ಧಾರವಾಡ,ಜು.21: ಮನುಷ್ಯ ಸುಸಂಸ್ಕøತ ಬದುಕನ್ನು ರೂಪಿಸಿಕೊಳ್ಳಬೇಕಾದರೆ ಅವನಲ್ಲಿಕಲಾರಾಧನೆಇರಬೇಕುಎಂದುಡಾ. ವೀರಣ್ಣರಾಜೂರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು 134ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನದಉದ್ಘಾಟನೆಯನ್ನು ಮಾಡಿಅವರು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡುತ್ತಾ, ಚಿತ್ರಕಲೆ ಮನುಷ್ಯನ ಮೊದಲ ಭಾಷೆ. ಮಾತನಾಡಲು ಶುರುಮಾಡಿದ್ದೆಚಿತ್ರಕಲೆಯ ಮೂಲಕ.ಮಾನವನ ವಿಕಾಸ ಆದಂತೆ ಬೇರೆಬೇರೆಅಭಿವೃದ್ಧಿ ಮಾಡುವ ಮಾಧ್ಯಮಗಳು ಬಂದವು.ಕಲೆ ಮನುಷ್ಯನ ಹುಟ್ಟಿನೊಂದಿಗೆ, ನಮ್ಮ ಬದುಕಿಗೆಅಂಟಿಕೊಂಡು ಬಂದಿದೆ.ನಮ್ಮ ಬದುಕೇಕಲೆಯ ಮೂಲಕ ವಿಕಾಸಗೊಂಡಿದೆ.ಮಗುವಿನ ಕಲಿಕೆಯೂ ಸಹ ಚಿತ್ರಕಲೆಯ ಮೂಲಕವೇ ಆರಂಭವಾಗಿ ಚಿತ್ರಗಳ ಮೂಲಕವೇ ಭಾಷೆಯನ್ನುಕಲಿಯುವುದುಎಂದರು.
ಮನುಷ್ಯ ಭಾಷೆ ಮೂಲಕ ಅಭಿವ್ಯಕ್ತಿಗೊಳಿಸುವನು ಇಲ್ಲವೆಕಥೆ, ಕವಿತೆ, ನಾಟಕ ಹೀಗೆ ಬರಹದ ಮೂಲಕ ವ್ಯಕ್ತಪಡಿಸುವನು.ಚಿತ್ರದ ಮೂಲಕ ಅಭಿವ್ಯಕ್ತಿಪಡಿಸುವನುರೇಖಾಚಿತ್ರದಿಂದಲೋ, ವರ್ಣಚಿತ್ರದಿಂದಲೋಅಥವಾಇನ್ಯಾವುದೋರೀತಿಯ ಚಿತ್ರಗಳನ್ನು ಬರೆದುಅಭಿವ್ಯಕ್ತಿಪಡಿಸುವನು. ಹೀಗೆ ಏಳು ಕಲೆಗಳ ಮೂಲಕ ಅಂದರೆ ಸಾಹಿತ್ಯ, ಚಿತ್ರಕಲೆ, ನಾಟಕ, ನೃತ್ಯ, ಸಂಗೀತ, ಶಿಲ್ಪ ವಸ್ತುಗಳು ಮನುಷ್ಯನನ್ನು ಸುಸಂಸ್ಕೃತಗೊಳಿಸುವಂತಹವು.
ಒಂದುಕಾದಂಬರಿಓದಿದಅನುಭವಒಂದುಚಿತ್ರ ನೋಡುವುದರಿಂದ ಸಿಗುವುದು.ಇಂದುಚಿತ್ರಕಲೆಒಂದು ಮಣ್ಣಿನಲ್ಲಿ ಮೂಡಿಸುವಗೆರೆಯಿಂದಕಂಪ್ಯೂಟರದವರೆಗೆ ಬೆಳೆದು ನಿಂತಿದೆ.ಚಿತ್ರ ಬಿಡಿಸುವಲ್ಲಿ ಈಗ ಅನೇಕ ಆವಿಷ್ಕಾರಗಳು ಆಗಿವೆ. ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡಿನ ಹೆಮ್ಮೆಆಗಿದ್ದು, ಸದಾ ಹೊಸದನ್ನೇ ಮಾಡುವುದು. ಅಭಿನಂದನೀಯಎಂದರು.
ಕಲಾವಿದರಾದ ಬಿ ಮಾರುತಿ ಮತ್ತು ಹುಬ್ಬಳ್ಳಿಯ ಶಾಮಲಾ ಗುರುಪ್ರಸಾದಅವರು ಮಾತನಾಡಿ, ಸಂಘವು ತನ್ನ 134ನೇ ಸಂಸ್ಥಾನಪನಾ ದಿನಾಚರಣೆ ಸಂದರ್ಭದಲ್ಲಿ ನಮ್ಮ ಕಲೆಗೆ ಮಾನ್ಯತೆ ನೀಡಿಚಿತ್ರಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ, ಪ್ರೋತ್ಸಾಹ ನೀಡಿರುವುದು ಸಂತೋಷತಂದಿದೆ. ಇದಕ್ಕೆ ಸಂಘಕ್ಕೆ ನಾವು ಚಿರಋಣಿಯಾಗಿದ್ದೇವೆಎಂದು ಹೇಳಿದರು.
ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ ಮಾತನಾಡಿದರು.ವೇದಿಕೆ ಮೇಲೆ ಡಾ.ಆನಂದ ಪಾಟೀಲ, ನಿಂಗಣ್ಣಕುಂಟಿ ಉಪಸ್ಥಿತರಿದ್ದರು.
ವೀರಣ್ಣಒಡ್ಡೀನ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಂಕರ ಹಲಗತ್ತಿ ನಿರೂಪಿಸಿದರು.ಗುರು ಹಿರೇಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಶಂಕರ ಕುಂಬಿ, ಡಾ.ಶೈಲಜಾಅಮರಶೆಟ್ಟಿ, ಎಂ.ಎಂ.ಚಿಕ್ಕಮಠ, ಸಿ.ಯು.ಬೆಳ್ಳಕ್ಕಿ, ದೀಪಕ, ಎಸ್.ಕೆ.ಕುಂದರಗಿ, ಸುಜಾತಾ, ಸುಪ್ರಿಯಾ, ಎಸ್.ಕೆ.ಪತ್ತಾರ, ಬಿ.ಎಚ್.ಕುರಿಯವರ, ದೇಸಾಯಿ, ಜಗತಾಪ, ಕುಮಾರ ಕಾಟೇನಹಳ್ಳಿ ಸೇರಿದಂತೆ ಮುಂತಾದವರಿದ್ದರು.