ಸುವರ್ಣ ಮಹೋತ್ಸವ ಕಾರ್ಯಕ್ರಮ


ಚನ್ನಮ್ಮನ ಕಿತೂರ, ಮಾ 28: ಜನಸೇವೆಯೊಂದೇ ಬದುಕಿನ ಪರಮ ಉದ್ಧೇಶವಾಗಿರಬೇಕು. ಅದಕ್ಕೆ ವಯೋಮಿತಿ ಎಂದೂ ಇಲ್ಲ ಎಂದು ಶ್ರೀ.ಷ.ಬ್ರ ಡಾ|| ಪಾಲಾಕ್ಷದೇವರು ನುಡಿದರು.
ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲಿ ್ಲಸತೀಶಣ್ಣಾ ಕಲ್ಯಾಣ ಮಂಟಪದಲಿ ್ಲ ನೆರವೇರಿದ ಸಮೀಪದ ಗಿರಿಯಾಲ ಕೆ.ಎ. ನಿವಾಸಿಗಳಾದ ವೇ.ಮೂ.ಶ್ರೀ ಗುರುಪಾದಯ್ಯ ಸಿ. ಗಾಳಿಮಠ ಹಾಗೂ ಶ್ರೀಮತಿ ಕಮಲಾ ಗುರುಪಾದಯ್ಯ ಗಾಳಿಮಠ ಅವರ 50ನೇ ವರ್ಷದ ವಿವಾಹ ಸುವರ್ಣ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಅಂದಿನ ಕಾಲದಲ್ಲಿ ರಾಜ ಮಹಾರಾಜರು ಯಾವುದೇ ಅಪೇಕ್ಷೆ ಇಲ್ಲದೇ ಸಮಾಜ ಸೇವೆಗಾಗಿ ತಮ್ಮ ವಿವಾಹ ದಿನಗಳನ್ನು ಸ್ಮರಿಸಿಕೊಂಡು ವಯೋವೃದ್ಧದ ನಂತರ ಮರುವಿವಾಹವನ್ನು ಮಾಡಿಕೊಳ್ಳುತ್ತಿದ್ದರು. ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಇಂದಿನ ಯುವ ಪಿಳಿಗೆಗೆ ಅಜ್ಜ-ಅಜ್ಜಿಯರ ಮತ್ತು ನಮ್ಮ ತಂದೆ-ತಾಯಿ ವಿವಾಹ ಹೀಗೆ ಆಗಿರಬಹುದೆಂದು ನೆನಪಿಸಿಕೊಳ್ಳುವುದಕ್ಕೆ ಈ ವೇದಿಕೆ ಸಾಕ್ಷಿ ಎಂದು ಅವರು ನುಡಿದರು.
ವೇ.ಮೂ.ಶ್ರೀ ಗುರುಪಾದಯ್ಯ ಗಾಳಿಮಠ ಮಾತನಾಡಿ ನಾನು ಈ 50ನೇ ಮರುವಿವಾಹ ಮಾಡಿಕೊಳ್ಳುವ ಉದ್ದೇಶವೆಂದರೆ ಹಳೆಯ ಗೆಳೆಯರ ಬಳಗ, ಬಂಧುಗಳು, ನನಗೆ ಕಲಿಸಿದ ಶಿಕ್ಷಕರ ಬಳಗ ನನ್ನ ಜೀವನದಲ್ಲಿ ಮಾರ್ಗದರ್ಶನ ಮಾಡಿದ ಹಿರಿಯರು ಮತ್ತೇ ಕೂಡಿದಂತೆ ಆಗುತ್ತದೆ. ಶ್ರೀಗಳ ಆರ್ಶೀವಾದ ದೊರೆಯುತ್ತದೆ. ನನ್ನ ಮುಂದಿನ ಉದ್ದೇಶ ವೃದ್ಧಾಶ್ರಮ ತೆರೆಯುವುದು. ಗೋಶಾಲೆ ಪ್ರಾರಂಭಿಸುವುದು. ಬಡವರಿಗೆ ಅನ್ನ ನೀಡುವುದು. ಇನ್ನೂ ಹಲವಾರು ಯೋಜನೆ ಇಟ್ಟುಕೊಂಡು ಈ ವಿವಾಹ ಸುವರ್ಣ ಮಹೋತ್ಸವವನ್ನು ಆಯೋಜಿಸಿಕೊಂಡಿದ್ದೇನೆ ಎಂದರು.
