ಸುಸಂಪನ್ನಗೊಂಡ ಶ್ರೀ ಗಾಯತ್ರಿ ಉಪಾಸನೆ ಸಾಮೂಹಿಕ ಪೂಜೆ

ಸಂಜೆವಾಣಿ ವಾರ್ತೆ

ದಾವಣಗೆರೆ, ಆ.೩೧; ದಾವಣಗೆರೆಯ ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಆಧ್ಯಾತ್ಮ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಆಶ್ರಯದಲ್ಲಿ ಆ.31 ರಂದು  ಬೆಳಿಗ್ಗೆ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದಲ್ಲಿ ನೂಲು ಹುಣ್ಣಿಮೆಯ ಪ್ರಯುಕ್ತ ಪ್ರತೀ ತಿಂಗಳು ನಡೆಯುತ್ತಿರುವ ಶ್ರೀ ಗಾಯತ್ರಿ ಉಪಾಸನೆ, ಸಾಮೂಹಿಕ ಪೂಜೆ ಸುಸಂಪನ್ನಗೊAಡಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ.ಪರಿವಾರದ ಅಧ್ಯಕ್ಷರಾದ ಡಾ. ಸುಶೀಲಮ್ಮ, ಗೌರವ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್‌ರವರು ಮತ್ತು ಅವರ ಕುಟುಂಬದವರ ಈ ತಿಂಗಳ ಪೂಜಾ ಸೇವೆ ಹಮ್ಮಿಕೊಂಡಿದ್ದು ಪರಿವಾರದ ಖಜಾಂಚಿ ಪುರುಷೋತ್ತಮ ಪಟೇಲ್, ಸಂಚಾಲಕರಾದ ಭಾವನ್ನಾರಾಯಣ, ವಿ.ಕೃಷ್ಣಮೂರ್ತಿ, ವಾಸುದೇವ ವೀರಭದ್ರರಾವ್, ನಾಗದೀಪ ಖಮಿತ್ಕರ್, ಸತೀಶ್, ಚನ್ನಬಸಪ್ಪ, ಶಿವಕುಮಾರಸ್ವಾಮಿ, ಎಂ.ಎಸ್.ಪ್ರಸಾದ್, ವಿಕ್ರಂ, ಶ್ರೀಮತಿಯವರಾದ ಸುಮಾ ಏಕಾಂತಪ್ಪ, ಭಾರತಿ ರಾಮನಾಥ್ ಖಮಿತ್ಕರ್, ಪ್ರಿಯಾಂಕ, ಸುಮಿತ್ರಾ, ಅನಂತರಾಮ ಕಾರಂತ್ ಮುಂತಾದವರು ಉಪಸ್ಥಿತರಿದ್ದರು.