ಸುಶಾಂತ್‌ ಪ್ರಕರಣ; ಸಾರಾ ಅಲಿ ಖಾನ್‌ ಸೇರಿ ಮೂವರಿಗೆ ಸಮನ್ಸ್


ಮುಂಬೈ, ಸೆ 21 – ಬಾಲಿವುಡ್‌ ನಟ ಸುಶಾಂತ್‌ ಸಿಂಗ್ ರಾಜಪೂತ್‌ ಸಾವಿನ ಬೆನ್ನಲ್ಲೇ ಬಿಚ್ಚಿಕೊಂಡಿರುವ ಡ್ರಗ್‌ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ಸೋಮವಾರ ನಟಿ ಸಾರಾ ಅಲಿ ಖಾನ್‌, ರಾಕುಲ್‌ ಪ್ರೀತ್‌ ಸಿಂಗ್‌ ಮತ್ತು ಫ್ಯಾಷನ್‌ ಡಿಸೈನರ್ ಸೈಮೋನ್‌ ಕಂಬತ್ತ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದೆ.
ಈ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಿಯಾ ಚಕ್ರವರ್ತಿ ಅವರ ವಿಚಾರಣೆ ವೇಳೆ ಈ ಮೂವರು ಸೆಲೆಬ್ರಿಟಿಗಳ ಹೆಸರು ಪ್ರಸ್ತಾಪವಾಗಿತ್ತು ಎಂದು ತಿಳಿದುಬಂದಿದೆ.
ರಿಯಾ ಚಕ್ರವರ್ತಿಯನ್ನು ಎನ್‌ಸಿಪಿ, ಡ್ರಗ್‌ ಮಾಫಿಯಾದ ಸಕ್ರಿಯ ಸದಸ್ಯರಾಗಿದ್ದರು ಎಂದು ತಿಳಿಸಿದೆ.
ಸಾರಾ ಅಲಿ ಖಾನ್‌ ಕೇದಾರನಾಥ ಚಿತ್ರದಲ್ಲಿ ಸುಶಾಂತ್‌ ಅವರೊಂದಿಗೆ ನಟಿಸಿದ್ದರು