ಸುಶಾಂತ್ ಬದುಕಿನ ಆಧಾರಿತ ಫಿಲ್ಮ್ ಗಳ ನಿರ್ಮಾಪಕರಿಗೆ ದೆಹಲಿ ಹೈಕೋರ್ಟ್ ನೊಟೀಸ್

ದಿವಂಗತ ನಟ ಸುಶಾಂತ್ ಸಿಂಗ್ ರಾಜಪುತ್ ಅವರ ಬದುಕಿನ ಆಧಾರಿತ ಫಿಲ್ಮ್ ಗಳ ನಿರ್ಮಾಪಕರುಗಳಿಗೆ ದೆಹಲಿ ಹೈಕೋರ್ಟ್ ನೊಟೀಸ್ ಕಳುಹಿಸಿ ಅವರವರ ಫಿಲ್ಮ್ ಗಳ ಬಗ್ಗೆ ಸ್ಪಷ್ಟೀಕರಣವನ್ನು ನೀಡುವಂತೆ ಆದೇಶಿಸಿದೆ.
ಕೋರ್ಟು ಈ ನೋಟಿಸನ್ನು ಸುಶಾಂತ್ ರ ತಂದೆ ಕೆ.ಕೆ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಜಾರಿಗೊಳಿಸಿದೆ. ಸುಶಾಂತ್ ರ ತಂದೆ ಫಿಲ್ಮ್ ಗಳಲ್ಲಿ ತಮ್ಮ ಮಗನು ಬಳಸಿಕೊಂಡಿರುವಂತಹ ವಸ್ತುಗಳ ಬಳಕೆಯನ್ನೂ ತಡೆಯುವಂತೆ ಮನವಿ ಮಾಡಿದ್ದರು. ಜಸ್ಟೀಸ್ ಮನೋಜ್ ಕುಮಾರ್ ಓಹರಿ ಅವರು ಫಿಲ್ಮ್ ಮೇಕರ್ಸ್ ಗಳಿಗೆ ನೊಟೀಸ್ ಜಾರಿಗೊಳಿಸಿ ಮೇ ೨೪ರ ಒಳಗೆ ತಮ್ಮ ಕಡೆಯಿಂದ ಸ್ಪಷ್ಟೀಕರಣವನ್ನು ನೀಡುವಂತೆ ಸೂಚಿಸಿದ್ದಾರೆ.
ಕೆ.ಕೆ ಸಿಂಗ್ ಅವರ ವಕೀಲ ವಿಕಾಸ್ ಸಿಂಗ್ ಅವರು ಕೋರ್ಟ್ ಗೆ ಸಲ್ಲಿಸಿರುವ ಆ ಮನವಿಯಲ್ಲಿ ಸುಶಾಂತ್ ರ ಬದುಕಿನ ಆಧರಿಸಿ ಕೆಲವು ಫಿಲ್ಮ್ ಗಳು- ನ್ಯಾಯ್: ದ ಜಸ್ಟೀಸ್, ಸುಸೈಡ್ ಆರ್ ಮರ್ಡರ್: ಎ ಸ್ಟಾರ್ ವಾಸ್ ಲೋಸ್ಟ್, ಮತ್ತು ಶಶಾಂಕ್….ಇಂತಹ ಫಿಲ್ಮ್ ಗಳನ್ನು ಉಲ್ಲೇಖಿಸಿದ್ದಾರೆ.
ಸುಶಾಂತ್ ಸಾವಿನ ತನಿಖೆ ನಡೆಯುತ್ತಿದೆ. ಹಾಗಿರುವಾಗ ಇಂಥ ಫಿಲ್ಮ್ ಗಳು ಬಂದರೆ ಪ್ರಕರಣದಲ್ಲಿ ನೆಗಟಿವ್ ಪ್ರಭಾವ ಬೀರುವ ಸಾಧ್ಯತೆಗಳಿವೆ. ಈ ಫಿಲ್ಮ್ ಗಳನ್ನು ಒಂದು ವೇಳೆ ನೋಡಿದರೆ ಸುಶಾಂತ್ ಕೇಸ್ ನ ವಿಷಯದಲ್ಲಿ ಜನರ ಭಾವನೆಗಳು ಬದಲಾಗುವ ಸಾಧ್ಯತೆಗಳೂ ಇವೆ ಎಂದಿದ್ದಾರೆ.
ಕೋರ್ಟ್ ಗೆ ನೀಡಿದ ಮನವಿಯಲ್ಲಿ “ಫಿಲ್ಮ್ ಮೇಕರ್ಸ್ ಗಳು ಪರಿಸ್ಥಿತಿಯ ಲಾಭವನ್ನು ಎತ್ತಿಕೊಳ್ಳಲು ನೋಡುತ್ತಿದ್ದಾರೆ. ಅವರು ತಪ್ಪು ನೀತಿಯನ್ನು ಕಾಣಿಸಲು ಪ್ರಯತ್ನಿಸುತ್ತಿದ್ದಾರೆ. ವಿಭಿನ್ನ ನಾಟಕಗಳು, ಫಿಲ್ಮ್ ಗಳು ,ವೆಬ್ ಸಿರೀಸ್ ಗಳು, ಪುಸ್ತಕಗಳು, ಸಂದರ್ಶನಗಳು ಅಥವಾ ಬೇರೆ ಪ್ರಕಟವಾಗಿರುವ ಮೆಟೀರಿಯಲ್ ಗಳು …ಇವೆಲ್ಲ ತಮ್ಮ ಮಗನ ಗೌರವಕ್ಕೆ ಧಕ್ಕೆ ತರುವ ಸಾಧ್ಯತೆಗಳಿವೆ. ಹೀಗಾಗಿ ಸುಶಾಂತ್ ಫ್ಯಾಮಿಲಿಯ ಮಾನಹಾನಿ, ಮಾನಸಿಕ ಕಿರುಕುಳ, ಶೋಷಣೆಗಾಗಿ ಫಿಲ್ಮ್ ಮೇಕರ್ಸ್ ಗಳಿಂದ ತಮಗೆ ಎರಡು ಕೋಟಿ ರೂಪಾಯಿಗೂ ಹೆಚ್ಚಿನ ನಷ್ಟ ಭರಿಸಬೇಕು” ಎಂದು ಆಗ್ರಹಿಸಿದ್ದಾರೆ. “ಸುಶಾಂತ್ ಸಿಂಗ್ ರಾಜಪುತ್ ಒಬ್ಬರು ಬಾಲಿವುಡ್ ನ ಗಣ್ಯ ಕಲಾವಿದ. ಅವರ ಹೆಸರು, ಕ್ಯಾರಿಕೇಚರ್, ಇಮೇಜ್, ಡೈಲಾಗ್ ಡೆಲಿವರಿಯ ಶೈಲಿಯನ್ನು ಕೂಡ ಯಾರೂ ತಪ್ಪಾಗಿ ಬಳಸಿಕೊಳ್ಳುವುದು ಅಧಿಕಾರದ ಉಲ್ಲಂಘನೆಯಾಗಿದೆ. ಈ ಅಧಿಕಾರ ಈಗ ಅವರ ತಂದೆಯ ಬಳಿ ಇದೆ. ಯಾಕೆಂದರೆ ಸುಶಾಂತ್ ಅವರ ಸಾವಿನ ನಂತರ ಇವರಷ್ಟೇ ಕಾನೂನಿನ ವಾರಿಸ್ ಆಗಿದ್ದಾರೆ” ಎಂದು ವಕೀಲರು ಕೋರ್ಟ್ ಗೆ ಹೇಳಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ: ನಟಿ ಪ್ರಿಯಾಂಕಾ ಚೋಪ್ರಾ ಮನವಿ “ಎಲ್ಲರೂ ಮನೆಯಲ್ಲೇ ಇರಿ”

