂದು ಎಚ್ಚರಿಸಿದ್ದಾರೆ. ವೀರಶೈವ ಧರ್ಮದಲ್ಲಿ ಗುರುವಿಗೆ ಪ್ರಥಮ ಸ್ಥಾನ ಕಲ್ಪಿಸಿದ್ದಾರೆ. ಮಳಖೇಡ ಮೂಲಾಧಾರ ಸಂಸ್ಥಾನ ಬೃಹನ್ಮಠ ಶ್ರೀ ರಂಭಾಪುರಿ ಪೀಠದ ಶಾಖಾ ಮಠವಾಗಿದ್ದು ವಿದ್ಯಾ ವಿನಯ ವೇದ ಜೋತಿಷ್ಯ ವಿದ್ವಾನ್ ವಿರೂಪಾಕ್ಷ ದೇವರಿಗೆ ಶ್ರೀ ಗುರು ಪಟ್ಟಾಧಿಕಾರ ನೆರವೇರಿಸಿ ನೂತನ ಶ್ರೀಗಳಿಗೆ ‘ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ ಸ್ವಾಮಿಗಳು’ ಎಂಬ ನೂತನ ಅಭಿದಾನದಿಂದ ದಂಡ ಕಮಂಡಲ ಸಮೇತ ಪಂಚ ಮುದ್ರಾ ಅನುಗ್ರಹಿಸಿ ಶ್ರೀ ಪೀಠದಿಂದ ರೇಶ್ಮೆ ಮಡಿ, ಚಿನ್ನದುಂಗುರ, ಸ್ಮರಣಿಕೆ, ಫಲ ಪುಷ್ಪಗಳಿತ್ತು ಶುಭ ಹಾರೈಸಿದರು.
ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು, ಹಾರಕೂಡ ಹಿರೇಮಠದ ಡಾ||ಚನ್ನವೀರ ಶಿವಾಚಾರ್ಯ ಸ್ವಾಮಿಗಳ ಸಮ್ಮುಖದಲ್ಲಿ ಆಗಮಿಸಿದ ಹರ ಗುರು ಚರಮೂರ್ತಿಗಳ ಸಮಕ್ಷಮದಲ್ಲಿ ಸಂಸ್ಕಾರ ನೀಡಿ ಷಟ್ಸ್ಥಲ ಬ್ರಹ್ಮೋಪದೇಶ ಮಾಡಿದರು. ನೂತನ ಶ್ರೀಗಳವರು ತಮ್ಮ ಧರ್ಮ ಸಂದೇಶದಲ್ಲಿ ಮಾತನಾಡಿ ಮಳಖೇಡ ಮೂಲಾಧಾರ ಸಂಸ್ಥಾನ ಬೃಹನ್ಮಠದ ಉಜ್ವಲ ಬೆಳವಣಿಗೆ ಮತ್ತು ಸಕಲ ಸದ್ಭಕ್ತರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುವೆ. ಶ್ರೀ ರಂಭಾಪುರಿ ಜಗದ್ಗುರುಗಳವರ ಆಶೀರ್ವಾದ ಬಲದಿಂದ ವೀರಶೈವ ಧರ್ಮದ ಹಿರಿಮೆ ಗುರುಸ್ಥಲದ ಆದರ್ಶ ಸಂಸ್ಕøತಿ ಬೆಳೆಸುವುದಾಗಿ ಸಂಕಲ್ಪ ಕೈಕೊಂಡರು.
ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಸಮಾರಂಭ ಉದ್ಘಾಟಿಸಿ ಮಾತನಾಡಿ ಧರ್ಮವಿಲ್ಲದೇ ಮನುಷ್ಯ ಬದುಕಿ ಬಾಳಲಾರ. ಸಂಸ್ಕಾರ ಸೌಜನ್ಯ ಕಲಿಸುವ ಆಧ್ಯಾತ್ಮ ಕೇಂದ್ರಗಳು ನಮ್ಮೆಲ್ಲರ ಬಾಳಿಗೆ ಬೆಳಕನ್ನು ತೋರುತ್ತಾ ಬಂದಿವೆ. ಮಳಖೇಡ ಬೃಹನ್ಮಠಕ್ಕೆ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಶ್ರೀ ಮಠದ ಗುರುತ್ವಾಧಿಕಾರ ಸ್ವೀಕರಿಸಿ ನಮ್ಮೆಲ್ಲರಿಗೆ ಆದರ್ಶ ಮಾರ್ಗದರ್ಶನ ನೀಡುತ್ತಾರೆಂದರು. ಹಾರಕೂಡ ಹಿರೇಮಠದ ಡಾ||ಚನ್ನವೀರ ಶಿವಾಚಾರ್ಯರು ಮತ್ತು ಬೃಂಗಿಮಠದ ಕೊಟ್ಟೂರೇಶ್ವರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಸೇಡಂ ಶಿವಶಂಕರ ಶಿವಾಚಾರ್ಯರು, ಕಡಕೋಳ ಡಾ.ರುದ್ರಮುನಿ ಶಿವಾಚಾರ್ಯರು, ಶ್ರೀನಿವಾಸ ಸರಡಗಿಯ ಡಾ. ರೇವಣಸಿದ್ಧೇಶ್ವರ ಶಿವಾಚಾರ್ಯರು, ಸ್ಟೇಷನ್ ಬಬಲಾದ ಶಿವಮೂರ್ತಿ ಶಿವಾಚಾರ್ಯರು, ತೊನಸನಹಳ್ಳಿ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು ಪಾಲ್ಗೊಂಡು ಉಪದೇಶಾಮೃತವನ್ನಿತ್ತರು. ಮಾಜಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಬಾಲರಾಜ ಗುತ್ತೇದಾರ, ಜಿ.ಲಲ್ಲೇಶ, ಶಾಂತಾಬಾಯಿ ಚನ್ನಬಸಪ್ಪ ತಳಕಿನ್, ಶರಣಕುಮಾರ ಮೋದಿ, ಅರುಣಕುಮಾರ ಪಾಟೀಲ, ಶಿವಶರಣಪ್ಪ ಸೀರಿ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಚಂದ್ರಶೆಟ್ಟಿ ಬಂಗಾರ ಮತ್ತು ವಿಜಯಕುಮಾರ ರೆಡ್ಡಿ ನಿರೂಪಿಸಿದರು.
ಸಮಾರಂಭದ ನಂತರ ನೂತನ ಮಠಾಧ್ಯಕ್ಷರಾದ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ ಸ್ವಾಮಿಗಳ ಪಲ್ಲಕ್ಕಿ ಉತ್ಸವ ಸಕಲ ವಾದ್ಯ ವೈಭವ, ಕಳಸ ಕನ್ನಡಿಯೊಂದಿಗೆ ಗ್ರಾಮದಲ್ಲಿ ಸಂಭ್ರಮದಿಂದ ಜರುಗಿತು. ಆಗಮಿಸಿದ ಎಲ್ಲ ಭಕ್ತರಿಗೂ ಅನ್ನ ದಾಸೋಹ ಜರುಗಿತು.