
ಮುಂಬೈ, ಮೇ.೬- ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರು ಕಲರಿಪಯಟ್ಟು ತರಬೇತಿ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಲರಿಪಯಟ್ಟು ಕಲೆ ಕಲಿಸುತ್ತಿರುವ ತರಬೇತುದಾರರನ್ನು ’ಅದ್ಭುತ’ ತರಬೇತುದಾರು. ಇದರಿಂದ ಬೇಗ ಕಲಿಯಲು ಸಹಕಾರಿಯಾಗುತ್ತಿದೆ ಎಂದು ನಟಿ ಸುಶ್ಮಿತಾ ಸೇನ್ ಕರೆದಿದ್ದಾರೆ.
ಸುಶ್ಮಿತಾ ಸೇನ್ ಅವರು ಕ್ರೈಮ್ ಥ್ರಿಲ್ಲರ್ ಸರಣಿ ಆರ್ಯ ಮೂರನೇ ಸೀಸನ್‌ಗೆ ಸಿದ್ಧವಾಗುತ್ತಿದ್ದು ಅದರಲ್ಲಿ ಬರುವ ಸನ್ನಿವೇಶಕ್ಕಾಗಿ ಕಲರಿಪಯಟ್ಟು ಕಲೆ ಕಲಿಯುತ್ತಿದ್ದಾರೆ. ವೆನ್ ಸೀರೀಸ್ ನಲ್ಲಿ ಬರುವ ದೃಶ್ಯಗಳಿಗಾಗಿ ಕಲರಿಯಪಟ್ಟು ಕಲಿಯುತ್ತಿರುವ ಸುಶ್ಮಿತಾ ಸೇನ್ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ರಾಮ್ ಮಾಧ್ವನಿ ವೆಬ್ ಶೋನಲ್ಲಿ ತಮ್ಮ ಪಾತ್ರಕ್ಕಾಗಿ ಕಲರಿಪಯಟ್ಟು ಕಲಿಯುತ್ತಿದ್ದಾರೆ.ಕತ್ತಿವರಸೆಯ ಅಭ್ಯಾಸವನ್ನು ತೋರಿಸುವ ಕಿರು ವೀಡಿಯೊವನ್ನು ಹಂಚಿಕೊಂಡ ಸುಶ್ಮಿತಾ ಸೇನ್ ಆ ವಿಡಿಯೋ ಸಾಮಾಜಿಕ ಜಾಲತಾದಲ್ಲಿ ಬಾರಿ ವೈರಲ್ ಆಗಿದೆ.
ಸುಶ್ಮಿತಾ ಸೇನ್ ತನ್ನ ಎದೆಯ ಮೇಲೆ ತನ್ನ ತೋಳುಗಳನ್ನು ದಾಟಿರುವ ತನ್ನ ಚಿತ್ರವನ್ನು ಸಹ ಪೋಸ್ಟ್ ಮಾಡಿದ್ದಾರೆ.
“ನಾನು ಮಾರ್ಟಿಯಾರ್ಟ್‌ಗಳ ತತ್ವಗಳನ್ನು ಉಪಪ್ರಜ್ಞೆಯಿಂದ ಪ್ರೀತಿಸುತ್ತೇನೆ, ನಾನು ನಿಜವಾಗಿ ಕಲಿಯ ಬಯುತ್ತಿದ್ದೇನೆ ಎಂದಿದ್ದಾರೆ.