ಸುಶಾಂತ್ ರಾಜಪುತ್ ಗರ್ಲ್ ಫ್ರೆಂಡ್ ಅಂಕಿತಾ

ಅಂಕಿತಾ ಲೋಕಂಡೆ ನಿಮಗೆ ನೆನಪಾಯಿತೇ?
ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪುತ್ ನ ಒಂದು ಕಾಲದ ಗರ್ಲ್ ಫ್ರೆಂಡ್.
ಸುಶಾಂತ್ ಮತ್ತು ಅಂಕಿತಾ ಆರು ವರ್ಷಕಾಲ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದವರು. ಆದರೆ ೨೦೧೬ರಲ್ಲಿ ಇಬ್ಬರ ಬ್ರೇಕಪ್ ಆಯ್ತು. ಅನಂತರ ಅಂಕಿತಾಳ ಬದುಕಿನಲ್ಲಿ ಮುಂಬೈಯ ಬಿಸ್ ನೆಸ್ ಮ್ಯಾನ್ ವಿಕ್ಕಿ ಜೈನ್ ಬಂದಿದ್ದ.


ಅಂಕಿತಾ ಆಗಾಗ ವಿಕ್ಕಿ ಜೊತೆ ತನ್ನ ರೊಮ್ಯಾಂಟಿಕ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಾ ಇರ್ತಾಳೆ .ಈ ವರ್ಷ ಇವರು ವಿವಾಹವಾಗುವ ಅಂದಾಜು ಕೂಡಾ ಮಾಡುತ್ತಿದ್ದಾರಂತೆ .
ಅಂಕಿತಾ ಲೋಖಂಡೆ ಮೊನ್ನೆ ದೀಪಾವಳಿಗೆ ಬಾಯ್ ಫ್ರೆಂಡ್ ವಿಕ್ಕಿ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಕೆಲವು ರೊಮ್ಯಾಂಟಿಕ್ ಫೋಟೋಗಳನ್ನು ಪೋಸ್ಟ್ ಮಾಡಿದ್ದು ಸುಶಾಂತ್ ಸಿಂಗ್ ಫ್ಯಾನ್ಸ್ ಗಳಿಗೆ ಅದು ಇಷ್ಟವಾಗಲಿಲ್ಲ.
“ನೀವು ಸುಶಾಂತ್ ನನ್ನು ಮರೆತಿರಾ? ನಿಮಗೆ ಚೆನ್ನಾಗಿ ನಾಟಕ ಆಡಲು ಬರುತ್ತದೆ…”. “ಸುಶಾಂತ್ ಗೂ ಸ್ವಲ್ಪ ಜಾಗ ಇರಲಿ….”. ಈ ರೀತಿಯ ಕಮೆಂಟುಗಳನ್ನು ಅಂಕಿತಾಳಿಗೆ ಪೋಸ್ಟ್ ಮಾಡಿದ್ದಾರೆ. ಸುಶಾಂತ್ ಮತ್ತು ಅಂಕಿತಾ ಲೋಖಂಡೆ ಆರು ವರ್ಷ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದು ೨೦೧೬ರಲ್ಲಿ ಬ್ರೇಕಪ್ ಆದನಂತರ ಸುಶಾಂತ್ ಬದುಕಿನಲ್ಲಿ ಗರ್ಲ್ ಫ್ರೆಂಡ್ ಆಗಿ ರಿಯಾ ಚಕ್ರವರ್ತಿ ಬಂದಳು.ಆದರೆ ಸುಶಾಂತ್ ರ ಅಸಹಜ ಸಾವಿನ ನಂತರ ಸಿಬಿಐ ತನಿಖೆಯಾಗಿ, ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿ ಜೈಲಿಗೂ ಹೋಗಿದ್ದಳು. ೨೮ ದಿನಗಳ ನಂತರ ಜಾಮೀನು ಸಿಕ್ಕಿ ಹೊರಬಂದಿದ್ದಾಳೆ. ಈಗಲೂ ಸಿಬಿಐ ತನಿಖೆ ಮುಂದುವರಿಯುತ್ತಿದೆ.
೧೪ ಜೂನ್ ೨೦೨೦ ರಂದು ಸುಶಾಂತ್ ರಾಜಪುತ್ ತಮ್ಮ ಅಪಾರ್ಟ್ಮೆಂಟ್ ನಲ್ಲಿ ಶವ ವಾಗಿದ್ದರು.