ಸುಷ್ಮಿತಾಗೆ ಹೃದಯಾಘಾತ ವ್ಯಾಪಕ ಚರ್ಚೆ

ಮುಂಬೈ, ಮಾ. ೫- ಬಾಲಿವುಡ್‌ನಟಿ ಸುಷ್ಮಿತಾ ಸೇನ್ ಹೃದಯಾಘಾತಕ್ಕೆ ಒಳಗಾಗಿದ್ದ ವಿಚಾರ ಇದೀಗ ಸಾಕಷ್ಟು ಚರ್ಚೆಯಲ್ಲಿದೆ.
ನಡುವೆಯೇ, ನನ್ನ ಆರೋಗ್ಯಯುತ ಜೀವನ ಶೈಲಿಯಿಂದಲೇ ಇಂಥ ದೊಡ್ಡ ಮಟ್ಟದ ಹೃದಯಾಘಾತದ ಬಳಿಕವೂ ನಾನು ಬದುಕುಳಿಯಲು ಸಾಧ್ಯವಾಗಿದೆ ಎಂದು ನಟಿ ಹೇಳಿಕೊಂಡಿದ್ದಾರೆ.
ನಿತ್ಯ ವ್ಯಾಯಾಮ, ಜಿಮ್ ಎಂದು ಫಿಟ್ ಆಗಿದ್ದರೂ, ಆಕೆಗೆ ಹೃದಯಾಘಾತ ಸಂಭವಿಸಿದೆ. ಹಾಗಾಗಿ ಅವುಗಳಿಂದ ಪ್ರಯೋಜನವಿಲ್ಲ ಎಂದು ಹಲವರು ಭಾವಿಸಿದ್ದರು. ಈ ಹಿನ್ನೆಲೆ ನಟಿ ಹೃದಯಾಘಾತದ ತೀವ್ರತೆ ಕಡಿಮೆ ಮಾಡಿದ್ದೇ ಜಿಮ್ ಮತ್ತು ಜೀವನಶೈಲಿ ಎಂದಿದ್ದಾರೆ.
ಹೃದಯಾಘಾತವಾದಾಗ ನನಗೂ ಆತಂಕವಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಾದೆ. ನನಗೆ ಆಗ ಆಂಜಿಯೋಪ್ಲ್ಯಾಸ್ಟಿ ಮಾಡಿ, ಸ್ಟಂಟ್ ಹಾಕಿದ್ದಾರೆ. ವೈದ್ಯರು ನನ್ನೊಂದಿಗೆ ಮಾತನಾಡುತ್ತಾ ನನ್ನ ಹೃದಯ ವಿಶಾಲವಾಗಿದೆ ಮತ್ತು ಪ್ರೀತಿಯಿಂದ ತುಂಬಿದೆ ಎಂದಿದ್ದಾರೆ. ಹಾಗಾಗಿ ನಾನು ನೆಮ್ಮದಿಯಿಂದ ಇದ್ದೇನೆ.
ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ’ ಎಂದಿದ್ದಾರೆ.
ಮಾಜಿ ಭುವನ ಸುಂದರಿ ಸುಶ್ಮಿತಾ ಅವರೇ ಹೇಳಿಕೊಂಡಂತೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದಿದ್ದಾರೆ. ಆರೋಗ್ಯದ ಬಗ್ಗೆ ಆತಂಕ ಪಡಬೇಕಿಲ್ಲ ಎಂದು ಅಭಿಮಾನಿಗಳಿಗೂ ಅವರು ಹೇಳಿದ್ದಾರೆ. ವೈದ್ಯರು ಸೂಕ್ತ ರೀತಿಯಲ್ಲಿ ಸ್ಪಂದಿಸಿ ಚಿಕಿತ್ಸೆ ನೀಡಿದ್ದರಿಂದ ಶೇ. ೯೫ ರಷ್ಟು ಗುಣಮುಖರಾಗುತ್ತಿರುವ ವಿಚಾರವನ್ನೂ ಅವರು ತಿಳಿಸಿದ್ದಾರೆ. ತಮ್ಮ ತಂದೆಯು ಈ ಸಮಯದಲ್ಲಿ ಧೈರ್ಯ ನೀಡಿದ್ದನ್ನೂ ಅವರು ಸ್ಮರಿಸಿಕೊಂಡಿದ್ದಾರೆ.
ಡೇಟಿಂಗ್, ಡಿವೋರ್ಸ್ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಿದ್ದ ಸುಶ್ಮಿತಾ, ಇಂಥದ್ದೊಂದು ವಿಷಯವನ್ನು ಹಂಚಿಕೊಂಡಾಗ ಅಭಿಮಾನಿಗಳಿಗೆ ಆತಂಕವಾಗಿದ್ದು ಸಹಜ. ಈಗ ನಿಮ್ಮ ಆರೋಗ್ಯ ಹೇಗಿದೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.