ನಟಿ ಪ್ರಿಯಾಂಕಾ ಚೋಪ್ರಾ ಭಾರತದಲ್ಲಿರುವ ಕೊರೊನಾ ಪ್ರಕರಣಗಳಿಂದ ಬಹಳಷ್ಟು ಟೆನ್ಶನ್ ಮಾಡಿಕೊಂಡಿದ್ದಾರೆ .
ಸೋಶಿಯಲ್ ಮೀಡಿಯಾದಲ್ಲಿ ಅವರು ತನ್ನ ತೀವ್ರ ಚಿಂತೆಯನ್ನು ವ್ಯಕ್ತಪಡಿಸುತ್ತಾ ಜನರಲ್ಲಿ- “ಕೊರೊನಾ ಸೋಂಕಿನಿಂದ ಪಾರಾಗುವಲ್ಲಿ ನಾವೆಲ್ಲಾ ಎಚ್ಚರಿಕೆ ವಹಿಸಬೇಕಾಗಿದೆ.

ಆದಷ್ಟು ಎಲ್ಲರೂ ಮನೆಯಲ್ಲಿ ಇರಿ. ದೇಶದ ಬೇರೆಬೇರೆ ಮೂಲೆಗಳಿಂದ ಬರುತ್ತಿರುವ ಭಯಾನಕ ಚಿತ್ರಗಳನ್ನು ನಾನು ನೋಡುತ್ತಿದ್ದೇನೆ ” ಎಂದಿದ್ದಾರೆ.

