ಸುಸಂಸ್ಕøತ ಸಮಾಜಕ್ಕೆ ಪ್ರಜ್ಞೆ ಅಗತ್ಯ: ಎಸ್.ಎಮ್ ಜನವಾಡಕರ್

ಬೀದರ : ಎ.4: ಸುಸಂಸ್ಕøತ ಸಮಾಜದಿಂದ ಸಧೃಢ ನಾಡು ಕಟ್ಟಲು ಸಾಧ್ಯ. ಅದಕ್ಕಾಗಿ ಜನರಲ್ಲಿ ಜಾಗೃತಿ ಇರಬೇಕಾದುದ್ದು ಅಗತ್ಯವಾಗಿದೆ ಎಂದು ಹಿರಿಯ ಸಾಹಿತಿಗಳಾದ ಎಸ್.ಎಮ್ ಜನವಾಡಕರ್ ಇಂದಿಲ್ಲಿ ತಿಳಿಸಿದರು. ಬ್ಯಾಂಕ ಕಾಲೋನಿಯ ನಾಗಸೇನಾ ಬುದ್ದ ವಿಹಾರದಲ್ಲಿ ಮಾ. 29 ರಿಂದ 02 ರ ವರೆಗೆ ಅಯೋಜಿಸಿದ ಧಮ್ಮ ಪ್ರವಚನ ಸಮಾರೋಪ ಸಮಾರಂಭದಲ್ಲಿ ಪ್ರವಚನ ನೀಡುತ್ತಾ ಮಾತನಾಡಿದರು.

ಬುದ್ದ ಶಾಸನ 5000 ವರ್ಷಗಳ ವರೆಗೆ ಜನರಲ್ಲಿ ಇರುತ್ತದೆ, ಪ್ರಜ್ಞೆ ಶೀಲ ಮತ್ತು ಕರುಣೆ ಜನರಲ್ಲಿ ಮೂಡಿಸುತ್ತದೆ. ಪ್ರಜ್ಞೆಯಿಂದ ಮೈತ್ರಿಯ ಭಾವನೆ ಬರುತ್ತದೆ. ಸಕಲ ಜೀವರಾಶಿಗಳಲ್ಲಿ ಕರುಣೆ ತೋರಬೇಕು. ಅವುಗಳ ಪ್ರಾಣ ಕೂಡ ನಮ್ಮಂತೆಯೇ ಅಮೂಲ್ಯವಾದದ್ದು, ಮೂಢನಂಬಿಕೆಗಳನ್ನು ತೆಗೆದು ಹಾಕಬೇಕೆಂದು ತಿಳಿಸಿದರು. ಆಸೆಯೇ ದುಃಖಕ್ಕೆ ಮೂಲ, ಆಸೆ ಇರಬೇಕು ಆದರೆ ದುರಾಸೆ ಇರಬಾರದೆಂದು ಬಹು ಮಾರ್ಮಿಕವಾಗಿ ಉದಾಹರಣೆ ಸಹಿತ ವಿವರಿಸಿದರು. ಶರೀರ ನಶ್ವರ ಅದರಂತೆ ಭೂಮಿಯ ಮೇಲೆ ಹುಟ್ಟಿದ ಜೀವಿಗೂ ಹಾಗೂ ವಸ್ತುವಿಗೂ ಸಾವು ಖಚಿತ ಎಂದು ತಿಳಿಸಿದರು. ಸಮಾಧಿ, ಚಿತ್ತ, ಅನುಕಂಪ ಇತ್ಯಾದಿಗಳ ಕುರಿತು ಮಾತನಾಡಿದರು. ಎಲ್ಲರಿಗೂ ಮಂದನವಾಗಲು, ಪ್ರಾಣಿ-ಪಕ್ಷಿಗಳಿಗೂ ಕಣ್ಣಿಗೆ ಕಾಣಿಸುವ, ಕಾಣಿಸದೇ ಇರುವ ಎಲ್ಲಾ ಜೀವ-ಜಂತುಗಳಿಗೂ ಮಂಗಳವಾಗಲೆಂದು ತಿಳಿಸುವುದೇ ಬುದ್ಧ ಶಾಸನವೆಂದು ತಿಳಿಸಿದರು.