ಶ್ರೀ ಮಡಿವಾಳರಾಜಯೋಗಿಂದ್ರ ಮಹಾಸ್ವಾಮಿ ಕಲ್ಮಠ ಕಿತ್ತೂರ ಇವರಿಗೆ ಒಂದು ಲಕ್ಷದೇಣಿಗೆ ಗಿರಿಯಾಲ ಕೆ.ಎ. ಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಒಂದು ಲಕ್ಷ, ಶ್ರೀಧರಿದೇವರ ದೇವಸ್ಥಾನ ಸಾ|| ನಿಚ್ಚಣಕಿ ನಿರ್ಮಾಣಕ್ಕೆ 50 ಸಾವಿರ. ಶ್ರೀ ಉಳವಿ ಚನ್ನಬಸವೇಶ್ವರ ಅನ್ನ ದಾಸೋಹಕ್ಕೆ 51 ಸಾವಿರ, ಶ್ರೀಗುರು ಮಡಿವಾಳೇಶ್ವರ ಮಠ ಸಾ|| ನಿಚ್ಛಣಕಿ ನಿರಂತರ ರುದ್ರಾಭಿಷೇಕಕ್ಕೆ 11 ಸಾವಿರ ಈ ತರದ ದೇಣಿಗೆಯಾಗಿ ಹಣ ನೀಡಿದ್ದೇನೆಂದರು. 23ರ ರಾತ್ರಿ ಗಿರಿಯಾಲ, ಚನ್ನಾಪೂರ ಗ್ರಾಮದ ಬಡಜನರಿಗೆ ಬಟ್ಟೆ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕಿತ್ತೂರ ಸಂಸ್ಥಾನ “ಅರಮನೆ-ಗುರುಮನೆ” ಗ್ರಂಥವನ್ನು ಶ್ರೀಮತಿ ಸುನಂದಾ ನಾ. ಎಮ್ಮಿಲೋಕಾರ್ಪಣೆಗೊಳಿಸಿದರು. ಗಣ್ಯರನ್ನು ಸತ್ಕರಿಸಲಾಯಿತು.
ಶ್ರೀ ಮ.ನಿ. ಜಗದ್ಗುರುಡಾ|| ತೋಂಟದ ಸಿದ್ಧರಾಮ ಸ್ವಾಮಿಗಳು ಸಂಸ್ಥಾನಮಠ ಗದಗ, ಶ್ರೀ.ಮ.ನಿ.ಪ್ರ.ಸ್ವ. ನೀಲಕಂಠ ಮಹಾಸ್ವಾಮಿಗಳು ಸಾ|| ಮುರಗೋಡ, ಶ್ರೀ.ಮ.ನಿ.ಪ್ರ.ಸ್ವ. ಮಡಿವಾಳ ರಾಜಯೋಂದ್ರ ಮಹಾಸ್ವಾಮಿಗಳು ಸಂಸ್ಥಾನ ಕಲ್ಮಠಕಿತ್ತೂರ, ಶ್ರೀ.ಮ.ನಿ.ಪ್ರ.ಸ್ವ.ಪಂಚಾಕ್ಷರಿ ಮಹಾಸ್ವಾಮಿಗಳು ಸಾ|| ನಿಚ್ಛಣಕಿ, ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಹಾಗೂ ಉದ್ಯಮಿ ನಾಸೀರ ಬಾಗವಾನ, ಆಡಳಿತ ಮಂಡಳಿ, ಹಬೀಬ ಶಿಲ್ಲೇದಾರ ಗಣ್ಯರು ಶ್ರೀ.ಮ.ಸ.ಸ.ಕಾರ್ಖಾನೆ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.
ಶಿಕ್ಷಕ ವಿವೇಕ ಕುರಗುಂದ ನಿರೂಪಿಸಿದರು. ಪ್ರಾಸ್ತಾವಿಕ ನಿವೃತ್ತ ಉಪನ್ಯಾಸಕ ಸಿ.ಜಿ.ದಳವಾಯಿ ಸ್ವಾಗತಿಸಿದರು. ವಿಶ್ರಾಂತ ಪ್ರಾಚಾರ್ಯ ಶ್ರೀಕಾಂತ ದಳವಾಯಿ ವಂದಿಸಿದರು.