ಪ್ರಿಯಾಂಕಾ ತನ್ನ ಅಭಿಮಾನಿಗಳಿಗೆ ಮೆಸೇಜ್ ನಲ್ಲಿ “ಪ್ಲೀಸ್, ಮನೆಯಲ್ಲೇ ಎಲ್ಲರೂ ಇರಿ. ನೀವೆಲ್ಲ ಮನೆಯಲ್ಲೇ ಇರುವಂತೆ ನಾನು ನಿಮ್ಮಲ್ಲಿ ಭಿಕ್ಷೆ ಕೇಳುತ್ತಿದ್ದೇನೆ. ಕೊರೊನಾವನ್ನು ನಿರ್ಲಕ್ಷದಿಂದ ನೋಡಬೇಡಿ .ನಿಮ್ಮ ಸರದಿ ಬಂದಾಗ ತಪ್ಪದೆ ವ್ಯಾಕ್ಸಿನ್ ಚುಚ್ಚಿಸಿಕೊಳ್ಳಿ” ಎಂದಿರುವರು.

ಅಜಯ್ ದೇವಗಣ್ – ಕಾಜೊಲ್ ಪುತ್ರಿಗೆ ಈಗ ೧೮ ವರ್ಷವಂತೆ: ತಂದೆ ತಾಯಿಯ ಶುಭಾಶಯಗಳು

ಬಾಲಿವುಡ್ ಕಲಾವಿದ ದಂಪತಿ ಅಜಯ್ ದೇವಗಣ್ ಮತ್ತು ಕಾಜೋಲ್ ಅವರ ಪುತ್ರಿ ನ್ಯಾಸಾಳಿಗೆ ಈವಾಗ ೧೮ ವರ್ಷ ತುಂಬಿತು. ಅಜಯ್ ಮತ್ತು ಕಾಜೋಲ್ ಮಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಸಲ್ಲಿಸಿದ್ದಾರೆ-
ಅಜಯ್ ಬರೆದಿದ್ದಾರೆ -“ಪ್ರೀತಿಯ ನ್ಯಾಸಾ, ನಿನ್ನ ಜನ್ಮ ದಿನಕ್ಕೆ ಶುಭಾಶಯಗಳು. ಇಂತಹ ಸಣ್ಣ ಸಣ್ಣ ಖುಷಿಗಳು ಇಂದಿನ ಆತಂಕಕಾರಿ ವಾತಾವರಣದಲ್ಲಿ ಉತ್ತಮ ಬ್ರೇಕ್ ನೀಡುತ್ತದೆ”.


ಕಾಜಲ್ ಬರೆದಿದ್ದಾರೆ- “ನೀನು ಜನಿಸಿದಾಗ ನಾನು ತುಂಬಾ ನರ್ವಸ್ ಆಗಿದ್ದೆ .ನಿನ್ನನ್ನು ಬೆಳೆಸುವುದು ಶಾಲೆಯ ಎಕ್ಸಾಮಿನ ರೀತಿಯಲ್ಲಿತ್ತು.ಈಗ ನೀನು ದೊಡ್ಡವಳಾದಿ. ನಿನ್ನ ಶಕ್ತಿಯ ಬಳಕೆಯನ್ನು ಉತ್ತಮ ಕೆಲಸಗಳಿಗಾಗಿ ವಿನಿಯೋಗಿಸು.”


ಅಜಯ್ ದೇವಗಣ್ ಮತ್ತು ಕಾಜೋಲ್ ಅವರಿಗೆ ಇಬ್ಬರು ಮಕ್ಕಳು -ನ್ಯಾಸಾ ಮತ್ತು ಯುಗ್.


೨೦ ಏಪ್ರಿಲ್ ೨೦೦೩ ರಂದು ಜನಿಸಿದ ನ್ಯಾಸಾ ಸೋಶಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯಳಾಗಿದ್ದಾರೆ .ನ್ಯಾಸಾ ಗೆ ತಾಯಿಗಿಂತಲೂ ತಂದೆ ಅಂದರೆ ಹೆಚ್ಚು ಪ್ರೀತಿ. ನ್ಯಾಸಾಳಿಗೆ ಅಭಿನಯಕ್ಕಿಂತ ಕುಕ್ಕಿಂಗ್ ಬಹಳ ಇಷ್ಟ .ಸದ್ಯ ನ್ಯಾಸಾ ಸಿಂಗಾಪುರದಲ್ಲಿ ಓದುತ್ತಿದ್ದಾಳೆ.