ಸುಶೀಲ್ ಚಂದ್ರ ನೂತನ ಮುಖ್ಯ ಚುನಾವಣಾ ಆಯುಕ್ತ

ನವದೆಹಲಿ, ಏ.13- ಮುಖ್ಯ ಚುನಾವಣಾ ಆಯಕ್ತರಾಗಿ ಸುಶೀಲ್ ಚಂದ್ರ‌ ದೆಹಲಿಯಲ್ಲಿಂದು ಅಧಿಕಾರ ಸ್ವೀಕರಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಸುನಿಲ್ ಅರೋರಾ ನಿವೃತ್ತಿ ಯಾಗಿದ್ದಾರೆ. ಇವರ ಉತ್ತರಾಧಿಕಾರಿಯನ್ನಾಗಿ‌ ಸುಶೀಲ್ ಚಂದ್ರ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಇವರ ಅಧಿಕಾರವಧಿ 2022 ರ ಮೇ 14ರವರೆಗೆ ಅಧಿಕಾರದಲ್ಲಿ ಇರುತ್ತಾರೆ.
ಸುಶಿಲ್ ಅವರು ಚುನಾವಣಾ ಆಯುಕ್ತರಾಗಿ ಫೆ.2019 ರಂದು ಅಧಿಕಾರ ವಹಿಸಿಕೊಂಡಿದ್ದರು.
ಸುಶೀಲ್ ಅವರ ಅಧಿಕಾರಾವಧಿಯಲ್ಲಿ ಗೋವಾ, ಮಣಿಪುರ, ಉತ್ತರಾಖಂಡ, ಪಂಜಾಬ್ ಮತ್ತು ಉತ್ತರ ಪ್ರದೇಶ ವಿಧಾನಸಭೆಗಳಿಗೆ ಚುನಾವಣೆ ನಡೆಸಲಿದ್ದಾರೆ.
ಈ ರಾಜ್ಯಗಳಲ್ಲಿ ಸರ್ಕಾರಗಳ ಅವಧಿ ಮುಂದಿನ ವರ್ಷ ಮಾರ್ಚ್‌ ತಿಂಗಳಲ್ಲಿ ವಿವಿಧ ದಿನಾಂಕಗಳಲ್ಲಿ ಅಂತ್ಯಗೊಳ್ಳಲಿವೆ. ಉತ್ತರಪ್ರದೇಶ ವಿಧಾನಸಭೆ ಅವಧಿ ಮುಂದಿನ ವರ್ಷ ಮೇ 14ರಂದು ಅಂತ್ಯವಾಗಲಿದೆ.