ಸುಶೀಲ್ ಮೋದಿ ಕೈ ತಪ್ಪಿದ ಡಿಸಿಎಂ ಕತಿಹಾರ್ ಶಾಸಕನಿಗೆ ಬಿಜೆಪಿ ಪಟ್ಟ

ಪಾಟ್ನಾ, ನ. 15- ಜೆಡಿಯು ಮತ್ತು ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಶಾಸಕಾಂಗ ಪಕ್ಷದ ನಾಯಕರಾಗಿ ನಿತೀಶ್ ಕುಮಾರ್ ಬೆಳಗ್ಗೆ ಆಯ್ಕೆಯಾಗಿದ್ದ ಬೆನ್ನಲ್ಲೇ ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕನಾಗಿ ಕಟಿಯಾರ್ ಕ್ಷೇತ್ರದ ಶಾಸಕ ತಾರಕಿಶೋರ್ ಪ್ರಸಾದ್ ಅವರನ್ನು ಆಯ್ಕೆ ಮಾಡಿದೆ.

ನಿತೀಶ್ ಕುಮಾರ್ ಸರ್ಕಾರದಲ್ಲಿ ಮತ್ತೊಮ್ಮೆ ಉಪಮುಖ್ಯಮಂತ್ರಿ ಯಾಗುತ್ತಾರೆ ಎನ್ನುವ ಸುಶೀಲ್ ಕುಮಾರ್ ಮೋದಿ ಅವರ ಆಸೆಗೆ ಬಿಜೆಪಿಯ ಹೈ ಕಮಾಂಡ್ ತಣ್ಣೀರೆರಚಿದೆ.‌

ನಿತೀಶ್ ಕುಮಾರ್ ಸರ್ಕಾರದಲ್ಲಿ ಸುಶೀಲ್ ಕುಮಾರ್ ಮೋದಿ ಅವರ ಪಾತ್ರವೇನು ಎನ್ನುವ ಬಗ್ಗೆ ಬಿಜೆಪಿ ಹೈಕಮಾಂಡ್ ಇನ್ನೂ ಸ್ಪಷ್ಟಪಡಿಸಿಲ್ಲ.ಆದರೆ ಶಾಸಕಾಂಗ ಪಕ್ಷದ ನಾಯಕನನ್ನು ಮಾತ್ರ ಆಯ್ಕೆ ಮಾಡಿರುವ ಬಿಜೆಪಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಯಾರನ್ನು ಸೂಚಿಸಲಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ

ಕಟಿಯಾರ್ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ತಾರ ಕಿಶೋರ್ ಪ್ರಸಾದ್ ಅವರೇ ಬಹುತೇಕ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ತಾರಕ್ ಕಿಶೋರ್ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ ಆದರೆ ಇನ್ನೂ ಉಪಮುಖ್ಯಮಂತ್ರಿ ಎಂದು ಘೋಷಿಸಿಲ್ಲ ಸಹಜವಾಗಿಯೇ ಅವರು ಉಪ ಮುಖ್ಯಮಂತ್ರಿ ಆಗುವ ಎಲ್ಲಾ ಸಾಧ್ಯತೆಗಳು ಇವೆ.

ಬಿಜೆಪಿ ಉನ್ನತ ಮೂಲಗಳ ಪ್ರಕಾರ ತಾರ ಕಿಶೋರ್ ಪ್ರಸಾದ್ ಅವರೇ ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಖಚಿತಪಡಿಸಿವೆ. ಉಪಮುಖ್ಯಮಂತ್ರಿಯಾಗಿ ಹಣಕಾಸು ಸಚಿವರಾಗಿ ಹನ್ನೊಂದು ವರ್ಷಗಳ ಕಾಲ ಸುಶೀಲ್ ಕುಮಾರ್ ಮೋದಿ ಕಾರ್ಯನಿರ್ವಹಿಸಿದರು ಇದೀಗ ಬಿಜೆಪಿ ಹೈಕಮಾಂಡ್ ಅವರಿಗೆ ಯಾವ ಹುದ್ದೆ ನೀಡಲಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

ಸಂಜೆ 4 ಗಂಟೆಗೆ ಪ್ರಮಾವಚನ:

ಬಿಹಾರದ ಮುಖ್ಯಮಂತ್ರಿಯಾಗಿ ಸತತ ನಾಲ್ಕನೇ ಬಾರಿಗೆ ನಿತೀಶ್ ಕುಮಾರ್ ಅವರು ನಾಳೆ ಸಂಜೆ 4 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಜಭವನದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಬಿಜೆಪಿಯ ತಾರ ಕಿಶೋರ್ ಪ್ರಸಾದ್ ಅವರು ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿವೆ.
ಎನ್‌ಡಿಎ ಮಿತ್ರ ಪಕ್ಷಗಳಿಂದ ಯಾರೆಲ್ಲಾ ಸಚಿವರಾಗಲಿದ್ದಾರೆ ಎನ್ನುವುದು ನಾಳೆ ಬೆಳಗ್ಗೆ ಬೆಳಗ್ಗೆ ಖಚಿತವಾಗಿದೆ