ಪ್ರತಿಯೊಬ್ಬರು ಬುದ್ಧ ಶಾಸನದ ಬಗ್ಗೆ ಓದಿ ತಿಳಿದುಕೊಳ್ಳಬೇಕು. ಅದರಲ್ಲಿ ತಿಳಿಸಿರುವಂತೆ ನಡೆದು ನಿಬ್ಬಾಣ ಹೊಂದಬೇಕೆಂದು ಹೇಳಿದರು. ಆಣದೂರಿನ ಪೂಜ್ಯ ಜ್ಞಾನಸಾಗರ ಥೇರೊ ಹಾಗೂ ಶ್ರೀಲಂಕಾದ ಪೂಜ್ಯ ವಿವೇಕ ಮಹಾಥೇರೊ ರವರು ಮಾರ್ಚ 29 ರಂದು ಧಮ್ಮ ಪ್ರವಚನಕ್ಕೆ ಚಾಲನೆ ನೀಡಿದರು. ಶೃದ್ಧೆ ಇದ್ದರೆ ಭಯ, ಸಂದೇಹ, ಕೆಟ್ಟ ವಿಚಾರಗಳು ದೂರವಾಗಿ ಸತ್ಸಂಗದ ಕಡೆ ಕರೆದೊಯುತ್ತದೆ ಎಂದು ತಮ್ಮ ಪ್ರವಚನದಲ್ಲಿ ತಿಳಿಸಿದರು. 5 ದಿನಗಳ ಧಮ್ಮ ಪ್ರವಚನದಲ್ಲಿ ಭೀಮಣ್ಣ ಭಾವಿಕಟ್ಟಿ ಬುದ್ಧ ವಂದನಾ ನಡೆಸಿಕೊಟ್ಟರು ಹಾಗೂ ಕಾರ್ಯಕ್ರಮದ ನಿರೂಪಣೆ ಮಾಡಿದರು. ನಾಗಸೇನಾ ಬುದ್ಧವಿಹಾರ ಮತ್ತು ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಡಾ|| ಸುಜಾತಾ ಹೊಸಮನಿ ಹಾಗೂ ಪದಾಧಿಕಾರಿಗಳು, ಸದಸ್ಯರು, ಬ್ಯಾಂಕ್ ಕಾಲೋನಿಯ ಉಪಾಸಕ-ಉಪಾಸಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಂಪ್ರಭು ನಗರದ ಉಪಾಸಕರಾದ ಈಶ್ವರಪ್ಪಾ ಬಾಳೂರಕರ್, ವಿಶ್ವನಾಥ ಸಿಳಕೆ, ಡಾ|| ಎಸ್.ಎಸ್. ಬಾಳೂರಕರ್, ವಿಠಲರಾವ ಮಾಳಗೆ, ಭೀಮಶಾ ನಾಟೀಕರ್, ರಾಜಕುಮಾರ ಕೇಸರಿ, ಮೈಲೂರಿನ ಈಶ್ವರ ಅಲ್ಲಾಪೂರ, ಕಾಶಿನಾಥ ಭಾಸನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಕ್ಕಪ್ಪ ಮೇಲ್ಕೆರಿ ಇವರು ಬುದ್ಧ, ಅಂಬೇಡ್ಕರ್ ಕುರಿತು ಸ್ವರಚಿತ ಪ್ರಾರ್ಥನಾ ಹಾಡುಗಳನ್ನು ಹಾಡಿದರು. ಪ್ರಾರಂಭದಲ್ಲಿ ಸಮಿತಿಯ ಸದಸ್ಯರಾದ ಡಾ|| ಲೋಕೇಶ ಸ್ವಾಗತಿಸಿದರು. ಕೊನೆಯಲ್ಲಿ ಸದಸ್ಯರಾದ ನಾಗನಾಥ ನಿಡೋದಕರ್ ವಂದಿಸಿದರು.